ಸಂಭಲ (ಉತ್ತರ ಪ್ರದೇಶ) ನಲ್ಲಿ ನಮಾಜು ಪಠಣಕ್ಕಾಗಿ ಮಸೀದಿಗೆ ಹೋಗಿದ್ದಕ್ಕಾಗಿ ಭಾಜಪದ ಮುಸಲ್ಮಾನ ನಾಯಕನಿಗೆ ಥಳಿತ !

ಸಂಭಲ (ಉತ್ತರಪ್ರದೇಶ) – ನಮಾಜು ಪಠಣ ಮಾಡಲು ಮಸೀದಿಗೆ ತೆರಳಿದ್ದ ಭಾಜಪದ ಮುಸಲ್ಮಾನ ಮುಖಂಡನನ್ನು ಇಲ್ಲಿನ ಮುಸ್ಲಿಮರು ಅಮಾನವೀಯವಾಗಿ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ನಾಯಕನ ಹೆಸರು ಶಾಹ ಆಲಂ ಎಂದಿದೆ.

೧. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆ ವೇಳೆ ಆಲಂ ಭಾಜಪಕ್ಕೆ ಸೇರಿದ್ದರು. ಅವರು ಇಲ್ಲಿನ ಜಿಲ್ಲಾ ಭಾಜಪದ ಅಲ್ಪಸಂಖ್ಯಾತ ಮೋರ್ಚಾದ ಸಹಅಧ್ಯಕ್ಷರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಆಲಂ ಅವರು, “ನನ್ನ ಜೊತೆಗೆ ನನ್ನ ಸಹೋದರ ಮತ್ತು ಮೊಮ್ಮಗನಿಗೂ ಥಳಿಸಿದ್ದಾರೆ. ನಾವು ಓಡಿಹೋಗಲು ಪ್ರಯತ್ನಿಸಿದಾಗ, ನಮ್ಮನ್ನು ಬೆನ್ನಟ್ಟಿ ಥಳಿಸಿದ್ದಾರೆ. ‘ನಾನು ಭಾಜಪವನ್ನು ಸೇರಿದ್ದೇನೆ’ ಎಂಬುದೇ ಹಲ್ಲೆಗೆ ಕಾರಣ.”, ಎಂದಿದ್ದಾರೆ.

೨. ಮತ್ತೊಂದೆಡೆ, ಪೊಲೀಸರು ಈ ಹೋಡೆದಾಟದ ಹಿಂದೆ ರಾಜಕೀಯ ಕಾರಣವಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿ, ಅಂಗಡಿಯ ಬಾಡಿಗೆ ವಿಷಯದಲ್ಲಿ ಥಳಿಸಲಾಗಿದೆ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿದ್ದರೂ ಮತಾಂಧರು ಇಂತಹ ಕೃತ್ಯ ಮಾಡಲು ಹೇಗೆ ಧೈರ್ಯ ತೋರುತ್ತಾರೆ ?