ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಛಗನ ಭುಜಬಲ ಇವರ ಅಜ್ಞಾನದ ಹೇಳಿಕೆ !
(ಡ್ರೆಸ್ ಕೋಡ್ ಅಂದರೆ ದೇವಸ್ಥಾನದಲ್ಲಿ ಪ್ರವೇಶಿಸುವಾಗ ಧರಿಸುವ ವಸ್ತ್ರಗಳ ಸಂದರ್ಭದಲ್ಲಿನ ನಿಯಮಾವಳಿಗಳು)
ನಾಶಿಕ – ಮಹಾರಾಷ್ಟ್ರದಲ್ಲಿ ಅನೇಕ ದೇವಸ್ಥಾನಗಳಲ್ಲಿ ಭಾಕ್ತರಿಗಾಗಿ ಡ್ರೆಸ್ ಕೋಡ್ ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ `ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸುವುದು, ಮೂರ್ಖತನವಾಗಿದೆ’ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಮುಖಂಡ ಛಗನ ಭುಜಬಲ ಇವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. `ದೇವಸ್ಥಾನಕ್ಕೆ ಹೋಗುವ ಶಾಲೆಯ ಮಕ್ಕಳಿಗೂ ಇಂತಹ ಡ್ರೆಸ್ ಕೋಡ್ ಜಾರಿಗೊಳಿಸುವುದು ಮೂರ್ಖತನವೇ ಆಗಿದೆ’ ಎಂದೂ ಅವರು ಹೇಳಿದರು.
ಹೊಸ ಸಂಸತ್ ಭವನದಲ್ಲಿ ನಡೆಸಲಾಗಿರುವ ಧಾರ್ಮಿಕ ವಿಧಿವಿಧಾನಗಳ ಮೇಲೆಯೂ ಭುಜಬಲ ಇವರು ಟೀಕಿಸಿದರು. ಅವರು, ‘`ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಮಾಡುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರ್ಮಿಕ ವಿಧಿಯನ್ನು ಮಾಡಿದರು. ಸಂಸತ್ತು ಪ್ರಜಾಪ್ರಭುತ್ವದ ಮಂದಿರವಾಗಿದೆ. ರಾಮಮಂದಿರ, ಶಿವಮಂದಿರಗಳಲ್ಲಿ ಧಾರ್ಮಿಕ ವಿಧಿ ಮಾಡಿದ್ದರೆ ತೊಂದರೆಯಿರಲಿಲ್ಲ; ಆದರೆ ಎಲ್ಲ ದೇಶಗಳನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವದ ಮಂದಿರದಲ್ಲಿ ಹೀಗೆ ಮಾಡುವುದು ತಪ್ಪಾಗುತ್ತದೆ’.ಎಂದು ಹೇಳಿದರು.
ಸಂಪಾದಕೀಯ ನಿಲುವು
|
ದೇವಸ್ಥಾನದಲ್ಲಿ ಅರ್ಚಕರು ಅರೆನಗ್ನ ಇರುವುದಿಲ್ಲವೇ? (ಅಂತೆ)
ಭುಜಬಲ ಇವರು ಮಾತನಾಡುತ್ತಾ, `ದೇವಸ್ಥಾನದಲ್ಲಿರುವ ಅರ್ಚಕರು ಅರೆನಗ್ನರಾಗಿವುದಿಲ್ಲವೇ? ಒಳಗೆ ಅರೆನಗ್ನರಾಗಿರುವ ಅರ್ಚಕರು ಮೊದಲು ಜುಬ್ಬಾ ಧರಿಸಬೇಕು. ಅವರು ಕೊರಳಿನಲ್ಲಿ ತುಳಸಿಯ ಮಾಲೆಯನ್ನು ಹಾಕಿದರೂ ಅವರು ಅರ್ಚಕರಾಗುತ್ತಾರೆ ಎಂದು ಗುರುತಿಸಬಹುದಾಗಿದೆ.” ಎಂದು ಹೇಳಿದರು.
ಸಂಪಾದಕೀಯ ನಿಲುವುಮಡಿ ಮತ್ತು ತುಂಡುಡುಗೆಯ ವ್ಯತ್ಯಾಸವೂ ತಿಳಿಯದಿರುವವ ಬುದ್ಧಿಯ ಬಗ್ಗೆ ಹೇವರಿಕೆ ಮಾಡಿದಷ್ಟು ಕಡಿಮೆಯೇ ಆಗಿದೆ. ಇಂತಹ ವಿಚಾರವೆಂದರೆ ವೈಚಾರಿಕೆ ದಿವಾಳಿತನವೇ ಹೌದು ! |