‘ದಿ ಕೇರಳ ಸ್ಟೋರಿ’ ಬಗ್ಗೆ ಶಬಾನಾ ಅಝಮಿಯವರ ‘ಚಾಣಾಕ್ಷತೆ’ಯು ಸಾಮಾಜಿಕ ಜಾಲತಾಣಗಳ ಮೂಲಕ ಬಯಲು !

ನಟಿ ಶಬಾನಾ ಅಝಮಿ

ಮುಂಬೈ – ಖ್ಯಾತ ನಟಿ ಶಬಾನಾ ಅಝಮಿ ಅವರು ‘ದಿ ಕೇರಳ ಸ್ಟೋರಿ’ ಚಿತ್ರದ ಕುರಿತು ಟ್ವೀಟ್ ಮಾಡಿದ್ದು, `ನಟ ಅಮೀರ್ ಖಾನ್ ಇವರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬ್ಯಾನ್ ಮಾಡಬೇಕೆಂಬ ಈ ಹಿಂದಿನ ಆಗ್ರಹದಂತೆಯೇ ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ನಿಷೇಧಿಸುವ ಆಗ್ರಹವೂ ತಪ್ಪಾಗಿದೆ. ಈ ಚಿತ್ರವನ್ನು ನಿಷೇಧಿಸುವುದು ತಪ್ಪು. ಒಮ್ಮೆ ಚಿತ್ರವೊಂದು ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿಯಿಂದ (’ಸೆನ್ಸಾರ್ ಮಂಡಳಿ’) ಪ್ರಮಾಣಪತ್ರವನ್ನು ಪಡೆದರೆ, ಅದರಲ್ಲಿ ಬೇರೆ ಯಾವುದೇ ಸಾಂವಿಧಾನಿಕ ಸಂಸ್ಥೆಗಳ ಪಾತ್ರವಿರುವುದಿಲ್ಲ”, ಎಂದಿದ್ದಾರೆ. ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅಝಮಿ ಅವರ ಟ್ವೀಟ್‌ನ ಕುತಂತ್ರವನ್ನು ಬಹಿರಂಗಪಡಿಸಿದರು. ಸೋಷಿಯಲ್ ಮೀಡಿಯಾ ಬಳಕೆದಾರರು, “ಶಬಾನಾ ಅಝಮಿ ತಮ್ಮ ಟ್ವೀಟ್‌ನಲ್ಲಿ ‘ದಿ ಕೇರಳ ಸ್ಟೋರಿ’ ಅನ್ನು ನಿಷೇಧಿಸುವಂತೆ ನೇರವಾಗಿ ಒತ್ತಾಯಿಸದಿದ್ದರೂ, ಅಮೀರ್ ಖಾನ್ ಅವರ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದವರನ್ನು ಬಹಳ ಚಾಣಾಕ್ಷತೆಯಿಂದ ಗುರಿಯಾಗಿಸಿದ್ದಾರೆ”, ಎಂದಿದ್ದಾರೆ. ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬ್ಯಾನ್ ಮಾಡುವ ಬಗ್ಗೆ ಯಾರೂ ಮಾತನಾಡಿರಲಿಲ್ಲ.

ಶಬಾನಾ ಅಝಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುವಾಗ, ಅನೇಕರು ನಿಷೇಧ ಮತ್ತು ಬಹಿಷ್ಕಾರದ ಅರ್ಥವನ್ನು ಸ್ಪಷ್ಟಪಡಿಸಿದ್ದಾರೆ. ಓರ್ವ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ‘ಶಬಾನಾಜಿ ನೀವು ‘ದಿ ಕೇರಳ ಸ್ಟೋರಿ’ ಅನ್ನು ನಿಷೇಧಿಸುವ ಆಗ್ರಹವಿದೆ ಎಂದು ಹೇಳಬೇಕಿತ್ತು, ಆದರೆ ‘ಲಾಲ್ ಸಿಂಗ್ ಚಡ್ಡಾ’ ಅನ್ನು ನಿಷೇಧಿಸುವ ಬಗ್ಗೆ ಯಾವುದೇ ಚರ್ಚೆ ಇರಲಿಲ್ಲ’, ಎಂದಿದ್ದಾರೆ.

ಬಾಲಿವುಡ್ ಮತ್ತು ಅದರ ಹಿಂದೂವಿರೋಧಿ ಮನಸ್ಥಿತಿಯಿಂದಾಗಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಬಹಿಷ್ಕರಿಸುವಂತೆ ಈ ಹಿಂದೆ ಹಲವರು ಕರೆ ನೀಡಿದ್ದರು.