`ಫಿಲ್ಮಫೇರ ಪ್ರಶಸ್ತಿ’ ಇದು ಅನೈತಿಕ ಮತ್ತು ಚಲನಚಿತ್ರ ವಿರೋಧಿ ! – ವಿವೇಕ ರಂಜನ ಅಗ್ನಿಹೋತ್ರಿ

ವಿವೇಕ ರಂಜನ ಅಗ್ನಿಹೋತ್ರಿ

ಮುಂಬಯಿ – ನಾನು ಅನೈತಿಕ ಮತ್ತು ಚಲನಚಿತ್ರ ವಿರೋಧಿ `ಫಿಲ್ಮಫೇರ ಪ್ರಶಸ್ತಿ’ಯ ಭಾಗವಾಗಲು ನಿರಾಕರಿಸುವುದಾಗಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರ ವಿವೇಕ ರಂಜನ ಅಗ್ನಿಹೋತ್ರಿ ಇವರು ಹೇಳಿದ್ದಾರೆ. 68ನೇ `ಫಿಲ್ಮಫೇರ ಪ್ರಶಸ್ತಿ’ಯ 7 ದರ್ಜೆಯಲ್ಲಿ `ದಿ ಕಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಹೆಸರು ಪಡೆದಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಅಗ್ನಿಹೋತ್ರಿಯವರು ಮೇಲಿನಂತೆ ಹೇಳಿಕೆ ನೀಡಿದರು. ಅವರು ಟ್ವಿಟರ ಮೂಲಕ ಒಂದು ದೊಡ್ಡ ಪೋಸ್ಟ ಮಾಡುವ ಮೂಲಕ, ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಚಲನಚಿತ್ರದಲ್ಲಿ ಹೆಸರು ಪಡೆದ ಬಗ್ಗೆ ಅಗ್ನಿಹೋತ್ರಿ, ನಟ ಅನುಪಮ ಖೇರ, ದರ್ಶನ ಕುಮಾರ,ಮಿಥುನ ಚಕ್ರವರ್ತಿ ಹಾಗೆಯೇ `ವಿಡಿಯೋ ಎಡಿಟರ’ ಶಂಖ ರಾಜ್ಯಾಧ್ಯಕ್ಷ ಇವರ ಹೆಸರನ್ನು ಸೇರಿಸಲಾಗಿದೆ.

ಅಗ್ನಿಹೋತ್ರಿ ಮಾತನಾಡುತ್ತಾ, ಫಿಲ್ಮಫೇರ ಪ್ರಶಸ್ತಿಗಾಗಿ ಕೇವಲ ದೊಡ್ಡ ಕಲಾವಿಧರ ಮುಖಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಾಗೆಯೇ ಈ ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ, ಲೇಖಕ ಮತ್ತು ಚಲನಚಿತ್ರದ ಚಿತ್ರೀಕರಣಕ್ಕಾಗಿ ಕಾರ್ಯನಿರತ ಇತರೆ ಜನರಿಗೆ ಯಾವುದೇ ಮಹತ್ವವನ್ನು ನೀಡಲಾಗುವುದಿಲ್ಲ. ಈ ಜನರನ್ನು `ಕಲಾವಿಧರ ಗುಲಾಮರು’ ಎನ್ನುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತದೆ. ಚಲನಚಿತ್ರ ನಿರ್ಮಾಪಕರಿಗೆ ಈ ಪ್ರಶಸ್ತಿಯಿಂದಲ್ಲ, ಅವರ ಕಾರ್ಯಗಳಿಂದ ಘನತೆ ಸಿಗುತ್ತದೆ. ಈ ಅಪಮಾನಕರ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

 

ಸಂಪಾದಕರ ನಿಲುವು

ಚಲನಚಿತ್ರವು ಸಮಾಜದ ಕನ್ನಡಿಯಾಗಿ, ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಆವಶ್ಯಕತೆಯಿರುವಾಗ ಅದನ್ನು ಪ್ರೋತ್ಸಾಹಿಸಲು ನೀಡುವ ಪ್ರಶಸ್ತಿಯ ದಿಕ್ಕು ಹೀಗಿದ್ದರೆ, ಚಲನಚಿತ್ರ ಎಂದಾದರೂ ಸಮಾಜಹಿತವನ್ನು ಸಾಧಿಸಬಹುದೇ ?