ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೆಕ್ರೆಟ್ ಫೈಲ್ಸ್’ ವೆಬ್ ಸೀರೀಸ್ ಬರಲಿದೆ !

ಮುಂಬಯಿ – ಸ್ವಾತಂತ್ರ್ಯ ವೀರ ಸಾವರ್ಕರ ಇವರ ಜೀವನಾಧಾರಿತ ‘ವೀರ ಸಾವರ್ಕರ – ಸೀಕ್ರೆಟ್ ಫೈಲ್ಸ್’ ಈ ಹಿಂದಿ ವೆಬ್ ಸೀರೀಸ್ ಸ್ವಾತಂತ್ರ್ಯ ವೀರ ಸಾವರ್ಕರ ಇವರ ಪುಣ್ಯತಿಥಿಯ ಪ್ರಯುಕ್ತ ಫೆಬ್ರವರಿ ೨೬, ೨೦೨೪ ರಂದು ಪ್ರಸಾರವಾಗುವುದು. ಈ ‘ವೆಬ್ ಸೀರೀಸ್’ ನ ಪೋಸ್ಟರ್ ಮತ್ತು ಟೀಸರ್ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರದರ್ಶನ ಗೊಳಿಸಲಾಗಿದೆ. ಮರಾಠಿ ನಾಯಕ ಸೌರಭ ಗೋಖಲೆ ಇವರು ಈ ‘ವೆಬ್ ಸೀರೀಸ್’ನಲ್ಲಿ ವೀರ ಸಾವರ್ಕರ ಪಾತ್ರ ನಿಭಾಯಿಸುವವರಿದ್ದಾರೆ.

ಈ ‘ವೆಬ್ ಸೀರೀಸ್’ನ ಲೇಖಕ ಮತ್ತು ನಿರ್ದೇಶನ ಯೋಗೇಶ ಸೋಮಣ ಇವರು ಮಾಡುವವರಿದ್ದೂ ನಿರ್ಮಾಣ ಡಾ. ಅನಿರಬನ ಸರಕಾರ ಇವರು ಮಾಡುವವರಿದ್ದಾರೆ. ಈ ‘ವೆಬ್ ಸೀರೀಸ್’ ಮೂರು ಭಾಗಗಳಲ್ಲಿ ಪ್ರದರ್ಶನ ಗೊಳಿಸಲಾಗುವುದು. ಇದರ ಮಾಹಿತಿ ನೀಡುವಾಗ ಡಾ. ಅನಿರಬನ ಸರಕಾರ ಇವರು, ”ಈ ‘ವೆಬ್ ಸೀರೀಸ್’ ಮೂಲಕ ಸಾವರ್ಕರ ವಿಚಾರ, ಶೌರ್ಯ, ಬಲಿದಾನ ಯುವಕರ ಮುಂದೆ ತರುವ ಪ್ರಯತ್ನ ಇರುವುದು” ಎಂದು ಹೇಳಿದರು. ಈ ‘ವೆಬ್ ಸೀರೀಸ್’ ನಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಇವರ ಪಾತ್ರ ನಿರ್ವಹಿಸುವ ಸೌರಭ ಗೋಖಲೆ ಇವರು, ಯಾವುದೇ ಕಲಾವಿದನಿಗೆ ಐತಿಹಾಸಿಕ ಪಾತ್ರ ನಿಭಾಯಿಸಲು ಸಿಗುವುದು ಅದು ಅವರ ಪುಣ್ಯವಾಗಿದೆ, ಎಂದು ಹೇಳಿದರು. ಈ ಹಿಂದೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಈಗ ಸ್ವಾತಂತ್ರ್ಯವೀರ ಸಾವರ್ಕರ್ ಇವರ ಪಾತ್ರ ನಿರ್ವಹಿಸುವ ಅವಕಾಶ ನನಗೆ ದೊರೆತಿದೆ. ವೀರ ಸಾವರ್ಕರ ಸಾಹಿತ್ಯ ಓದಿ, ಅವರ ಜೀವನದ ಅಭ್ಯಾಸ ನಡೆಸಿ ಒಳ್ಳೆಯ ರೀತಿಯಲ್ಲಿ ಈ ಪಾತ್ರ ನಿರ್ವಹಿಸುವ ಪ್ರಯತ್ನ ನನ್ನದಾಗಿದೆ. ಎಂದು ಹೇಳಿದರು.