ಭೂತ ತೆಗೆಯಲು ಮನೆಗೆ ಬಂದ ಉಸ್ಮಾನ್ ನಿಂದ ಮಹಿಳೆಯ ಮಾನಭಂಗಕ್ಕೆ ಯತ್ನ !

ಮಹಿಳೆಯು ಉಸ್ಮಾನ್‌ನ ಶಿಶ್ನವನ್ನು ಕತ್ತರಿಸಿದಳು

ಗೌಹಾಟಿ – ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಬೋರಲಿಮರಿಯಲ್ಲಿ ಮಹಿಳೆಯೊಬ್ಬರು ಉಸ್ಮಾನ್ ಅಲಿಯ ಶಿಶ್ನವನ್ನು ಕತ್ತರಿಸಿದ ಘಟನೆ ಮೇ 8 ರಂದು ನಡೆದಿದೆ. ಉಸ್ಮಾನ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

1. ಭುರಗಾಂವ್ ಪೊಲೀಸ್ ಉಸ್ತುವಾರಿ ಹೇಮಂತ್ ಬೊರ್ಗೊಹೆನ್ ಇವರು, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗಾಯಗೊಂಡ ಉಸ್ಮಾನ್‌ನನ್ನು ಚಿಕಿತ್ಸೆಗಾಗಿ ಗೌಹಾಟಿಗೆ ಕಳುಹಿಸಲಾಗಿದೆ.

2. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಉಸ್ಮಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

3. ವಾರ್ತಾ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ, ಸಂತ್ರಸ್ತೆಗೆ ಮಕ್ಕಳಿಲ್ಲ. ಈ ಸಮಸ್ಯೆಯಿಂದ ಉಸ್ಮಾನ್ ಬಳಿ ಹೋಗುತ್ತಿದ್ದಳು.

4. ಭೂತೋಚ್ಚಾಟನೆಯ ನೆಪದಲ್ಲಿ ಉಸ್ಮಾನ್ ಆಕೆಯ ಮನೆಗೆ ಬಂದಿದ್ದ. ಈ ವೇಳೆ ಉಸ್ಮಾನ್ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನನ್ನು ವಿರೋಧಿಸಿದ ಮಹಿಳೆ ಉಸ್ಮಾನ್‌ನ ಶಿಶ್ನವನ್ನು ಕತ್ತರಿಸಿದ್ದಾಳೆ.