ಉತ್ತರಾಖಂಡದಲ್ಲಿ ಮುಸಲ್ಮಾನರಿಂದ ಮಹಾಪಂಚಾಯತ ಆಯೋಜನೆ !

`ಲವ್ ಜಿಹಾದ್’ ಅನ್ನು ವಿರೋಧಿಸಿ, ಮುಸಲ್ಮಾನ ಅಂಗಡಿಕಾರರಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆಯ ಪ್ರಕರಣ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಉತ್ತರಕಾಶಿ ನಗರದ ಪುರೊಲಾ ಪ್ರದೇಶದಲ್ಲಿ ಲವ್ ಜಿಹಾದ್ ಕಾರಣದಿಂದ ಮುಸಲ್ಮಾನ ಅಂಗಡಿಕಾರರನ್ನು 15 ಜೂನವರೆಗೆ ಅಂಗಡಿಗಳನ್ನು ಖಾಲಿ ಮಾಡಿ ಹೋಗುವಂತೆ ಭಿತ್ತಿಪತ್ರಗಳನ್ನು ಹಚ್ಚಲಾಗಿದೆ. ತದನಂತರ ಅನೇಕ ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರು ರಾಜಧಾನಿ ಡೆಹರಾಡೂನನಲ್ಲಿ ಜೂನ 18 ರಂದು ಮಹಾಪಂಚಾಯತಿಯನ್ನು ಆಯೋಜಿಸಿದೆ.

ಉತ್ತರಕಾಶಿಯ ಉಪಅಧೀಕ್ಷಕ ಸುರೇಂದ್ರಸಿಂಹ ಭಂಡಾರಿಯವರು ಮುಸಲ್ಮಾನ ಅಂಗಡಿಕಾರರು ಅಂಗಡಿಗಳನ್ನು ಮುಚ್ಚಿ ಹೋಗುತ್ತಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. `ಒಂದು ವೇಳೆ ಯಾವುದೇ ಅಂಗಡಿಕಾರರು ಅಂಗಡಿಯನ್ನು ಮುಚ್ಚಿ ಹೋಗುತ್ತಿದ್ದರೆ, ಅದು ಅವರ ವೈಯಕ್ತಿಕ ಕಾರಣದಿಂದ ಹೋಗಿರಬಹುದು’ ಎಂದು ಅವರು ಹೇಳಿದ್ದಾರೆ. ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡುವಂತೆ ಬೆದರಿಕೆ ನೀಡಿರುವುದನ್ನು ಸ್ಥಳೀಯ ಹಿಂದೂಗಳು ನಿರಾಕರಿಸಿದ್ದಾರೆ. `ಮುಸಲ್ಮಾನರು ಸ್ವತಃ ತಾವೇ ಅಂಗಡಿಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ’ ಎಂದೂ ಅವರು ಹೇಳುತ್ತಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಯಾವಾಗ ಹಿಂದೂಗಳನ್ನು ಓಡಿ ಹೋಗುವಂತೆ ಮಾಡುತ್ತಾರೆಯೋ, ಆಗ ಇತರೆ ಹಿಂದೂಗಳು ಎಂದಿಗೂ ಸಂತ್ರಸ್ತ ಹಿಂದೂಗಳ ಸಹಾಯಕ್ಕಾಗಿ ಈ ರೀತಿ ಸಂಘಟಿತರಾಗುವುದಿಲ್ಲ; ಆದರೆ ಮುಸಲ್ಮಾನರು ತಮ್ಮ ಧರ್ಮಬಾಂಧವರಿಗಾಗಿ ತಕ್ಷಣವೇ ಸಂಘಟಿತರಾಗುತ್ತಾರೆ, ಎನ್ನುವುದನ್ನು ಹಿಂದೂಗಳು ಎಂದು ಕಲಿಯುತ್ತಾರೆ ?