ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟ : ೮ ವರ್ಷದ ಹುಡುಗಿ ಸಾವು !

ಆದಿತ್ಯಶ್ರೀ

ತ್ರಿಶೂರು (ಕೇರಳ) – ಜಿಲ್ಲೆಯಲ್ಲಿನ ತಿರುವಿಲ್ಲಮಲಾ ಇಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಓರ್ವ ೮ ವರ್ಷದ ಹುಡುಗಿ ಮಲಗಿಕೊಂಡು ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟವಾಗಿ ಸಾವನ್ನಪ್ಪಿದಳು. ಪೊಲೀಸರು ಮೊಬೈಲ್ ನ ಮಾದರಿಯನ್ನು ತನಿಖೆಗಾಗಿ ಕಳುಹಿಸಿದ್ದಾರೆ. ಹುಡುಗಿಯ ಹೆಸರು ಆದಿತ್ಯಶ್ರೀ ಆಗಿದ್ದು ಆಕೆ ಮೂರನೆಯ ತರಗತಿಯಲ್ಲಿ ಕಲಿಯುತ್ತಿದ್ದಳು. ಏಪ್ರಿಲ್ ೨೪ ರಂದು ರಾತ್ರಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಮನೆಯಲ್ಲಿ ಕೇವಲ ಹುಡುಗಿಯ ಅಜ್ಜಿ ಉಪಸ್ಥಿತರಿದ್ದರು. ಮೃತ ಹುಡುಗಿ ತಂದೆಯು, ಆಕೆ ೩ ವರ್ಷಗಳ ಹಿಂದೆ ‘ರೆಡ್ಮಿ ನೋಟ್ ೫ ಪ್ರೊ’ ಹೆಸರಿನ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಮಾಡಿದ್ದರು.