ರಾಮರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುತ್ತದೆ ! – ಶಂಕರಾಚಾರ್ಯ ಸ್ವಾಮಿ ಅಭಿಮುಕ್ತೇಶ್ವರಾನಂದ ಸರಸ್ವತಿ

ರಾಯಪುರ (ಛತ್ತಿಸ್ಗಢ) – ‘ರಾಮರಾಜ್ಯ’ ಎಂದು ಹೇಳುವಾಗ ಯಾವ ಭಾವನೆ ಬರುತ್ತದೆ, ಅದು ‘ಹಿಂದೂ ರಾಷ್ಟ್ರ’ ಎಂದು ಹೇಳುವಾಗ ಅನಿಸುವುದಿಲ್ಲ. ನಮಗೆ ಹಿಂದೂ ರಾಷ್ಟ್ರ ಬೇಕಿಲ್ಲ. ನಮಗೆ ರಾಮರಾಜ್ಯದ ಇಚ್ಚೆ ಇದೆ. ಹಿಂದೂ ರಾಷ್ಟ್ರ ರಾವಣ ಮತ್ತು ಕಂಸ ಇವರದು ಕೂಡ ಆಗಿತ್ತು; ಆದರೆ ಪ್ರಜೆಗಳಿಗೆ ತೊಂದರೆಯಾಗಿತ್ತು. ಎಲ್ಲದರಲ್ಲಿ ಆದರ್ಶ ರಾಜ್ಯ ರಾಮರಾಜ್ಯವಾಗಿತ್ತು. ನಮಗೆ ಹೊಸ ರಾಜ್ಯ ಸ್ಥಾಪಿಸಬೇಕಾಗಿದೆ. ಆದ್ದರಿಂದ ನಾವು ರಾಮರಾಜ್ಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? ರಾಮ ರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುವುದು, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಸರಸ್ವತಿ ಇವರು ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ದೇಶದ ಸ್ವಾತಂತ್ರ್ಯದ ಸಮಯದಲ್ಲಿ ವಿದ್ವಾನರು ಸುಧೀರ್ಘ ಚರ್ಚೆಯ ನಂತರ ಸಂವಿಧಾನ ರಚಿಸಿದರು. ಅದರಲ್ಲಿ ಜಾತ್ಯತೀತ ರಾಷ್ಟ್ರದ ಸಂಕಲ್ಪನೆ ಸಮ್ಮತಿಸಲಾಯಿತು. ಈಗ ಜಾತ್ಯತೀತ ಸಂಕಲ್ಪನೆಯಿಂದ ನಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳದೆ ಇರುವುದು ಜನರಿಗೆ ತಿಳಿದಿದೆ ಆಗ ಅವರು ತಮ್ಮ ತಮ್ಮಲ್ಲಿಯೇ ಚರ್ಚಿಸಿ ಅದರ ಸ್ವರೂಪ ನಿಶ್ಚಯಿಸಬೇಕು. ಸ್ವರೂಪ ಹೊರ ಬಂದರೆ ಆಗ ನಾವು ಅದರ ಗುಣದೋಷದ ಬಗ್ಗೆ ಗಮನಹರಿಸಬಹುದು ಎಂದು ಹೇಳಿದರು.

ಧರ್ಮದಂಡದ ಅರ್ಥದ ಕಡೆಗೆ ನಿರ್ಲಕ್ಷ ಬೇಡ !

ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರಿಸುತ್ತಾ, ಹಳೆ ಸಂಸದ ಭವನದ ಅಧ್ಯಕ್ಷರ ಆಸನದ ಹಿಂದೆ ‘ಯತೋ ಧರ್ಮ ತತೋ ಜಯ ‘ (ಎಲ್ಲಿ ಧರ್ಮ ಇರುತ್ತದೆ ಅಲ್ಲಿ ಜಯವಿರುತ್ತದೆ) ಎಂದು ಬರೆಯಲಾಗಿತ್ತು. ಆದರೆ ೭೫ ವರ್ಷಗಳಿಂದ ಈ ಚಿಹ್ನೆಯ ಅರ್ಥದ ಕಡೆಗೆ ನಿರ್ಲಕ್ಷ ಮಾಡಲಾಗಿದೆ. ಇದರ ಯೋಚನೆ ಮಾಡಲಾಗಿಲ್ಲ. ಈಗ ಹೊಸ ಸಂಸತ್ತಿನಲ್ಲಿ ಧರ್ಮದಂಡ ಇರಿಸಲಾಗಿದೆ; ಆದರೆ ಅದರ ಹಿಂದಿನ ಅರ್ಥ ರಾಷ್ಟ್ರಪತಿ, ಉಪರಾಷ್ಟ್ರಪತಿ ಇವರ ಪತ್ರದಲ್ಲಿ ಅಥವಾ ಪ್ರಧಾನಮಂತ್ರಿ ಮೋದಿ ಅವರ ಭಾಷಣದಲ್ಲಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಚಿಹ್ನೆಗಳ ಅರ್ಥವನ್ನು ಪೂರೈಸಿದರೆ, ಅದು ಐತಿಹಾಸಿಕವಾಗುತ್ತದೆ, ಇಲ್ಲದಿದ್ದರೆ ಅದು ಕೇವಲ ಆಚರಣೆಯಾಗುತ್ತದೆ ಎಂದು ಹೇಳಿದರು.

ಹಿಂದೂ ಸಮಾಜವನ್ನು ವಿಭಜಿಸುವ ಷಡ್ಯಂತ್ರ !

ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು, ರಾಜಕೀಯದಿಂದ ‘ಆದಿವಾಸಿಗಳು ‘ಹಿಂದೂ ಅಲ್ಲ’ ಎಂದು ಹೇಳಲಾಗುತ್ತಿದೆ, ನಾವು ನಗರಗಳಲ್ಲಿ ವಾಸಿಸುತ್ತಿದ್ದೇವೆ, ಇದರ ಅರ್ಥ ಹೀಗೆ ಆಗುವುದಿಲ್ಲ ನಾವು ಎಂದು ವನವಾಸಿಗಳಾಗಿರಲಿಲ್ಲ. ನಮ್ಮ ಮೂಲಗಳು ಕೂಡ ಕಾಡಿನ ಜೊತೆ ಜೋಡಿಸಲಾಗಿದೆ. ಇಂದಿಗೂ ಕೂಡ ನಮಗೆ ಗಿಡಮರಗಳು, ಹೂವುಗಳು, ಎಲೆಗಳು, ಕಟ್ಟಿಗೆಗಳು ಇದರ ಅವಶ್ಯಕತೆ ಇದೆ. ಇಂದು ಹಿಂದೂ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ; ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.

ಜನರಿಗೆ ಇಚ್ಛೆ ಇದ್ದರೆ ಸರಕಾರ ಮದ್ಯ ನಿಷೇಧ ಮಾಡಬಹುದು !

ಮದ್ಯ ನಿಷೇಧದ ಬಗ್ಗೆ ಶಂಕರ ಆಚಾರ್ಯರು, ಜನರ ಇಚ್ಛೆ ಇದ್ದರೆ ಸರಕಾರದ ಸಹಾಯದಿಂದ ಮದ್ಯ ನಿಷೇಧ ಸಾಧ್ಯ. ಇಂದು ಘಟಿಸುವ ಎಲ್ಲಾ ಅಪರಾಧದಲ್ಲಿ ಮಧ್ಯದ ದೊಡ್ಡ ಕಾರಣವಿದೆ. ಅಪರಾಧ ನಿಲ್ಲಿಸುವುದಿದ್ದರೆ ಮದ್ಯ ನಿಷೇಧ ಆಗಬೇಕು ಎಂದು ಹೇಳಿದರು.