ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ. ಈ ಮೀಸಲಾತಿಗೆ ಅಲ್ಲಿನ ಸ್ಥಳೀಯ ನ್ಯಾಯವಾದಿಗಳು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ವಿರೋಧಿಸಿದ್ದಾರೆ. ಈ ವಿಷಯದ ಸವಿಸ್ತಾರ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
೧. ಮುಸಲ್ಮಾನರ ಮೇಲೆ ಸಾಮ್ಯವಾದಿಗಳಿಗಿರುವ ವಿಶೇಷ ಪ್ರೇಮ !
ಕೇರಳ ರಾಜ್ಯದಲ್ಲಿ ಭಾರತೀಯ ಆಡಳಿತ್ಮಾತಕ ಸೇವೆ (ಐ.ಎ.ಎಸ್.) ಅಥವಾ ಕೇರಳ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ.) ಇವುಗಳ ಪರೀಕ್ಷೆಗೆ ಕುಳಿತುಕೊಳ್ಳಲು ಸರಕಾರದ ವತಿಯಿಂದ ನಡೆಸಲಾಗುತ್ತಿರುವ ತರಬೇತಿ ಕೇಂದ್ರಗಳಲ್ಲಿ (‘ಕೋಚಿಂಗ್ ಸೆಂಟರ್ಗಳಲ್ಲಿ) ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತದೆ. ಇದರಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಕೇರಳ ಸರಕಾರವು ಮೀಸಲಾತಿಯನ್ನು ಇಟ್ಟಿದೆ. ಅದರಲ್ಲಿ ಶೇ. ೫೦ ರಷ್ಟು ಮುಸಲ್ಮಾನರಿಗೆ ಹಾಗೂ ಉಳಿದ ಶೇ. ೧೦ ರಲ್ಲಿ ಇತರ ಎಲ್ಲ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಮತ್ತು ಅವರಿಂದ ಶೈಕ್ಷಣಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಇಲ್ಲಿ ಸರಕಾರ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಎಂದು ಎರಡು ಗುಂಪುಗಳನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಭೇದಭಾವ ಮಾಡಿದೆ. ನಿಜವಾಗಿ ನೋಡಿದರೆ ಸಂವಿಧಾನದ ಪರಿಚ್ಛೇದ ೧೪ ರಿಂದ ೧೬ ಕ್ಕನುಸಾರ ಭೇದಭಾವವನ್ನು ಮಾಡಲು ಆಗುವುದಿಲ್ಲ. ಅಲ್ಪಸಂಖ್ಯಾತರಿಗಾಗಿ ಪರಿಚ್ಛೇದ ೨೯ ಮತ್ತು ೩೦ ರಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಬಹುದು, ಆದರೆ ಈ ವ್ಯವಸ್ಥೆಯ ಲಾಭವನ್ನು ಕೇವಲ ಒಂದು ಸಮಾಜದ ಅಲ್ಪಸಂಖ್ಯಾತರಿಗೆ ಕೊಡುವುದು ಕಾನೂನುಬಾಹಿರವಾಗಿದೆ. ಇಲ್ಲಿ ಮುಸಲ್ಮಾನರಿಗೆ ಕೇವಲ ಪ್ರವೇಶಾತಿಗಾಗಿ ಮಾತ್ರವಲ್ಲ ಶೈಕ್ಷಣಿಕ ಶುಲ್ಕದಲ್ಲಿಯೂ ಸಂಪೂರ್ಣ ರಿಯಾಯಿತಿ ಇದೆ.
೨. ಸರಕಾರದ ನಿರ್ಣಯದ ವಿರುದ್ಧ ಇಬ್ಬರು ನ್ಯಾಯವಾದಿಗಳಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ !
ಕೇರಳ ಸರಕಾರದ ಈ ಮೇಲಿನ ನಿರ್ಣಯದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದ ಇಬ್ಬರು ವಕೀಲರಾದ ಎಸ್. ಪ್ರಸಂಥ ಹಾಗೂ ಕೆ. ಅರ್ಜುನ ವೇಣುಗೋಪಾಲ ಇವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರು ಈ ಅರ್ಜಿಯಲ್ಲಿ ಮುಂದಿನಂತೆ ಹೇಳಿದ್ದಾರೆ. ೨೦೧೦ ರಲ್ಲಿ ‘ಇನ್ಸ್‌ಟಿಟ್ಯೂಟ್ ಆಫ್ ಕರಿಯರ್ ಸ್ಟಡೀಸ್ ಎಂಡ್ ರಿಸರ್ಚ್ ಎಂಬ ಸರಕಾರದಿಂದ ನಡೆಸಲ್ಪಡುವ ಕೋಚಿಂಗ್ ಸೆಂಟರ್‌ಗಳಲ್ಲಿ ಮುಸಲ್ಮಾನರಿಗೆ ಶೇ. ೫೦ ರಷ್ಟು ಮೀಸಲಾತಿ ನೀಡಲಾಗಿದೆ, ಅದೇ ರೀತಿ ಈ ಸೆಂಟರ್‌ಗಳಲ್ಲಿ ಮುಸಲ್ಮಾನರಿಗೆ ಪ್ರವೇಶ ನೀಡಿದ ನಂತರ ಅವರು ಕೋಚಿಂಗ್ ಸೆಂಟರ್ಸ್‌ನ ೬೧ ಸಾವಿರ ರೂಪಾಯಿಗಳ ಶುಲ್ಕವನ್ನು ತುಂಬಿಸುವ ಅವಶ್ಯಕತೆಯಿಲ್ಲ, ಎಂಬ ಸುತ್ತೋಲೆಯನ್ನು ಕೇರಳ ಸರಕಾರ ಹೊರಡಿಸಿತು. ಯಾವುದಾದರೊಂದು ಪಂಥ ಅಥವಾ ಪಂಗಡಕ್ಕೆ ಧರ್ಮದ ಆಧಾರದಲ್ಲಿ ಶೇ. ೫೦ ರಷ್ಟು ಮೀಸಲಾತಿ ನೀಡುವುದು ಕಾನೂನುಬಾಹಿರವಾಗಿದೆ. ಅದಕ್ಕೆ ಸಂವಿಧಾನದ ಆಧಾರವಿಲ್ಲ ಹಾಗೂ ಅದು ಸಂವಿಧಾನ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ವಿರುದ್ಧವಾಗಿದೆ. ಕೇರಳ ಸರಕಾರ ಶೇ. ೫೦ ರಷ್ಟು ಮೀಸಲಾತಿ ಮುಸಲ್ಮಾನರಿಗೆ, ಶೇ. ೮ ರಷ್ಟು ಮೀಸಲಾತಿ ಪರಿಶಿಷ್ಟ ಜಾತಿಗಳಿಗೆ ಹಾಗೂ ಶೇ. ೨ ರಷ್ಟು ಮೀಸಲಾತಿ ಪರಿಶಿಷ್ಟ ಪಂಗಡಗಳಿಗೆ ಹೀಗೆ ಒಟ್ಟು ಶೇ. ೬೦ ರಷ್ಟು ಮೀಸಲಾತಿಯನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗನುಸಾರ ಶೇ. ೫೦ ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು. ಇದರ ಮೂಲಕವೂ ಕೇರಳ ಸರಕಾರವು ೨ ಅಲ್ಪಸಂಖ್ಯಾತ ಗುಂಪುಗಳಲ್ಲಿ ಭೇದಭಾವ ಮಾಡುತ್ತಿದೆ. ಕೇರಳ ಉಚ್ಚ ನ್ಯಾಯಾಲಯದಲ್ಲಿ ೧೮.೫.೨೦೨೨ ರಂದು ಈ ಅರ್ಜಿಯ ವಿಚಾರಣೆ ಆಯಿತು ಹಾಗೂ ಸರಕಾರಕ್ಕೆ ‘ಕಾರಣಕೇಳಿ ನೋಟೀಸ್ ಜಾರಿ ಮಾಡಲು ಆದೇಶವನ್ನು ನೀಡಲಾಯಿತು.
೩. ಮುಸಲ್ಮಾನರಿಗೆ ವಿದ್ಯಾರ್ಥಿ ವೇತನ ನೀಡುವ ಕೇರಳ ಸರಕಾರದ ನಿರ್ಣಯಕ್ಕೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ಕಪಾಳಮೋಕ್ಷ !
ಈ ಹಿಂದೆಯೂ ಕೇರಳ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಾಗ ಮುಸಲ್ಮಾನರಿಗೆ ಶೇ. ೮೦ ರಷ್ಟು ಹಾಗೂ ಉಳಿದ ಎಲ್ಲ ಅಲ್ಪಸಂಖ್ಯಾತ ಪಂಗಡಗಳಿಗೆ ಶೇ. ೨೦ ಎಂಬ ಧೋರಣೆಯನ್ನು ಮಾಡಿತ್ತು. ಆಗ ಈ ನಿರ್ಣಯಕ್ಕೆ ಕೇರಳ ಉಚ್ಚ ನ್ಯಾಯಾಲಯದ ನ್ಯಾಯವಾದಿ ಜಸ್ಟೀನ್ ಪಲ್ಲಿವಥೂಕಲ್ ಇವರು ಸವಾಲು ಹಾಕಿದ್ದರು. ಅವರ ಅರ್ಜಿಯಲ್ಲಿ ‘ಕೇರಳದಲ್ಲಿ ಮುಸಲ್ಮಾನರು ಶೇ. ೨೬ ಮತ್ತು ಇತರರು ಶೇ. ೧೮ ಹೀಗೆ ಒಟ್ಟು ಅಲ್ಪಸಂಖ್ಯಾತ ಸಮಾಜ ಶೇ. ೪೪ ರಷ್ಟಿದೆ ಎಂದು ಹೇಳಲಾಗಿತ್ತು. ಈ ಪ್ರಕರಣದಲ್ಲಿ ಕೇರಳ ಉಚ್ಚ ನ್ಯಾಯಾಲಯ ಹೇಳಿದ್ದೇನೆಂದರೆ, ‘ವಿದ್ಯಾರ್ಥಿವೇತನ ನೀಡುವಾಗ ಮುಸಲ್ಮಾನರಿಗೆ ಶೇ. ೮೦ ರಷ್ಟು ಹಾಗೂ ಇತರ ಅಲ್ಪಸಂಖ್ಯಾತರಿಗೆ ಕೇವಲ ಶೇ. ೨೦ ರಷ್ಟು ನೀಡುವುದು ಕಾನೂನುಬಾಹಿರವಾಗಿದೆ. ಅದೇ ರೀತಿ ಸಂವಿಧಾನದ ಪರಿಚ್ಛೇದ ೧೪ ಮತ್ತು ೧೫, ಹಾಗೆಯೇ ೨೯ ಮತ್ತು ೩೦ ಕ್ಕನುಸಾರವೂ ಅನುಚಿತವಾಗಿದೆ. ಈ ನಿರ್ಣಯವು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವೂ ಆಗಿದೆ. ಎಂದು ಹೇಳಿ ಕೇರಳ ಉಚ್ಚ ನ್ಯಾಯಾಲಯವು ಆ ನಿರ್ಣಯವನ್ನು ರದ್ದುಪಡಿಸಿತು. ಅನಂತರ ಕೇರಳ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಅಲ್ಲಿ ಅದಕ್ಕೆ ಸ್ಥಗಿತಿಯೂ (ಸ್ಟೇ) ಸಿಗಲಿಲ್ಲ ಅಥವಾ ಇತರ ಯಾವುದೇ ಲಾಭವೂ ಆಗಲಿಲ್ಲ.
೪. ಸರಕಾರದ ನಿರ್ಣಯಗಳಿಂದ ಆಗುತ್ತಿರುವ ಭೇದಭಾವವು ಅಸಂವಿಧಾನಿಕ !
ಈ ನಿರ್ಣಯ ಪ್ರಕ್ರಿಯೆಯಲ್ಲಿ ಕೇರಳ ಸರಕಾರಕ್ಕೆ ಮುಖಭಂಗವಾಗಿರುವಾಗಲೇ ಆಡಳಿತಾತ್ಮಕ ಸೇವೆಯಲ್ಲಿ ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ತರಬೇತಿ ಕೇಂದ್ರವನ್ನು ಪ್ರಾರಂಭಿಸುವ ಹೊಸ ಯೋಜನೆ ಮಾಡಲಾಗಿದೆ; ಆದರೆ ಇದನ್ನು ಮಾಡುವಾಗ ಇದರಲ್ಲಿ ಮುಸಲ್ಮಾನರಿಗೆ ಶೇ. ೫೦ ರಷ್ಟು ಮೀಸಲಾತಿ ನೀಡುವುದು ಹಾಗೂ ಅವರ ಶೈಕ್ಷಣಿಕ ಶುಲ್ಕ ಮನ್ನಾ ಮಾಡುವುದು ಕಾನೂನುಬಾಹಿರವಾಗಿದೆ. ಹೀಗೆ ಮಾಡಲು ಆಗುವುದಿಲ್ಲ, ಎಂದು ಅರ್ಜಿದಾರ ವಕೀಲರಾದ ಎಸ್. ಪ್ರಸಂಥ ಹಾಗೂ ಕೆ. ಅರ್ಜುನ ವೇಣುಗೋಪಾಲ ಇವರ ಹೇಳಿಕೆಯಾಗಿದೆ. ಅವರು ಈ ಅರ್ಜಿಯನ್ನು ದಾಖಲಿ ಸುವಾಗ ಅನೇಕ ಒಳ್ಳೆಯ ವಿಷಯಗಳ ಆಧಾರ ಪಡೆದಿದ್ದಾರೆ. ಅರ್ಜಿಯಲ್ಲಿ ಅವರು, “ಸಂವಿಧಾನದ ಪರಿಚ್ಛೇದ ೧೪ ಮತ್ತು ೧೫ ಕ್ಕನುಸಾರ ಮುಸಲ್ಮಾನರಿಗೆ ಕೇವಲ ಅವರು ಅಲ್ಪಸಂಖ್ಯಾತರಾಗಿದ್ದಾರೆಂದು ಇಂತಹ ಮೀಸಲಾತಿಯನ್ನು ನೀಡುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ. ಸಂವಿಧಾನದ ಪರಿಚ್ಛೇದ ೧೫ ಕ್ಕನುಸಾರ ಯಾವುದೇ ವ್ಯಕ್ತಿಗೆ ಜಾತಿ, ಧರ್ಮ, ಪಂಥ, ಸ್ತ್ರೀ-ಪುರುಷರೆಂಬ ಭೇದಭಾವವನ್ನು ಮಾಡಲು ಬರುವುದಿಲ್ಲ. ಇಲ್ಲಿ ಮಾತ್ರ ಬಹಿರಂಗವಾಗಿ ಈ ಭೇದಭಾವವನ್ನು ಮಾಡಲಾಗಿದೆ. ನಾಗರಿಕರು ತಮ್ಮ ಹಣದಿಂದ ತೆರಿಗೆಯನ್ನು (ಇನಕಮ್ ಟ್ಯಾಕ್ಸ) ಕೊಡುತ್ತಾರೆ ಹಾಗೂ ತೆರಿಗೆದಾರರ ಹಣವನ್ನು ಒಂದು ಪಂಥಕ್ಕಾಗಿ, ಒಂದು ಧರ್ಮಕ್ಕಾಗಿ ಅಥವಾ ‘ಅಲ್ಪಸಂಖ್ಯಾತ ಎಂಬ ಹೆಸರನ್ನು ಕೊಟ್ಟು ವ್ಯರ್ಥಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ‘ರಾಜ್ಯ ಸರಕಾರ ಉತ್ತರ ನೀಡಲು ಇಚ್ಛಿಸುತ್ತದೆ, ಎಂದು ನಮೂದಿಸಿ ಸರಕಾರವು ಗಡುವನ್ನು ಕೇಳಿದೆ. ‘ಸರಕಾರದ ಈ ನಿರ್ಣಯಕ್ಕನುಸಾರ ಮುಸಲ್ಮಾನ ಪಂಥದವರಿಗೆ ಶೇ. ೫೦ ರಷ್ಟು ಮೀಸಲಾತಿ ನೀಡುವುದು ಆದ್ಯತೆಯ ವಿಷಯವಾಗಿತ್ತು. ಸರಕಾರ ಈ ಮೇಲಿನಂತಹ ಮೀಸಲಾತಿಯಿಂದ ಹಿಂದೂ ಹಾಗೂ ಕ್ರೈಸ್ತರಲ್ಲಿನ ಪ್ರತಿಭಾನ್ವಿತ, ಜಾಣ ಮತ್ತು ಬುದ್ಧಿವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಅಡಚಣೆಯಲ್ಲಿ ತರಲು ಇಚ್ಛಿಸುತ್ತಿದೆ, ಎಂದೇ ಇಲ್ಲಿ ಅರ್ಥವಾಗುತ್ತದೆ. ಕೇವಲ ‘ಮುಸಲ್ಮಾನರಲ್ಲ, ಎಂಬ ಕಾರಣದಿಂದ ಅವರಿಗೆ ಪ್ರವೇಶ ನಿರಾಕರಣೆಯ ಭೇದಭಾವು ಸಂವಿಧಾನವಿರೋಧಿಯಾಗಿದೆ.
೫. ಕೇರಳ ಸರಕಾರವು ‘ಕ್ರೀಮ್ ಲೆಯರ್ನ (ಉತ್ಪನ್ನ ಗುಂಪಿನ) ತತ್ತ್ವಕ್ಕೆ ಮಸಿ ಬಳಿಯುವುದು
ಅದರ ಜೊತೆಗೆ ಅರ್ಜಿದಾರ ವಕೀಲರಾದ ಎಸ್. ಪ್ರಸಂಥ ಹಾಗೂ ಕೆ. ಅರ್ಜುನ ವೇಣುಗೋಪಾಲ ಇವರ ಅಭಿಪ್ರಾಯಕ್ಕನುಸಾರ ಯಾವಾಗ ಅನೇಕ ಕಡೆಗಳಲ್ಲಿ ಜಾತಿ, ಧರ್ಮ ಇವುಗಳ ಆಧಾರದಲ್ಲ್ಲಿ ಮೀಸಲಾತಿ ಕೇಳುವಾಗ ಇತರ ಹಿಂದುಳಿದ ವರ್ಗ (ಒ.ಬಿ.ಸಿ), ಅಲೆಮಾರಿ ಜನಾಂಗ (ಎನ್.ಟಿ) ಇತ್ಯಾದಿ, ಇವರಿಗಾಗಿ ‘ಕ್ರೀಮ್ ಲೆಯರನ (ಉತ್ಪನ್ನ ಗುಂಪಿನವರು) ಅಂಶವನ್ನು ಸಹ ಪರಿಗಣಿಸುವುದು ಆವಶ್ಯಕ ವಾಗಿರುತ್ತದೆ. ಇದರಲ್ಲಿ ವಿದ್ಯಾರ್ಥಿಗಳ ಪಾಲಕರ ಒಟ್ಟು ಉತ್ಪನ್ನವು ಆ ಆರ್ಥಿಕ ವರ್ಷದಲ್ಲಿ ೮ ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ, ಮಾತ್ರ ಮೀಸಲಾತಿಯ ಲಾಭ ಸಿಗುತ್ತದೆ. ಉತ್ಪನ್ನ ೮ ಲಕ್ಷಕ್ಕಿಂತ ಹೆಚ್ಚಿದ್ದರೆ, ಲಾಭ ಸಿಗುವುದಿಲ್ಲ. ಈ ಪ್ರಕರಣದಲ್ಲಿ ಕೇರಳ ಸರಕಾರ ಶೇ. ೫೦ ರಲ್ಲಿ ಶ್ರೀಮಂತ ಮುಸಲ್ಮಾನರಿಗೂ ಶೈಕ್ಷಣಿಕ ಶುಲ್ಕವನ್ನೂ ವಜಾಗೊಳಿಸಿದೆ, ಅಂದರೆ ಸರ್ವೋಚ್ಚ ನ್ಯಾಯಾಲಯದ ವರೆಗೆ ಎಲ್ಲರಿಗೂ ಸಮಾನವಾಗಿರುವ ‘ಕ್ರೀಮ್ ಲೆಯರ, ತತ್ತ್ವವನ್ನು ಬದಿಗೊತ್ತಿದಂತಾಗುತ್ತದೆ. ಈ ರೀತಿ ಮೀಸಲಾತಿ ನೀಡುವುದು ಹಾಗೂ ಅಂತಹ ನಿರ್ಣಯವನ್ನು ತೆಗೆದುಕೊಳ್ಳುವುದು ಕಾನೂನುಬಾಹಿರವಾಗಿದೆ, ಎಂಬುದು ಅರ್ಜಿದಾರರ ಸ್ಪಷ್ಟ ಅಭಿಪ್ರಾಯವಾಗಿದೆ.
೬. ಮುಸಲ್ಮಾನರ ಓಲೈಕೆಯೇ ಸಾಮ್ಯವಾದಿಗಳ ಸಾಮ್ಯವಾದ
ಕೇರಳ ಉಚ್ಚ ನ್ಯಾಯಾಲಯ ಏನು ತೀರ್ಪು ಕೊಡಲಿದೆ ಎಂದು ಶೀಘ್ರದಲ್ಲಿಯೇ ಗೊತ್ತಾಗುವುದು. ವಿದ್ಯಾರ್ಥಿ ವೇತನವನ್ನು ನೀಡುವಾಗ ಮುಸಲ್ಮಾನರಿಗೆ ಶೇ. ೮೦ ರಷ್ಟು ಇತರರಿಗೆ ಶೇ. ೨೦ ರಷ್ಟು ಎಂಬ ರಾಜ್ಯ ಸರಕಾರದ ನಿರ್ಣಯವನ್ನು ಕೇರಳ ಉಚ್ಚ ನ್ಯಾಯಾಲಯ ರದ್ದುಪಡಿಸಿದೆ. ಹಾಗಾಗಿ ಇಲ್ಲಿಯೂ ಶೇ. ೫೦ ರಷ್ಟು ಮೀಸಲಾತಿ ಕೇವಲ ಮುಸಲ್ಮಾನರಿಗೆ ಮತ್ತು ಶೇ. ೧೦ ರಷ್ಟು ಪರಿಶಿಷ್ಟ ಜಾತಿಗಳಿಗಾಗಿ ಕೊಡಲಾಗಿದೆ, ಅದು ಸಂವಿಧಾನ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿದೆ. ಆದ್ದರಿಂದ ತೀರ್ಪು ಏನಿರಬಹುದು ? ಎಂಬುದು ಸ್ಪಷ್ಟವಿದೆ. ಕೇವಲ ಆ ದಿನದ ನಿರೀಕ್ಷಣೆ ಮಾಡುವುದಷ್ಟೇ ನಮ್ಮ ಕೈಯಲ್ಲಿದೆ. ಅವಕಾಶ ಸಿಕ್ಕಿದಾಗಲೆಲ್ಲಾ ಮುಸಲ್ಮಾನರ ಓಲೈಕೆ ಮಾಡುವುದೇ ಸಾಮ್ಯವಾದಿಗಳ ಸಾಮ್ಯವಾದವಾಗಿದೆ, ಎಂಬುದು ಸಾಮ್ಯವಾದಿ ಗಳ ಅನೇಕ ನಿರ್ಣಯಗಳಿಂದ ಕಂಡು ಬರುತ್ತದೆ.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ.
|| ಶ್ರೀಕೃಷ್ಣಾರ್ಪಣಮಸ್ತು ||