ನವದೆಹಲಿ – ‘ಸ್ಟಾರ್‌ಬಕ್ಸ್’ ಕಂಪನಿಯ ಹೊಸ ಜಾಹೀರಾತಿನಲ್ಲಿ, ಲಿಂಗ ಪರಿವರ್ತನೆಯ ವಿಕೃತತೆಯನ್ನು ವೈಭವೀಕರಿಸಿದೆ. ಇದರಲ್ಲಿ ಒಬ್ಬ ಹುಡುಗ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಹುಡುಗಿಯಾಗಲು ಲಿಂಗವನ್ನು ಬದಲಾಯಿಸುವುದನ್ನು ತೋರಿಸಲಾಗಿದೆ ಮತ್ತು ಪೋಷಕರು ಅದನ್ನು ಶಾಂತವಾಗಿ ಒಪ್ಪಿಕೊಳ್ಳುತ್ತಾರೆ ಎಂಬ ಸಂದೇಶವನ್ನು ನೀಡುತ್ತದೆ. (ಒಂದೆಡೆ ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಮತ್ತೊಂದೆಡೆ ಲಿಂಗ ಪರಿವರ್ತನೆಯಂತಹ ಅಸ್ವಾಭಾವಿಕ ಪದ್ದತಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಭಾರತದಾದ್ಯಂತ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಧರ್ಮಪ್ರೇಮಿ ಹಿಂದೂಗಳು ಒಗ್ಗೂಡಿ ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ! – ಸಂಪಾದಕರು) ಈ ಜಾಹೀರಾತಿಗೆ ಹಿಂದೂಗಳು ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಜಾಹೀರಾತಿನಲ್ಲಿ ವಯಸ್ಸಾದ ದಂಪತಿಗಳು ‘ಸ್ಟಾರ್‌ಬಕ್ಸ್’ ನ ಒಂದು ಅಂಗಡಿಯಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಹೆಂಡತಿಯೊಬ್ಬಳು ತನ್ನ ಪತಿಗೆ, ‘ಈ ಬಾರಿ ನೀವು ಕೋಪಗೊಳ್ಳಬಾರದು ಇಲ್ಲಿ ಎನೇಯಾದರೂ ನೀವು ಅದನ್ನು ಶಾಂತತೆಯಿಂದ ಸ್ವೀಕಾರ ಮಾಡಬೇಕು’. ಎಂದು ತನ್ನ ಗಂಡನಿಗೆ ಹೇಳುತ್ತಾಳೆ, ಸ್ವಲ್ಪ ಸಮಯದ ನಂತರ ಅವರ ಮಗ ‘ಅರ್ಪಿತ್’ ತನ್ನ ಲಿಂಗವನ್ನು ಬದಲಿಸಿ ಹುಡುಗಿಯ ವೇಷದಲ್ಲಿ ಬರುತ್ತಾನೆ. ಆಗ ಅರ್ಪಿತ್ ಲಿಂಗ ಬದಲಾಯಿಸಿದ್ದಾರೆ ಎಂದು ಪೋಷಕರಿಗೆ ಮೊದಲ ಬಾರಿಗೆ ತಿಳಿಯುತ್ತದೆ. ತಂದೆ ಎಲ್ಲರಿಗೂ ‘ಕಾಫಿ’ ತರಿಸುತ್ತಾರೆ. ಸ್ವಲ್ಪ ಸಮಯದ ನಂತರ ‘ಸ್ಟಾರ್‌ಬಕ್ಸ್’ ಸಿಬ್ಬಂದಿಯು ಅರ್ಪಿತ್ ಅನ್ನು ‘ಅರ್ಪಿತಾ’ ಎಂದು ಕರೆದು ಕಾಫಿ ಸಿದ್ಧವಾಗಿದೆ ಎಂದು ಹೇಳುತ್ತಾನೆ. ಇದನ್ನು ಒಂದು ರೀತಿಯಲ್ಲಿ ತಂದೆಯು ಮಗನ ಲಿಂಗ ಪರಿವರ್ತನೆಯನ್ನು ಒಪ್ಪಿಕೊಂಡಿದ್ದಾರೆ ಎಂದು ತೋರಿಸಲಾಗಿದೆ. ತಂದೆ, “ನೀನು ಇನ್ನೂ ನನ್ನ ಮಗು. ನಿನ್ನ ಹೆಸರಿಗೆ ಒಂದೇ ಒಂದು ಅಕ್ಷರ ಸೇರ್ಪಡೆಯಾಗಿದೆ !” ಆಗ ಎಲ್ಲರೂ ಭಾವನಾಶೀಲರಾಗಿರುವುದು ತೋರಿಸಲಾಗಿದೆ.
ಈ ಕಂಪನಿಯವಿರುದ್ಧ ಹಿಂದೂಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಯ ವಿರುದ್ಧ ಟ್ವಿಟರ್‌ನಲ್ಲಿ ‘#BoycottStarbucks’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ‘ಅರ್ಪಿತ್-ಅರ್ಪಿತಾ’ ಬದಲಿಗೆ ‘ಸಲೀಂ-ಸಲ್ಮಾ’ ಎಂಬ ಹೆಸರಿನೊಂದಿಗೆ ಜಾಹೀರಾತು ನೀಡಲು ಸ್ಟಾರ್‌ಬಕ್ಸ್ ಧೈರ್ಯ ಮಾಡುತ್ತದೆಯೇ ?” ಎಂಬ ಪ್ರಶ್ನೆಯನ್ನು ಓರ್ವ ಹಿಂದೂ ಕೇಳಿದ್ದಾನೆ.
“Unacceptable”: #Twitter after #Starbucks shares ads on promoting “#sexchange” in #India, opposes gender-affirming operations: https://t.co/iuCDbUxxvK
— News Bharati (@eNewsBharati) May 11, 2023
ಸಂಪಾದಕರ ನಿಲುವು‘ಲಿವ್ ಇನ್ ರಿಲೇಶನ್ ಶಿಪ್’ ಎಂಬ ನಿರಂಕುಶತೆ ಮಾದ್ಯಮದಿಂದ ಭಾರತದ ಯುವ ಪೀಳಿಗೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ ನಂತರ, ಈಗ ಇದು ‘ಲಿಂಗ ಪರಿವರ್ತನೆ’ ಎಂಬ ವಿರೂಪವನ್ನು ವೈಭವೀಕರಣಗೊಳಿಸುವುದು ಇದು ಅಂತರರಾಷ್ಟ್ರೀಯ ಷಡ್ಯಂತ್ರ ಎಂಬುವುದನ್ನು ತಿಳಿಯಿರಿ ! ಅಮೆರಿಕದ ಕಂಪನಿ ‘ಸ್ಟಾರ್‌ಬಕ್ಸ್’ ನ ಭಾರತೀಯ ವ್ಯವಹಾರವು ‘ಟಾಟಾ’ ಕಂಪನಿಸಮೂಹದ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಹಾಗಾಗಿ ಈಗ ‘ಟಾಟಾ’ ಅವರು ಛೀಮಾರಿ ಹಾಕಿ ಜಾಹೀರಾತನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ! |