ಗುಜರಾತ್ ನಲ್ಲಿ 2016 ರಿಂದ 2020 ಈ 5 ವರ್ಷಗಳಲ್ಲಿ 41 ಸಾವಿರಗಿಂತಲೂ ಹೆಚ್ಚಿನ ಮಹಿಳೆಯರು ನಾಪತ್ತೆ

ಕರ್ಣಾವತಿ (ಗುಜರಾತ) – ಗುಜರಾತ್ ನಿಂದ 2016 ರಿಂದ 2020 ಈ 5 ವರ್ಷಗಳಲ್ಲಿ 41 ಸಾವಿರಗಿಂತಲೂ ಹೆಚ್ಚಿನ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು `ರಾಷ್ಟ್ರೀಯ ಅಪರಾಧ ನೊಂದಣಿ ಆಯೋಗ’ದ ವರದಿಯಿಂದ ಬಹಿರಂಗವಾಗಿದೆ. 2016 ರಲ್ಲಿ 7 ಸಾವಿರದ 105, 2017 ರಲ್ಲಿ 7 ಸಾವಿರದ 712, 2018 ರಲ್ಲಿ 9 ಸಾವಿರದ 246, 2019 ರಲ್ಲಿ 9 ಸಾವಿರದ 268, 2020 ರಲ್ಲಿ 8 ಸಾವಿರದ 290 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆಂದು ಈ ವರದಿಯಲ್ಲಿ ನಮೂದಿಸಲಾಗಿದೆ. ನಾಪತ್ತೆಯಾಗಿರುವ ಹುಡುಗಿಯರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರ ಅಂಕಿ-ಅಂಶಗಳನ್ನು ಸೇರಿಸಿಲ್ಲ.


 

 

ಸಂಪಾದಕೀಯ ನಿಲುವು

ದೇಶಾದ್ಯಂತ ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗುತ್ತಿರುವ ಪ್ರಮಾಣ ಹೆಚ್ಚುತ್ತಿರುವುದು ನೋಡಿದರೆ, ಈಗ ಇದನ್ನು `ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಕ್ರಮ ಕೈಕೊಳ್ಳುವ ಆವಶ್ಯಕತೆಯಿದೆ !