ನವ ದೆಹಲಿ – ಮುಂದಿನ 10 ವರ್ಷಗಳಲ್ಲಿ ಭಾರತವು ಇಡೀ ವಿಶ್ವದ ಅತಿದೊಡ್ಡ ಆರ್ಥಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಕಾರ್ಯತಂತ್ರದ ಮಹಾಶಕ್ತಿಯಾಗಲಿದೆ ಎಂದು ಯೋಗಋಷಿ ರಾಮದೇವ ಬಾಬಾ ಇಲ್ಲಿ ಹೇಳಿದರು. ಯೋಗಋಷಿ ರಾಮದೇವ ಬಾಬಾ ಅವರ ನೇತೃತ್ವದಲ್ಲಿ ಪತಂಜಲಿ ವಿಶ್ವವಿದ್ಯಾಲಯ, ಭಾರತ ಸ್ವಾಭಿಮಾನ (ಮಹಿಳಾ ವಿಭಾಗ) ಮತ್ತು ಡಬ್ಲ್ಯು-20, ಜಿ-20 ಪಾಲುದಾರ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಅಂದಾಜು 5 ಸಾವಿರದ 500 ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಯೋಗಋಷಿ ರಾಮದೇವ ಬಾಬಾರವರು ಮಾತನಾಡುತ್ತಿದ್ದರು.
ಮುಂದೆ ಮಾತನಾಡಿದ ಅವರು, “ಯೋಗವು ರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಹಬ್ಬುವುದು ಮತ್ತು ಯೋಗ ಧರ್ಮದ ಜೊತೆಗೆ ಇಡೀ ಜಗತ್ತಿನಲ್ಲಿ ಸನಾತನ ಧರ್ಮದ ಕೀರ್ತಿ ಹೆಚ್ಚಾಗುವುದು. ಪ್ರತಿಕೂಲ ಸಂದರ್ಭಗಳಲ್ಲಿ, ವಿಪತ್ತುಗಳು ಅಥವಾ ಸಂದಿಗ್ಧ ಪರಿಸ್ಥಿತಿಗಳಲ್ಲಿ ಸ್ವಧರ್ಮದಿಂದ ವಿಚಲಿತರಾಗಬೇಡಿ, ತಾಳ್ಮೆಯಿಂದಿರಿ, ಯೋಗವನ್ನು ಕಲಿಯಿರಿ, ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಾನು ತಾಯಂದಿರು ಮತ್ತು ಸಹೋದರಿಯರಲ್ಲಿ ಮನವಿ ಮಾಡುತ್ತೇನೆ’.