ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರ ಹೇಳಿಕೆ :
|
ಭಾಗಲಪುರ (ಬಿಹಾರ) – ಇಲ್ಲಿಯ ಸುಲ್ತಾನಗಂಜ – ಅಗುವಾನಿ ಪ್ರದೇಶದಲ್ಲಿ ಗಂಗಾನದಿಗೆ ಕಟ್ಟಲಾಗುತ್ತಿದ್ದ ಸೇತುವೆಯು ಜೂನ 4 ರಂದು ಸಂಜೆ ಕುಸಿದು ಬಿದ್ದಿತು. ಈ ಸಮಯದಲ್ಲಿ ಕೆಲಸ ಮಾಡುತ್ತಿದ್ದ 2 ಭದ್ರತಾಸಿಬ್ಬಂದಿಯವರು ನಾಪತ್ತೆಯಾಗಿದ್ದಾರೆ. ರಾಜ್ಯದ ವಿಪತ್ತು ನಿರ್ವಹಣಾ ಪಡೆಯವರು ಅವರನ್ನು ಹುಡುಕುತ್ತಿದ್ದಾರೆ. ಈ ಘಟನೆಯ ವಿಷಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರು ಮಾತನಾಡುತ್ತಾ, ‘ನಿಮಗೆ ಗೊತ್ತಿರಬೇಕು, ಕಳೆದ ವರ್ಷ ಸೇತುವೆಯ ಕೆಲವು ಭಾಗ ಕುಸಿದ ಬಳಿಕ ನಾವು ವಿಚಾರಣೆ ನಡೆಸುವಂತೆ ಕೋರಿದ್ದೆವು’. ತದನಂತರ ‘ಐ.ಐ.ಟಿ. ರೂರ್ಕಿ’ ಅಧ್ಯಯನ ನಡೆಸಿದ ಬಳಿಕ ಸೇತುವೆಯ ಕಾಮಗಾರಿ ದೋಷಪೂರಿತವಾಗಿರುವುದು ಕಂಡು ಬಂದಿತು. ಆಗ ನಾವು ಸೇತುವೆಯನ್ನು ಕೆಡವಬೇಕೆಂದು ಹೇಳಿದೆವು. ರಸ್ತೆ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಸಚಿವರಾಗಿರುವ ಪ್ರತ್ಯಯ ಅಮೃತ ಇವರು ಸೇತುವೆಯ ಕಾಮಗಾರಿ ನಡೆಸಿರುವ ಸಂಸ್ಥೆಯನ್ನು ಕಪ್ಪುಪಟ್ಟಿಯಲ್ಲಿ ಹಾಕಲಾಗಿದ್ದು, ದೂರನ್ನು ದಾಖಲಿಸಲಾಗುವುದು ಎಂದು ಹೇಳಿದ್ದರು.
ಈ ಸೇತುವೆಯನ್ನು ‘ಎಸ್.ಪಿ. ಸಿಂಗಲಾ’ ಹೆಸರಿನ ಸಂಸ್ಥೆ ನಿರ್ಮಾಣ ಮಾಡುತ್ತಿತ್ತು. ಈ ಸೇತುವೆ ಖಗಡಿಯಾ ಮತ್ತು ಭಾಗಲಪುರ ಜಿಲ್ಲೆಯನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದ್ದು, ಕಳೆದ ವರ್ಷ ಎಪ್ರಿಲ್ 27 ರಂದು ಸೇತುವೆಯ ಕೆಲವು ಭಾಗ ನದಿಯಲ್ಲಿ ಕುಸಿದು ಬಿದ್ದಿತ್ತು. 3 ಕಿಲೋಮೀಟರ ಉದ್ದದ ಈ ಸೇತುವೆ 1 ಸಾವಿರದ 750 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. 2012 ರಿಂದ ಇದರ ಕಾಮಗಾರಿ ಪ್ರಾರಂಭವಾಗಿದೆಯೆಂದು ಹೇಳಲಾಗುತ್ತಿದೆ. ಭಾಜಪ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಇವರ ತ್ಯಾಗಪತ್ರವನ್ನು ಕೋರಿದೆ.
#Bihar govt was planning to demolish bridge due to structural flaws: #TejashwiYadav
The same under-construction bridge collapsed again on Sunday, visuals of which have gone viral on the internet. #Biharbridgecollapses https://t.co/PK61LLpXlQ
— The Times Of India (@timesofindia) June 5, 2023
ಸಂಪಾದಕರ ನಿಲುವು
|