ಹರಿಯಾಣಾದಲ್ಲಿ `ಪೊಲೀಸ’ ಎಂದು ಬರೆದಿರುವ `ಸ್ಕಾರ್ಪಿಯೋ’ದಿಂದ ಗೋವುಗಳ ಕಳ್ಳ ಸಾಗಾಣಿಕೆ !

ಗುರುಗ್ರಾಮ (ಹರಿಯಾಣಾ) – ಇಲ್ಲಿ `ಪೊಲೀಸ’ ಎಂದು ಬರೆದಿರುವ `ಸ್ಕಾರ್ಪಿಯೋ’ ಮೂಲಕ ಗೋವು ಕಳ್ಳ ಸಾಗಾಟ ಮಾಡಿರುವುದು ಬಹಿರಂಗವಾಗಿದೆ. ಈ ವಾಹನದಲ್ಲಿ 3 ಹಸುಗಳನ್ನು ತುರುಕಲಾಗಿತ್ತು. ಅವುಗಳ ಬಾಯಿಯನ್ನು ಮುಚ್ಚಲಾಗಿತ್ತು.
ಈ ವಾಹನದಿಂದ ಗೋವುಗಳ ಕಳ್ಳ ಸಾಗಾಣಿಕೆಯಾಗುತ್ತಿರುವ ಮಾಹಿತಿ ಸಿಗುತ್ತಲೇ ಗೋರಕ್ಷಕ ಮೋನೂ ಮಾನೇಸರ ಇವನ ಸಹಕಾರಿಗಳು ಆ ವಾಹನವನ್ನು ಬೆನ್ನತ್ತಿದರು. ವಾಹನದಲ್ಲಿ ಏನಿದೆ ? ಎಂದು ಕಾಣಿಸಬಾರದೆಂದು ವಾಹನಕ್ಕೆ ಕಪ್ಪು ಗಾಜನ್ನು ಹಾಕಲಾಗಿತ್ತು. ಗೋರಕ್ಷಕರು ವಾಹನದ ವಿಡಿಯೋ ತಯಾರಿಸಿದರು. ಗೋರಕ್ಷಕರನ್ನು ನೋಡಿದ ಕೂಡಲೇ ಗೋವು ಕಳ್ಳ ಸಾಗಾಣಿಕೆದಾರರು ಗುಂಡಿನ ದಾಳಿ ನಡೆಸಿದರು. ಪ್ರತ್ಯುತ್ತರವಾಗಿ ರೋ ರಕ್ಷಕರು ವಾಹನದ ಟಾಯರ ಮೇಲೆ ಗುಂಡು ಹಾರಿಸಿದರು. ಇದರಿಂದ ವಾಹನದ ಟಾಯರ ಸ್ಪೋಟಗೊಂಡಿತು.

ಕುಂಡಲಿ-ಮಾನೆಸರ-ಪಲವಲ ಈ ಹೆದ್ದಾರಿಯಲ್ಲಿ ಈ ಘಟನೆ ನಡೆಯಿತು. ಮುಂಜಾನೆಯ ಸಮಯವಾಗಿದ್ದರಿಂದ ಎಲ್ಲ ಗೋವು ಕಳ್ಳ ಸಾಗಾಣಿಕೆದಾರರು ಕತ್ತಲೆಯ ಲಾಭವನ್ನು ಪಡೆದುಕೊಂಡು ಓಡಿ ಹೋದರು. ವಾಹನದಲ್ಲಿದ್ದ ಗೋವುಗಳನ್ನು ಬಿಡಿಸಿ ಅವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

ಇದರಿಂದ ಗೂಂಡಾಗಳು, ಗೋವು ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸ್ವಲ್ಪವೂ ಹೆದರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಇದು ಪೊಲೀಸರಿಗೆ ನಾಚಿಕೆಗೇಡು !