ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಡಾಸ್ನಾ ದೇವಸ್ಥಾನಕ್ಕೆ ಅನುಮಾನಾಸ್ಪದವಾಗಿ ಪ್ರವೇಶಿಸಿದ ಮೊಹಸಿನ ಅನ್ನು ಬಂಧಿಸಲಾಗಿದೆ. ಈ ಹುಡುಗಿಯರಲ್ಲಿ ಒಬ್ಬಳು ಹಿಂದೂ ಮತ್ತು ಇನ್ನೊಬ್ಬಳು ಮುಸ್ಲಿಂಯಾಗಿದ್ದಾಳೆ. ಅವರು ಆಧಾರ್ ಕಾರ್ಡ್ ತೋರಿಸಿ ದೇವಸ್ಥಾನ ಪ್ರವೇಶಿಸಿದ್ದರು. ದೇವಸ್ಥಾನದ ಮಹಂತ ಯತಿ ಸರಸಿಂಹಾನಂದ ಇವರು, ಮೊಹಸಿನ ದೇವಸ್ಥಾನವನ್ನು ಪ್ರವೇಶಿಸಿ ಇಲ್ಲಿನ ಮಾಹಿತಿಯನ್ನು ಸಂಗ್ರಹಿಸಲು ಬಯಸಿದ್ದನು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ದೇವಸ್ಥಾನದಿಂದ ಪೊಲೀಸರಿಗೆ ದೂರು ನೀಡಿಲ್ಲ. ಆದರೆ, ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
Mohsin and a minor Muslim girl enter Dasna temple using ID of a minor Hindu girl, all 3 detained, Yati Narsinghanand accuses him of doing reccehttps://t.co/d1G3i6GNio
— OpIndia.com (@OpIndia_com) May 17, 2023
೧. ಮಹಂತ ಯತಿ ನರಸಿಂಹಾನಂದ ಇವರು, ಮೊಹಸಿನನಿಗೆ ೨೫ ವರ್ಷ ವಯಸ್ಸಾಗಿದೆ. ಆತ ಪ್ರತಿದಿನ ತನ್ನ ಕುಟುಂಬದೊಂದಿಗೆ ಬರುವ ಅಪ್ರಾಪ್ತ ಹಿಂದೂ ಹುಡುಗಿಯ ಆಧಾರ್ ಕಾರ್ಡ್‌ನ ಆಧಾರದ ಮೇಲೆ ದೇವಾಲಯವನ್ನು ಪ್ರವೇಶಿಸಿದ್ದನು; ಆದರೆ ನನ್ನ ಖಾಸಗಿ ಭದ್ರತಾ ಸಿಬ್ಬಂದಿಯವರು ಅವನನ್ನು ಹಿಡಿದರು. ಅವನನ್ನು ಪರಿಶೀಲಿಸಿದಾಗ ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ.
೨. ಈ ಹಿಂದೆ ೨೦೨೧ ರಲ್ಲಿ, ಕಾಶಿಫ್ ಮತ್ತು ವಿಪುಲ್ ಎಂಬ ಇಬ್ಬರು ಯುವಕರು ದೇವಾಲಯವನ್ನು ನುಗ್ಗಿದರು. ಅವರಬಳಿ ‘ಸೈನೆಡ್’ (ಒಂದು ರೀತಿಯ ವಿಷ) ಮತ್ತು ‘ಸರ್ಜಿಕಲ್ ಬ್ಲೇಡ್’ (ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್) ಪತ್ತೆಯಾಗಿತ್ತು. ಈ ಘಟನೆಯ ಕೆಲವು ತಿಂಗಳ ನಂತರ, ಕೆಲವರು ಮುಂಜಾನೆ ದೇವಸ್ಥಾನಕ್ಕೆ ನುಗ್ಗಿ ೨ ಸಾಧುಗಳನ್ನು ಚಾಕುವಿನಿಂದ ಇರಿದಿದ್ದಾರೆ.
Mohsin was detained for barging into the Dasna temple in Ghaziabad of Uttar Pradesh.
He was accompanied by 2 minor girls. Reportedly, one minor girl is Hindu, and the trio entered the Hindu temple using the Aadhaar card of the Hindu girl.
Although no complaint has been lodged… https://t.co/8T6SE0jfN9 pic.twitter.com/n0aFAHAF9g
— Pagan 🚩 (@paganhindu) May 18, 2023