ಇಂಫಾಲ್ (ಮಣಿಪುರ) – ಮಣಿಪುರ ರಾಜ್ಯದಲ್ಲಿನ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗವು ಹಿಂಸಾಚಾರದ ಕುರಿತು ತನಿಖೆ ನಡೆಸಲಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ನಡೆಸಲಿದೆ, ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು. ಅವರು ಮಣಿಪುರದಲ್ಲಿ ೪ ದಿನಗಳ ಪ್ರವಾಸದಲ್ಲಿದ್ದಾರೆ. ಅವರು ವಿವಿಧೆಡೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮಣಿಪುರ ಸರಕಾರ ಮತ್ತು ಕೇಂದ್ರ ಸರಕಾರ ತಲಾ ೫ ಲಕ್ಷ ರೂಪಾಯಿ ನೆರವು ನೀಡುವುದರ ಜೊತೆಗೆ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗವನ್ನೂ ನೀಡಲಿದೆ ಎಂದು ಅವರು ಹೇಳಿದರು.
Amit Shah stated that the union government has decided to set up a Judicial Commission to probe Manipur violence. #AmitShah #ManipurViolence https://t.co/4iIDeZkQYw
— Republic (@republic) June 1, 2023