‘ಹುಡುಗಿಯರಿಗೆ ಹಿಜಾಬ್ ತೊಟ್ಟು ಒಬ್ಬಂಟಿಯಾಗಿ ಶಾಲೆ ಅಥವಾ ಕಾಲೇಜುಗಳಿಗೆ ಕಳುಹಿಸಬಾರದಂತೆ !’

ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ನ ಮೌಲಾನಾ ಸಜ್ಜಾದ್ ನೋಮಾನಿ ಇವರಿಂದ ಮುಸಲ್ಮಾನ ಪೋಷಕರಿಗೆ ಕರೆ !

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ)

(ಮೌಲಾನ ಎಂದರೆ ಇಸ್ಲಾಂನ ಅಭ್ಯಾಸಕ)

ಮೌಲಾನಾ ಸಜ್ಜಾದ್ ನೋಮಾನಿ

ನವ ದೆಹಲಿ – ನಿಮ್ಮ ಹುಡುಗಿಯರು ಹಿಜಾಬ್ ಹಾಕಿಯೇ ಶಾಲೆ ಮತ್ತು ಕಾಲೇಜುಗಳಿಗೆ ಒಬ್ಬಂಟಿಯಾಗಿ ಕಳುಹಿಸಬೇಡಿ ? ಇದು ಹರಾಮ್ (ಇಸ್ಲಾಂನ ಪ್ರಕಾರ ನಿಷಿದ್ಧ) ಆಗಿರುವುದು. ಪವಿತ್ರ ರಮಜಾನ್ ನಲ್ಲಿ ಯಾರು ತಮ್ಮ ಹುಡುಗಿಯರನ್ನು ಒಬ್ಬಂಟಿಯಾಗಿ ಕಲಿಯಲು ತರಗತಿಗೆ ಕಳುಹಿಸುತ್ತಾರೆ, ನಾನು ಅವರನ್ನು ಧಿಕ್ಕರಿಸುತ್ತೇನೆ. ಅಲ್ಲಾ ಅವನಿಗೆ ನರಕದಲ್ಲಿ ಕಳುಹಿಸುವನು, ಎಂದು ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ನ ಮೌಲಾನ ಸಜ್ಜಾದ ನೋಮನಿ ಇವರು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

ಮೌಲಾನ ನೋಮಾನಿ ಮಾತು ಮುಂದುವರೆಸುತ್ತಾ, ಈ ಹುಡುಗಿಯರು ಶಾಲೆಗೆ ಹೋಗಿ ತರಗತಿಯಲ್ಲಿ ಕೂರುತ್ತಾರೋ ಅಥವಾ ಬೇರೆ ಎಲ್ಲಿ ಹೋಗುತ್ತಾರೆ ಇದು ಅವರ ಪೋಷಕರಿಗೆ ತಿಳಿದಿದೆಯೇ ? ಪೋಷಕರು ಅವರ ಹುಡುಗಿಯರನ್ನು ಒಬ್ಬಂಟಿಯಾಗಿ ಶಾಲೆ ಅಥವಾ ಕಾಲೇಜುಗಳಿಗೆ ಹೋಗಲು ಬಿಡಬೇಡಿ. ಅವರು ಪ್ರಾಧ್ಯಾಪಕರಿಗೆ ಭೇಟಿ ಮಾಡಿ, ಹುಡುಗಿ ಕಾಲೇಜಿಗೆ ಬಂದು ತರಗತಿಯಲ್ಲಿ ಕುಳಿತಿದ್ದಾಳೆ ಅಥವಾ ಇಲ್ಲ ಇದರ ಮಾಹಿತಿ ನೀಡಿ ಎಂದು ವಿನಂತಿಸಿ ಎಂದು ಹೇಳಿದರು.

ಇಸ್ಲಾಮಿ ವಿಚಾರವಂತರ ಟೀಕೆ

ನೊಮಾನಿಯವರ ಹೇಳಿಕೆಯ ಕುರಿತು ಇಂಡಿಯನ್ ಮುಸ್ಲಿಂ ಫಾರ್ ಸೆಕ್ಯುಲರ್ ಡೆಮೊಕ್ರಸಿಯ ಸಮನ್ವಯಕರಾದ ಜಾವೇದ್ ಆನಂದ್ ಇವರು, ನಾನು ಅವರಿಗೆ, ಹುಡುಗಿಯರನ್ನು ಶಿಕ್ಷಣದಿಂದ ದೂರ ಇಡುವುದು, ಎಂದೆ ಅವರ ಈ ಹೇಳಿಕೆಯಿಂದ ಸೂಚಿಸುವುದಿದೆಯೇ ? ಎಂದು ಪ್ರಶ್ನಿಸುತೇನೆ. ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಮಹಿಳಾ ಸಂಘಟನೆ, ಮಹಿಳಾ ಆಯೋಗ, ಜಾತ್ಯತೀತ ರಾಜಕೀಯ ಪಕ್ಷ ಇವರಿಗೆ ಇದು ಒಪ್ಪಿಗೆಯೇ ? ಇಲ್ಲವಾದರೆ, ಅವರು ಇದನ್ನು ವಿರೋಧಿಸುವರೇ ?