ಹಿಂದೂ ಧರ್ಮವನ್ನು ಸ್ವೀಕರಿಸಿದ್ದ ಚಲನಚಿತ್ರದ ನಿರ್ದೇಶಕ ಅಲಿ ಅಕ್ಬರ್ ಇವರಿಂದ ಭಾಜಪಕ್ಕೆ ರಾಜೀನಾಮೆ !

ಚಲನಚಿತ್ರದ ನಿರ್ದೇಶಕ ಅಲಿ ಅಕ್ಬರ್

ತಿರುವನಂತಪುರಂ (ಕೇರಳ) – ಕೇರಳದ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಭಾಜಪದ ಕೇರಳ ಪ್ರದೇಶದ ಕಾರ್ಯಕಾರಿಣಿಯ ಸದಸ್ಯರಾದ ಅಲಿ ಅಕ್ಬರ್ ಉಪಾಖ್ಯ ರಾಮಸಿಂಹನ್ ಅಬೂಬಕಾರ್ ಅವರು ಜೂನ್ ೧೬ ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ವಾರಗಳಿಂದ ಭಾಜಪವನ್ನು ತೊರೆದ ಚಲನಚಿತ್ರರಂಗದ ವ್ಯಕ್ತಿಗಳಲ್ಲಿ ಇವರು ಮೂರನೆಯವರಾಗಿದ್ದಾರೆ. ಕಳೆದ ವರ್ಷ ಅವರು ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ರಾಜೀನಾಮೆ ನೀಡುವ ವೇಳೆ ಮಾತನಾಡಿದ ಅವರು”ನಾನು ಯಾವುದೇ ರಾಜಕೀಯದ ಗುಲಾಮನಲ್ಲ. ಈಗ ಎಲ್ಲರಿಂದ ಮುಕ್ತನಾಗಿದ್ದು ಧರ್ಮದೊಂದಿಗೆ ಮಾತ್ರ ನಿಂತಿದ್ದೇನೆ !” ಎಂದು ಹೇಳಿದರು.

೧. ಅಕ್ಬರ್ ಅವರು ೧೯೨೧ ರ ಮಲಬಾರ್ ದಂಗೆಯನ್ನು ಆಧರಿಸಿ `ಹಿಂದೂ ಸೈಡ್ ಆಫ್ ದಿ ರೆಬೆಲಿಯನ್’ ಎಂಬ ಚಲನಚಿತ್ರದ ಘೋಷಣೆಯನ್ನು ಮಾಡಿದ್ದರು.

೨. ಕಳೆದ ವಾರವಷ್ಟೇ ಖ್ಯಾತ ಮಲಯಾಳಂ ಚಲನಚಿತ್ರ ನಿರ್ದೇಶಕ ರಾಜಸೇನರು ಭಾಜಪ ಪ್ರದೇಶ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದ್ದರು. ” ಒಬ್ಬ ಕಲಾವಿದನಾಗಿ, ರಾಜಕಾರಣಿಯಾಗಿ ಭಾಜಪದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಹಾಗಾಗಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಸೇರಲು ನಿರ್ಧರಿಸಿದ್ದೇನೆ. ಕಲಾವಿದರಿಗೆ ಅಲ್ಲಿ ಸ್ವಾತಂತ್ರ್ಯ ನೀಡಲಾಗುತ್ತದೆ!’ ಎಂದು ಈ ರೀತಿ ಬಾಜಪ ತೊರೆದ ಬಳಿಕ ರಾಜಸೇನನ್ ಅವರು ಪ್ರತಿಕ್ರಿಯಿಸಿದ್ದಾರೆ.

೩. ಚಲನಚಿತ್ರನಟ ಭೀಮನ್ ರಘು ಅವರು ಸಹ ಭಾಜಪವನ್ನು ತೊರೆಯುವ ಸುಳಿವನ್ನು ನೀಡಿದ್ದಾರೆ.

ಯಾವ ಕಲಾವಿದರು ಭಾಜಪವನ್ನು ಸೇರಿದ್ದರೋ, ಅವರಿಗೆಲ್ಲ ಕೇರಳದ ಚಲನಚಿತ್ರರಂಗದಲ್ಲಿ ಬಹಿಷ್ಕಾರವನ್ನು ಎದುರಿಸಬೇಕಾಗುತ್ತಿತ್ತು ! – ಭಾಜಪ

ಭಾಜಪದ ವಕ್ತಾರ ನಾರಾಯಣನ್ ನಂಬೂತಿರಿ ಅವರು ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸುವಾಗ ಹೀಗೇಂದರು, ‘ಅಲಿ ಅಕ್ಬರ್‌ರವರು ಕಳೆದ ಕೆಲ ದಿನಗಳಿಂದ ಪಕ್ಷದಲ್ಲಿ ಸಕ್ರಿಯರಾಗಿರಲಿಲ್ಲ. ಪಕ್ಷ ತೊರೆಯುವ ಅವರ ನಿರ್ಧಾರ ವೈಯಕ್ತಿಕವಾಗಿದೆ. ಅವರು ಕಲಾವಿದರಾಗಿ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರರು. ರಾಜಸೇನನ್ ಅವರಿಗೆ ಪಕ್ಷದಿಂದ ಏನು ಅಪೇಕ್ಷಿತವಿತ್ತು ಎಂಬುದು ನಮಗೆ ತಿಳಿದಿಲ್ಲ. ಭಾಜಪವನ್ನು ಸೇರಿದ ಕಲಾವಿದರಿಗೆ ಕೇರಳ ಚಿತ್ರರಂಗದಲ್ಲಿ ಬಹಿಷ್ಕಾರವನ್ನು ಎದುರಿಸಬೇಕಾಗಿ ಬರುತ್ತಿತ್ತು. ಪಕ್ಷ ಸೇರಿದ ನಂತರ ರಾಜಸೇನನ್ ಒಮ್ಮೆ ಈ ಅಂಶವನ್ನು ಹೇಳಿದ್ದರು. ಅಲ್ಲದೇ ಸುರೇಶ ಗೋಪಿ ಅವರು ಭಾಜಪಕ್ಕೆ ಸೇರಿದ ನಂತರ ಅವರು ನಟಿಸಿದ ಚಲನಚಿತ್ರದ ವಿರುದ್ಧ ಪ್ರಚಾರ ನಡೆಸಲಾಗಿತ್ತು !

(ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕತ್ತು ಹಿಸುಕುವವರು ಈ ಬಗ್ಗೆ ಏಕೆ ಮಾತನಾಡುವುದಿಲ್ಲ. ಮಲಯಾಳಂ ಚಲನಚಿತ್ರೋದ್ಯಮದ ಮೇಲೆ ಕಮ್ಯುನಿಸ್ಟ್‌ರವರ ಹಿಡಿತದಿಂದಾಗಿ, ಭಾಜಪ ಸೇರುವ ಕಲಾವಿದರನ್ನು ಬಹಿಷ್ಕರಿಸಲಾಗುತ್ತದೆ ಎಂಬುದನ್ನು ಗಮನಿಸಿ ! – ಸಂಪಾದಕರು)