ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆ ಹಾಗೂ ಮುಸಲ್ಮಾನ ಮತ್ತು ಕ್ರೈಸ್ತರ ಸಂಖ್ಯೆಯಲ್ಲಿ ಏರಿಕೆ !

ಕಾಠ್ಮಂಡು (ನೇಪಾಳ) – ನೇಪಾಳದ 2021 ರ ಜನಗಣತಿಯ ಅಂಕಿ-ಅಂಶಗಳು ಈಗ ಬಹಿರಂಗವಾಗಿದೆ. ಕೇಂದ್ರೀಯ ಅಂಕಿಅಂಶ ಇಲಾಖೆಯು ಪ್ರಕಟಿಸಿರುವ ಈ ಅಂಕಿ-ಅಂಶಗಳನುಸಾರ ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂಗಳ ಒಟ್ಟು ಜನಸಂಖ್ಯೆ ಶೇ. 81.18 ರಷ್ಟು ಇತ್ತು. ಅಂದರೆ ನೇಪಾಳದಲ್ಲಿ 2 ಕೋಟಿ 36 ಲಕ್ಷ 77 ಸಾವಿರ 744 ಹಿಂದೂಗಳಿದ್ದು, ಎರಡನೇಯ ಸ್ಥಾನದಲ್ಲಿ ಶೇ.8.2. ಜನಸಂಖ್ಯೆಯಿರುವ ಬೌದ್ಧರಿದ್ದಾರೆ. ಅವರ ಜನಸಂಖ್ಯೆ 23 ಲಕ್ಷ 94 ಸಾವಿರ 549 ರಷ್ಟು ಇದೆ. ಮುಸಲ್ಮಾನರು ಶೇ. 5.09 ರಷ್ಟು ಅಂದರೆ 14 ಲಕ್ಷ 83 ಸಾವಿರ 60 ಗಳಷ್ಟು ಇದ್ದಾರೆ. ಹೀಗಿದ್ದರೂ, ಹಿಂದೂಗಳ ಜನಸಂಖ್ಯೆ ಶೇ. 0.11 ಮತ್ತು ಬೌದ್ಧರ ಜನಸಂಖ್ಯೆ ಶೇ. 0.79 ರಷ್ಟು ಕ್ಷೀಣಿಸಿದೆ. ಇದೇ ವೇಳೆ ಮುಸಲ್ಮಾನ ಜನಸಂಖ್ಯೆ ಶೇ. 0.69 ರಷ್ಟು ಮತ್ತು ಕ್ರೈಸ್ತರ ಜನಸಂಖ್ಯೆ ಶೇ. 0.36 ರಷ್ಟು ಹೆಚ್ಚಳವಾಗಿದೆ. ಈ ಸಂಖ್ಯೆ ಅಲ್ಪವಿದ್ದರೂ. ಹಿಂದೂಗಳು ಮತ್ತು ಬೌದ್ಧರ ಜನಸಂಖ್ಯೆ ಕ್ಷೀಣಿಸಿರುವ ಸಂಖ್ಯೆಯ ಪ್ರಮಾಣವು ಗಮನಾರ್ಹವಾಗಿದೆ.

ಸಂಪಾದಕರ ನಿಲುವು

ಭಾರತದಂತೆಯೇ ಮುಂದಿನ ಕೆಲವು ದಶಕಗಳಲ್ಲಿ ನೇಪಾಳವೂ ಹಿಂದೂ ಅಲ್ಪಸಂಖ್ಯಾತರಾಗಿರುವ ದೇಶವಾದರೆ ಆಶ್ಚರ್ಯವೇನಿಲ್ಲ ! ಈ ಸ್ಥಿತಿ ಬರುವ ಮೊದಲೇ ಭಾರತ ಮತ್ತು ನೇಪಾಳದಲ್ಲಿ ಹಿಂದೂ ರಾಷ್ಟ್ರವಾಗಲು ಪ್ರಯತ್ನ ಮಾಡಬೇಕು !