ಭಾರತದಲ್ಲಿ ೭೨೮ ವೃದ್ಧಾಶ್ರಮಗಳು : ಆದರೆ ಇವುಗಳಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಲ್ಲ !

ನಮ್ಮ ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಶ್ರೇಷ್ಠ ಎಂದು ಹೇಳಲು ನಾವು ಸಂತೋಷ ಪಡುತ್ತೇವೆ. ಭಾರತದಲ್ಲಿ ಮಹಾರಾಷ್ಟ್ರವನ್ನು ಪ್ರಗತಿಪರವೆಂದು ಪರಿಗಣಿಸಲಾಗಿದೆ; ಆದರೆ ನಿಮ್ಮ ಈ ಎಲ್ಲಾ ಹೇಳಿಕೆಗಳು ಸಂಪೂರ್ಣ ವಾಗಿ ಸುಳ್ಳು. ಒಂದು ವರದಿಯ ಪ್ರಕಾರ, ದೇಶದಲ್ಲಿ ೭೨೮ ವೃದ್ಧಾಶ್ರಮಗಳಿದ್ದು ಇದರಲ್ಲಿ ೯೭ ಸಾವಿರ ವೃದ್ಧ ಸ್ತ್ರೀ-ಪುರುಷರು ವಾಸಿಸುತ್ತಾರೆ. ಮಹಾರಾಷ್ಟ್ರದಲ್ಲಿ ‘ಮಾತೋಶ್ರೀ ವೃದ್ಧಾಶ್ರಮ ಯೋಜನೆ ಅಡಿಯಲ್ಲಿ ೨೪ ವೃದ್ಧಾಶ್ರಮಗಳನ್ನು ಸಬ್ಸಿಡಿರಹಿತವಾಗಿ ನಡೆಸಲಾಗುತ್ತಿದೆ. ಪುಣೆಯನ್ನು ‘ಸುಸಂಸ್ಕೃತ ನಗರ ಎಂದು ಪರಿಗಣಿಸ ಲಾಗಿದೆ; ಆದರೆ ಅಲ್ಲಿ ೬೫ ವೃದ್ಧಾಶ್ರಮಗಳಿವೆ.ಮಹಾರಾಷ್ಟ್ರದ ಜನಸಂಖ್ಯೆ ೧೨ ಕೋಟಿಗಿಂತಲೂ ಅಧಿಕವಿದೆ. ಸಮಾಜಕ್ಕೆ ವೃದ್ಧಾಶ್ರಮದ ಅವಶ್ಯಕತೆ ಏಕೆ ಉಂಟಾಯಿತು ? ಎಂಬುದರ ಬಗ್ಗೆ ಹಿಂದೂಗಳಿಗೆ ನಾಚಿಕೆ ಅನಿಸಬೇಕು,  ಸಮಾಜದಲ್ಲಿ ತಂದೆ ತಾಯಿಯರ ಬಗ್ಗೆ ನಿರ್ಲಕ್ಷ ಹೆಚ್ಚಿರುವುದು ಕಂಡು ಬರುತ್ತಿದೆ.

೧. ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳು ಹಿಂದೂ ಸಂಸ್ಕೃತಿಗೆ ತಗಲಿದ ಕಳಂಕ !

ಭಾರತದಲ್ಲಿ ೭೨೮ ವೃದ್ಧಾಶ್ರಮಗಳಿದ್ದು ಈ ವೃದ್ಧಾಶ್ರಮ ಗಳಲ್ಲಿ ಒಂದೇ ಒಂದು ಮುಸಲ್ಮಾನ ವೃದ್ಧಾಶ್ರಮವಿಲ್ಲ. ಮುಸ್ಲಿಂ ಸಮಾಜವು ತಮ್ಮ ತಂದೆ ತಾಯಿಯರನ್ನು ಯೋಗ್ಯ ರೀತಿಯಲ್ಲಿ ಕಾಳಜಿ ವಹಿಸಿ ನೋಡಿಕೊಳ್ಳುತ್ತದೆ. ಇದನ್ನು ಅವರಿಂದ ಕಲಿಯಬೇಕು. ಹಿಂದೂ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳು ಎಲ್ಲೆಡೆ ಇವೆ. ಸರಕಾರಕ್ಕೂ ವೃದ್ಧಾಶ್ರಮಗಳ ಅವಶ್ಯಕತೆಯಿದೆ ಎಂದು ಅನಿಸುತ್ತಿರುವುದ್ದು ಅತ್ಯಂತ ನಾಚಿಕೆ ಗೇಡಿನ ಸಂಗತಿಯಾಗಿದೆ. ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಿಂದೂ ಸಂಸ್ಕೃತಿಗೆ ಅಂಟಿದ ಕಳಂಕವಾಗಿದೆ.

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ತಂದೆತಾಯಿಯನ್ನು ವೃದ್ಧಾಶ್ರಮದಲ್ಲಿಡುವುದು ಅತ್ಯಂತ ಲಜ್ಜಾಸ್ಪದವಾಗಿದೆ !

‘ಭಾರತೀಯ ಸಂಸ್ಕೃತಿಯಲ್ಲಿ ಯಾವತ್ತೂ ವೃದ್ಧಾ ಶ್ರಮಗಳಿರಲಿಲ್ಲ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನು ಕರಣೆಯಾಗಿದೆ. ಇದು ಕೃತಜ್ಞತೆಯ ಬದಲು ಪೋಷಕರ ಕುರಿತಾದ ದ್ವೇಷವನ್ನು ತೋರಿಸುತ್ತದೆ. ಮುಂದೆ ಮೃತ ತಂದೆ-ತಾಯಿಗಳು ಪೂರ್ವಜರಾಗಿ ಕುಟುಂಬಕ್ಕೆ ತೊಂದರೆ ಕೊಟ್ಟರೆ ಆಶ್ಚರ್ಯವೆನಿದೆ ?

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ 

೨. ಹಾಗಾದರೆ ಮುಂದೆ ನಿಮ್ಮ ಮಕ್ಕಳು ನಿಮ್ಮನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆಯೇ ?

ತಮ್ಮ ಪಾಲಕರು ಮಕ್ಕಳಿಗೆ ಹೊರೆ ಆಗುತ್ತಾರೆ, ಎಂಬ ಕೀಳು ಮನೋಭಾವ ಸಮಾಜದಲ್ಲಿ ಬಲಗೊಂಡಿದೆ. ಇನ್ನು ೧೦೦ ವೃದ್ಧಾಶ್ರಮಗಳನ್ನು ತೆರೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ನಿಜವಾಗಿಯೂ ಭಾರತದ ವಿಕಾಸ ಆಗುವುದೇ ? ಪೋಷಕರನ್ನು ನೋಡಿಕೊಳ್ಳುವ ಬದಲು ಮನೆಯಲ್ಲಿ ನಾಯಿಯನ್ನು ಸಾಕಲಾಗುತ್ತದೆ. ಆ ನಾಯಿಯ ಪೋಷಣೆಗೆ ತಿಂಗಳಿಗೆ ೫ ಸಾವಿರ ರೂಪಾಯಿ ಖರ್ಚಾಗುತ್ತದೆ. ನಿಮ್ಮ ತಂದೆ-ತಾಯಿಯರನ್ನು ನೋಡಿಕೊಳ್ಳಲು ನಿಮಗೆ ನಾಚಿಕೆಯಾಗುತ್ತಿದೆಯೇ ? ಇಂದು ಮಕ್ಕಳು ತಮ್ಮ ತಂದೆ-ತಾಯಿಗೆ ವೃದ್ಧಾಶ್ರಮವನ್ನು ತೋರಿಸುತ್ತಾರೆ; ಆದರೆ ನಂತರ ನೀವು ವಯಸ್ಸಾದಾಗ, ನಿಮ್ಮ ಮಕ್ಕಳು ನಿಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುವರು ಎಂಬ ಬಗ್ಗೆ ನಿಮಗೆ ಸ್ವಲ್ಪವಾದರೂ ಭಯ ಅನಿಸುವುದಿಲ್ಲವೇ ?

೩. ಬಾಲ್ಯದಿಂದ ದೊಡ್ಡವರಾಗುವ ತನಕ ಸಲಹಿದ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಮಕ್ಕಳಿಗೆ ಲಜ್ಜಾಸ್ಪದ

ತಂದೆ-ತಾಯಿಯೇ ನಮ್ಮ ಜೀವನದ ಕೊನೆಯ ಸಂಪತ್ತು. ತಮ್ಮ ಜೀವನದುದ್ದಕ್ಕೂ ಅವರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ಯುವಕನ ಕರ್ತವ್ಯವಾಗಿದೆ; ಏಕೆಂದರೆ ಬಾಲ್ಯದಿಂದ ದೊಡ್ಡವರಾಗುವ ತನಕ ಅವರು ನಮ್ಮನ್ನು ಪೋಷಿಸುವುದರ ಹಿಂದೆ ವೃದ್ಧಾಪ್ಯದಲ್ಲಿ ತಮಗೆ ಆಧಾರದ ಸ್ತಂಭವಾಗಬೇಕೆಂದೇ ಅವರ ಉದ್ದೇಶವಾಗಿರುತ್ತದೆ. ತಂದೆ-ತಾಯಿಯನ್ನು ಯಾರು ನೋಡಿಕೊಳ್ಳಬೇಕು; ಎಂದು ಇಬ್ಬರು ಸಹೋದರರ ನಡುವಿನ ಜಗಳಗಳು, ತಮಗೆ ಜನ್ಮ ನೀಡಿದ ತಂದೆ-ತಾಯಿಯನ್ನು ಕೊಂದ ಘಟನೆಗಳು ಕಲಿಯುಗದಲ್ಲಿ ಕಾಣಲು ಸಿಗುತ್ತವೆ. ‘ಪೋಷಕರು ನಮಗೆ ಜನ್ಮ ನೀಡಿ ಈ ಜಗತ್ತನ್ನು ತೋರಿಸಿದ್ದಾರೆ. ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಾ ನಿಮ್ಮನ್ನು ದೊಡ್ಡವರನ್ನಾಗಿ ಬೆಳೆಸಿದರು, ಆದರೆ ಅವರನ್ನು ನೋಡಿಕೊಳ್ಳುವ ಬದಲು ವೃದ್ಧಾಶ್ರಮಕ್ಕೆ ಕಳುಹಿಸುತ್ತೇವೆ. ಮಕ್ಕಳು ಈ ರೀತಿ ವರ್ತಿಸುವುದು ನಾಚಿಕೆಗೇಡಿನ ಸಂಗತಿ. ಒಂದು ಕಡೆ ‘ಮಾತೃದೇವೋ ಭವ ಪಿತೃದೇವೋ ಭವ. ಎಂದು ತಂದೆ-ತಾಯಿಯನ್ನು ದೇವರು ಎನ್ನುತ್ತೇವೆ.

೪. ಮಕ್ಕಳಲ್ಲಿ ಯೋಗ್ಯ ಸಂಸ್ಕಾರವಾದರೆ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುವುದು !

ತಂದೆಯ ಮಾತು ಮತ್ತು ತಾಯಿ ಕೈಕೇಯಿಯ ಆಜ್ಞೆಯನ್ನೂ ಪಾಲಿಸುವ ಭಗವಾನ್ ಪ್ರಭು ಶ್ರೀರಾಮ, ಅಂಧ ಮಾತಾಪಿತೃಗಳಿಗೆ ದಣಿವರಿಯದೆ ಸೇವೆ ಸಲ್ಲಿಸುವ ಶ್ರ್ರವಣ, ತಂದೆತಾಯಿಗಳ ಸೇವೆಯಲ್ಲಿ ಅಡಚಣೆಯಾಗಬಾರದೆಂದು ವಿಠ್ಠಲನನ್ನು ಕಾಯುವಂತೆ ಮಾಡಿದ ಭಕ್ತ ಪುಂಡಲೀಕ, ಇಂತಹ ಮಹಾನ್ ಆದರ್ಶಗಳು ನಮ್ಮ ಭಾರತ ದೇಶದಲ್ಲಿ ಆಗಿ ಹೋಗಿವೆ. ಅಂತಹ ಆದರ್ಶ ಭಾರತದಲ್ಲಿ ಪೋಷಕರನ್ನು ನೋಡಿಕೊಳ್ಳುವುದು ಕಷ್ಟಕರ ಅನಿಸುವುದು, ಅತ್ಯಂತ ದುರದೃಷ್ಟಕರ ಮತ್ತು ಸಂಕುಚಿತ ಮನೋಭಾವದ ಪರಾಕಾಷ್ಠೆಯಾಗಿದೆ. ಸಮಾಜದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುವುದಿಲ್ಲ ಮತ್ತು ‘ಒಬ್ಬ ಹುಡುಗ ಒಂದು ಹುಡುಗಿ ಪದ್ಧತಿಯನ್ನು ಪರಿಚಯಿಸಿದಾಗ ಏನಾಯಿತು. ಮಕ್ಕಳನ್ನು ಒಬ್ಬನೇ ಮಗ ಎಂದು ಅತಿಯಾಗಿ ಮುದ್ದಿಸಲಾಗುತ್ತಿದೆ. ಅದೇ ಇಂದು ಅಪಾಯಕಾರಿಯಾಗುತ್ತಿದೆ. ಪಾಲಕರು ಮಕ್ಕಳ ತಪ್ಪುಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಮಕ್ಕಳು ಮುದ್ದು ಮಾಡುವುದರಿಂದ ಹಠಮಾರಿಗಳಾಗುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ಸಂಸ್ಕಾರ ನೀಡಿ, ಆಗ ಮಾತ್ರ ವೃದ್ಧಾಶ್ರಮಗಳು ಕಡಿಮೆಯಾಗುತ್ತವೆ. ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡದಿದ್ದರೆ, ಭಯಾನಕ ವಾಸ್ತವವು ತಮ್ಮ ಮುಂದೆ ಬರಲಿದೆ ಎಂಬುದನ್ನು ನೆನಪಿಡಿ.

– ಶ್ರೀ. ಪುರುಷೋತ್ತಮ ಬೈಸಕಾರ, ಮೊಝರಕರ, ಶ್ರೀ ಗುರುದೇವ ಪ್ರಚಾರಕ, ಯವತಮಾಳ (ಕೃಪೆ : ಸಾಮಾಜಿಕ ಮಾಧ್ಯಮ)