ಕೆಟ್ಟುಹೋಗಿದ್ದ ಸಿಗ್ನಲ್ ನಿಂದ ಓಡಿಸ್ಸಾ ರೇಲ್ವೆ ಅಪಘಾತ, ಪ್ರಾಥಮಿಕ ವರದಿಯ ಮಾಹಿತಿ ! – ರೇಲ್ವೆ ಬೋರ್ಡ

ಬಾಲಾಸೋರ (ಓಡಿಸ್ಸಾ) – ಇಲ್ಲಿಯ ರೇಲ್ವೆ ಅಪಘಾತದ ವಿಷಯದ ಕುರಿತು ರೇಲ್ವೆ ಬೋರ್ಡ ಪತ್ರಿಕಾಗೋಷ್ಠಿಯನ್ನು ಕರೆದು ಸವಿಸ್ತಾರವಾಗಿ ಮಾಹಿತಿ ನೀಡಿದೆ. ಬೋರ್ಡನ ಅಧಿಕಾರಿ ಜಯಾ ಸಿನ್ಹಾ ಇವರು ಮಾತನಾಡುತ್ತಾ, ಸಿಗ್ನಲ್ ನಿಯಂತ್ರಣ ವ್ಯವಸ್ಥೆ ಕೆಟ್ಟಿದ್ದರಿಂದ ಈ ಅಪಘಾತ ನಡೆದಿದೆಯೆಂದು ಪ್ರಾಥಮಿಕ ಮಾಹಿತಿಯಿಂದ ಕಂಡು ಬಂದಿದೆ. ಎಂದು ಹೇಳಿದರು.

ಜಯಾ ಸಿನ್ಹಾ ತಮ್ಮ ಮಾತನ್ನು ಮುಂದುವರೆಸುತ್ತಾ,

1. ಕೋರಮಂಡಲ ಎಕ್ಸಪ್ರೆಸ್ ಸಂಜೆ 6 ಗಂಟೆ 55 ನಿಮಿಷಕ್ಕೆ ಬಹಾನಗಾ ನಿಲ್ದಾಣಕ್ಕೆ ಬರುತ್ತಿತ್ತು. ಅದು ಅಪಘಾತಕ್ಕೆ ಒಳಗಾಯಿತು. ಇದರಿಂದ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಾಣಿಕೆ ಗಾಡಿ ಮತ್ತು ಅಲ್ಲಿಂದ ಹಾದು ಹೋಗುವ ಯಶವಂತಪುರ ಎಕ್ಸಪ್ರೆಸ್ ಗಾಡಿಯೂ ಹಾನಿಗೊಳಗಾಯಿತು.

2. ಎರಡೂ ಎಕ್ಸಪ್ರೆಸ್ ಮಾರ್ಗ ಮತ್ತು ಸಿಗ್ನಲ್ `ಸೆಟ್’ ಮಾಡಲಾಗಿತ್ತು. ಹಸಿರು ಸಿಗ್ನಲ್ ತೋರಿಸಲಾಗಿತ್ತು. ಅಂದರೆ ಅವರಿಗೆ ಮಾರ್ಗ ತೆರವುಗೊಳಿಸಲಾಗಿದೆ ಎಂದರ್ಥ. ಈ ರೈಲುಗಳಿಗೆ 130 ಕಿಮೀ. ಪ್ರತಿಗಂಟೆ ವೇಗದಿಂದ ಹೋಗಲು ಅನುಮತಿಯಿರುತ್ತದೆ. ಕೋರಮಂಡಲ ವೇಗ ಗಂಟೆಗೆ 128 ಕಿ.ಮೀ ಹಾಗೂ ಯಶವಂತಪುರ ರೈಲಿನ ವೇಗ ಗಂಟೆಗೆ 126 ಕಿ.ಮೀ ಇತ್ತು. ಸಿಗ್ನಲ್ ಹಸಿರು ತೋರಿಸಿತ್ತು ಮತ್ತು ಅವರಿಗೆ ನೇರವಾಗಿ ಹೋಗುವುದಿತ್ತು. ಕೋರಮಂಡಲ ಎಕ್ಸಪ್ರೆಸ್ ಗಾಡಿಗೆ ಮಾರ್ಗ ತೆರವುಗೊಳಿಸಲಾಗಿದೆಯೆಂದು ಸಿಗ್ನಲ್ ಸಿಕ್ಕಿದ್ದರಿಂದ ಅದು ಮುಂದಕ್ಕೆ ಹೋಯಿತು. ಅದೇ ಮಾರ್ಗದಲ್ಲಿ ಗೂಡ್ಸ್ ಗಾಡಿ ನಿಂತಿತ್ತು ಮತ್ತು ಅದಕ್ಕೆ ಡಿಕ್ಕಿ ಹೊಡೆಯಿತು. ಪ್ರಾಥಮಿಕ ವರದಿಯಲ್ಲಿ ಸಿಗ್ನಲ್ ನಲ್ಲಿ ತೊಂದರೆ ಕಂಡು ಬಂದಿರುವ ಮಾಹಿತಿಯಿದೆ. ಸಧ್ಯ ತನಿಖೆ ಮುಂದುವರಿದಿದೆ. ಅದರ ವಿವರವಾದ ವರದಿಯನ್ನು ಪಡೆಯದೇ ಏನನ್ನೂ ಹೇಳಲು ಸಾಧ್ಯವಿಲ್ಲ.

3. ಅಪಘಾತ ಕೇವಲ ಕೋರಮಂಡಲ್ ಎಕ್ಸಪ್ರೆಸ್ ಗಾಡಿಗೆ ಆಗಿದೆ. 3 ಗಾಡಿಗಳು ಡಿಕ್ಕಿ ಹೊಡೆದಿಲ್ಲ. ಒಂದೇ ಹಳಿಯ ಮೇಲೆ ಮೂರು ಗಾಡಿಗಳು ಬಂದಿರಲಿಲ್ಲ. ಕೇವಲ ಒಂದೇ ಗಾಡಿಯ ಅಪಘಾತವಾಗಿದೆ. ಅಪಘಾತದ ಬಳಿಕ ಅದು ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ಗಾಡಿಯಲ್ಲಿ ಕಬ್ಬಿಣವನ್ನು ತುಂಬಲಾಗಿತ್ತು. ಇದರಿಂದ ಈ ಅಪಘಾತದ ತೀವ್ರತೆ ಹೆಚ್ಚಾಯಿತು.

4. ಕೋರಮಂಡಲ ಗಾಡಿ ‘ಎಲ್.ಎಚ್.ಬಿ ರೈಲು ಗಾಡಿಯಾಗಿದೆ. ಅತ್ಯಧಿಕ ಸುರಕ್ಷಿತವಾಗಿರುವ ಗಾಡಿಯಾಗಿದೆ. ಇಂತಹ ಗಾಡಿಗಳು ಅತ್ಯಂತ ವೇಗವಾಗಿದ್ದರೂ ಮತ್ತು ಅಪಘಾತವಾದರೂ ಗಾಡಿಯಲ್ಲಿರುವ ಪ್ರವಾಸಿಗರಿಗೆ ಅಧಿಕ ಗಾಯಗಳಾಗುವುದಿಲ್ಲ. ಆದರೆ ಈಗಿನ ಅಪಘಾತದಲ್ಲಿ ಗೂಡ್ಸ್ ಗಾಡಿಯಲ್ಲಿ ಕಬ್ಬಿಣ ತುಂಬಿತ್ತು. ಡಿಕ್ಕಿ ಹೊಡೆದಿರುವ ಗೂಡ್ಸ್ ಗಾಡಿಗೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಕೋರಮಂಡಲ ಗಾಡಿಯ ಕೆಲವು ಬೋಗಿಗಳು ಹಳಿ ತಪ್ಪಿತು. ಅದೇ ಸಮಯಕ್ಕೆ ಯಶವಂತಪೂರ ಎಕ್ಸಪ್ರೆಸ್ ತಾಸಿಗೆ 126 ಕಿಮೀ ವೇಗದಲ್ಲಿ ಬರುತ್ತಿತ್ತು. ಕೇವಲ ಕೆಲವೇ ಸೆಕೆಂಡುಗಳಿಗೆ ಅದರ ಕೊನೆಯ 2 ಬೋಗಿಗಳು ಹಿಂದೆ ಇತ್ತು ಅದಕ್ಕೆ ಡಿಕ್ಕಿಯಾಗಿ ಎರಡೂ ಡಬ್ಬಿಗಳು ಹಳಿ ಬಿಟ್ಟು ಸರಿದವು. ಗಾಡಿಯ ವೇಗ ಎಷ್ಟಿತ್ತೆಂದರೆ, ಅದರಲ್ಲಿರುವ ಕೆಲವು ಜನರು ಗಾಯಗೊಂಡರು ಮತ್ತು ಕೆಲವರು ಸಾವನ್ನಪ್ಪಿದರು. ಎಂದು ಹೇಳಿದ್ದಾರೆ.

(ಸೌಜನ್ಯ : Republic TV)