ಎನ್.ಐ.ಎ.ಯಿಂದ ದೇಶಾದ್ಯಂತ ಪಿ.ಎಫ.ಐ.ನ ೧೭ ಸ್ಥಳಗಳಲ್ಲಿ ದಾಳಿ

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.)ಯು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ.ಐ)ದ ದೇಶಾದ್ಯಂತ ೧೭ ಸ್ಥಳಗಳಲ್ಲಿ ದಾಳಿ ಮಾಡಿದೆ. ಇದರಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ಸ್ಥಳಗಳನ್ನು ಒಳಗೊಂಡಿದೆ. ಬಿಹಾರದ ಮೋತಿಹಾರಿಯ ಚಕಿಯಾದಲ್ಲಿನ ಕಾರ್ಯಕರ್ತ ಸಜ್ಕಾದ್ ನ ಮನೆ ಮೇಲೆ ದಾಳಿ ನಡೆಸಿದರೇ ದರಭಾಂಗಾದಲ್ಲಿ ಡಾ. ಸಾರಿಕ್ ರಝಾ ಅವರ ಮನೆ ಮೇಲೆಯು ದಾಳಿ ನಡೆಸಲಾಗಿದೆ.