ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ದಕ್ಷಿಣ ಆಫ್ರಿಕಾದಲ್ಲಿ ರಾಹುಲ್ ಗಾಂಧಿಗೆ ಪ್ರತ್ಯುತ್ತರ !
ಕೇಪ ಟೌನ್ (ದಕ್ಷಿಣ ಆಫ್ರಿಕ) – ನಾನು ವಿದೇಶಕ್ಕೆ ಹೋಗಿ ರಾಜಕೀಯ ಮಾಡುವುದಿಲ್ಲ ಮತ್ತು ಮುಂದೆಯೂ ಕೂಡ ಮಾಡುವುದಿಲ್ಲ, ಎಂದು ಇಲ್ಲಿಯ ಒಬ್ಬ ಯುವಕನು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಉತ್ತರಿಸಿದರು. ಈ ಯುವಕನು ರಾಹುಲ ಗಾಂಧಿ ಇವರ ಹೆಸರು ಹೇಳದೆ ‘ಅಮೆರಿಕಾದಲ್ಲಿ ಕೆಲವರು ಭಾರತದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು ?’ ಎಂದು ಪ್ರಶ್ನೆ ಕೇಳಿದ್ದನು. ಎಸ್. ಜೈಶಂಕರವರು ಮಾತು ಮುಂದುವರಿಸುತ್ತಾ, ”ಬಹುಶಃ ನಾನು ಯಾರ ಜೊತೆಗೂ ಒಪ್ಪಿಗೆ ಇಲ್ಲ; ಆದರೆ ನಾನು ಭಾರತಕ್ಕೆ ಹಿಂತಿರುಗಿದ ನಂತರ ನನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವೆನು. ಪ್ರಜಾಪ್ರಭುತ್ವದಲ್ಲಿ ಸಾಮೂಹಿಕ ಹೊಣೆ ಇರುತ್ತದೆ. ರಾಷ್ಟ್ರದಹಿತ ನೋಡಲಾಗುತ್ತದೆ. ಕೆಲವು ವಿಷಯ ರಾಜಕೀಯವನ್ನು ಮಿರಿದ್ದಾಗಿರುತ್ತದೆ. ದೇಶದ ಹೊರಗೆ ಹೆಜ್ಜೆ ಇಡುವಾಗ ಇದರ ಬಗ್ಗೆ ಗಮನ ಇಡಬೇಕಾಗುತ್ತದೆ.” ರಾಹುಲ ಗಾಂಧಿ ಇವರು ವಾಷಿಂಗ್ಟನ್ ನಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾರತದಲ್ಲಿನ ಘಟನೆಗಳ ಬಗ್ಗೆ ಟೀಕಿಸಿದ್ದರು. ವಿದೇಶಾಂಗ ಸಚಿವ ಜೈಶಂಕರ ಇವರು ‘ಬ್ರಿಕ್ಸ್’ ದೇಶದ ಸಭೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಅವರು ಭಾರತೀಯ ಮೂಲದ ಜನರನ್ನು ಕೂಡ ಭೇಟಿ ಮಾಡಿದರು.