ರಾಹುಲ ಗಾಂಧಿಯವರ ಗ್ಯಾರಂಟಿ ಯಾರು ತೆಗೆದುಕೊಳ್ಳುತ್ತಾರೆ ? – ಆಸ್ಸಾಂ ಮುಖ್ಯಮಂತ್ರಿ ಸರಮಾ ಇವರ ಸವಾಲು

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಮಂಗಳೂರು – ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆಯ ಚುನಾವಣೆಯ ಪ್ರಚಾರ ಸಧ್ಯಕ್ಕೆ ಉತ್ತುಂಗವನ್ನು ತಲುಪಿದೆ. ಮೇ 7 ರಂದು ಮಂಗಳೂರಿನ ಒಂದು ಪ್ರಚಾರಸಭೆಯಲ್ಲಿ ಮಾತನಾಡುವಾಗ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿಯವರ ಮೇಲೆ ಟೀಕಾಸ್ತ್ರ ಮಾಡಿದರು. ಅವರು, ‘`ರಾಹುಲ ಗಾಂಧಿ ಕರ್ನಾಟಕ ಜನತೆಗೆ ಗ್ಯಾರಂಟಿ ನೀಡುತ್ತಿದ್ದಾರೆ; ಆದರೆ ರಾಹುಲ ಗಾಂಧಿಯವರ ಗ್ಯಾರಂಟಿಯನ್ನು ಯಾರು ತೆಗೆದುಕೊಳ್ಳುತ್ತಾರೆ ? ಯಾವ ವ್ಯಕ್ತಿ ಜನತೆಯ ಗ್ಯಾರಂಟಿಯಾಗಲು ಸಾಧ್ಯವಿಲ್ಲವೋ, ಅವರ ಗ್ಯಾರಂಟಿಯನ್ನು ನಾವು ನಂಬಬಹುದೇ? ರಾಹುಲ ಗಾಂಧಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಸೋನಿಯಾ ಗಾಂಧಿಯವರು ಕಳೆದ 20 ವರ್ಷಗಳಿಂದ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ’’ ಎಂದು ಹೇಳಿದರು.

ಮುಖ್ಯಮಂತ್ರಿ ಸರಮಾ ತಮ್ಮ ಮಾತನ್ನು ಮುಂದುವರಿಸಿ, ಯಾವಾಗ `ಪಿ.ಎಫ್.ಐ.’ ಸಂಘಟನೆಯನ್ನು ನಿಷೇಧಿಸಲಾಯಿತೋ ಆಗ ಅನೇಕ ಪಕ್ಷಗಳು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯನವರು ಅಧಿಕಾರದಲ್ಲಿರುವಾಗ ಅವರು `ಪಿ.ಎಫ್.ಐ.’ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು, ಈ ಸಂಘಟನೆಯ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು.