ಇಂದೂರ (ಮಧ್ಯಪ್ರದೇಶ) ಇಲ್ಲಿ ಮುಸಲ್ಮಾನ ಸ್ನೇಹಿತೆಯೊಂದಿಗೆ ಇದ್ದ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಹಲ್ಲೆ

ಓದಲು ಹೋಗಿದ್ದ 2 ಜನರನ್ನು ಮತಾಂಧರು ಚೂರಿಯಿಂದ ಇರಿದರು

ಇಂದೂರ (ಮಧ್ಯಪ್ರದೇಶ) – ಇಲ್ಲಿ ಹಿಂದೂ ಯುವಕನೊಂದಿಗೆ ಮುಸಲ್ಮಾನ ಸ್ನೇಹಿತೆಯು ಬೈಕ್ ನಿಂದ ಹೋಗುತ್ತಿದ್ದ ಯುವಕನನ್ನು ಮತಾಂಧ ಮುಸಲ್ಮಾನರು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಮೇ 26 ರಂದು ರಾತ್ರಿ ನಡೆದಿದೆ. ಈ ಸಮಯದಲ್ಲಿ ಹಿಂದೂ ಯುವಕನನ್ನು ರಕ್ಷಿಸಲು ಬಂದಂತಹ ಇಬ್ಬರೂ ಯುವಕರಿಗೆ ಮತಾಂಧ ಮುಸಲ್ಮಾನರು ಚೂರಿಯಿಂದ ಇರಿದಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ಪೊಲೀಸರು ನೀಡಿರುವ ಮಾಹಿತಿಯನುಸಾರ ಓರ್ವ ಹಿಂದೂ ಯುವಕ ಮತ್ತು ಮುಸಲ್ಮಾನ ಯುವತಿ ಊಟಕ್ಕಾಗಿ ಉಪಾಹಾರಗೃಹಕ್ಕೆ ಹೋಗಿದ್ದರು. ಇದರ ಮಾಹಿತಿ ಸಿಗುತ್ತಲೇ ಮತಾಂಧ ಮುಸಲ್ಮಾನ ಯುವಕರು ಅವರನ್ನು ಬೆನ್ನು ಹತ್ತಿದ್ದಾರೆ. ಯುವಕ ಮತ್ತು ಯುವತಿ ಉಪಾಹಾರಗೃಹದಿಂದ ಹೊರಗೆ ಬಂದ ಕೂಡಲೇ ಅವನನ್ನು ಯುವಕರು ಸುತ್ತುವರಿದರು ಮತ್ತು ಅವನ ಹೆಸರನ್ನು ಕೇಳಿದರು. ಯುವಕನು ಹಿಂದೂ ಮತ್ತು ಯುವತಿ ಮುಸ್ಲಿಂ ಆಗಿರುವುದು ತಿಳಿದಕೂಡಲೇ ಮುಸಲ್ಮಾನ ಯುವಕರು ಇವರಿಬ್ಬರನ್ನು ಥಳಿಸಲು ಪ್ರಾರಂಭಿಸಿದರು. ‘ಹಿಂದೂ ಯುವಕನೊಂದಿಗೆ ಊಟಮಾಡಲು ಏಕೆ ಹೋಗಿದ್ದೀ ?’ ಎಂದು ಮುಸಲ್ಮಾನರು ಯುವತಿಯನ್ನು ಕೇಳಿದರು. ಈ ಯುವತಿಯು `ಪೋಷಕರಿಗೆ ತಿಳಿಸಿಯೇ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದೆನು’ ಎಂದು ಹೇಳಿದಳು. ಆದರೂ ಮುಸಲ್ಮಾನ ಯುವಕರು ಅವರನ್ನು ಥಳಿಸಿದರು. ಹಾಗೆಯೇ ಅವರ ಮೇಲೆ ಚೂರಿಯಿಂದ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಇಬ್ಬರು ರಕ್ಷಿಸಲು ಮುಂದೆ ಬಂದರು. ಆ ಸಮಯದಲ್ಲಿ ಅವರಿಗೆ ಚೂರಿಯಿಂದ ಇರಿದರು.

ಸಂಪಾದಕರ ನಿಲುವು

* ಲವ್ ಜಿಹಾದ ಮೂಲಕ ಹಿಂದೂ ಯುವತಿಯರನ್ನು ಮೋಸಗೊಳಿಸಿದ ಮುಸಲ್ಮಾನ ಯುವಕನನ್ನು ಹಿಂದೂಗಳು ಕಾರಣ ಕೇಳಿದಾಗ ಅದನ್ನು ವಿರೋಧಿಸುವ ಕಪಟಿ ಜಾತ್ಯತೀತವಾದಿ ರಾಜಕೀಯ ಪಕ್ಷ ಈಗೇಕೆ ಏನೂ ಮಾತನಾಡುವುದಿಲ್ಲ ?

* ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !