‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಭಾಗ ಬರಲಿದೆ !

ನಿರ್ದೇಶಕ ಸುದೀಪ್ತೋ ಸೇನ್ ಇವರಿಂದ ಪರೋಕ್ಷವಾಗಿ ಮಾಹಿತಿ !

ಮುಂಬಯಿ – ‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಭಾಗ ಶೀಘ್ರದಲ್ಲೇ ತಯಾರಾಗಲಿದೆ ಎಂದು ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ. ಸುದೀಪ್ತೋ ಸೇನ್ ಅವರು, ನನ್ನ ಬಳಿ ಅನೇಕ ಕಥೆಗಳಿವೆ, ಅದನ್ನು ಜನರಿಗೆ ತಿಳಿಸಲು ಬಯಸುತ್ತೇನೆ. ‘ದಿ ಕೇರಳ ಸ್ಟೋರಿ’ ಚಿತ್ರದ ಯಶಸ್ಸಿನ ನಂತರ ನಾನು ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ಈ ಸಿನಿಮಾ ಮಾಡಲು ನನಗೆ 7 ವರ್ಷ ಬೇಕಾಯಿತು. ಈ ಚಿತ್ರ ಸಕ್ಸಸ್ ಆಗುತ್ತೆ ಅಂತ ಗೊತ್ತಿತ್ತು ಎಂದು ಹೇಳಿದರು.