ಕನ್ನಡ ಪಾಠ ಮಾಡುವ ಸಿದ್ಧರಾಮಯ್ಯ; ಕನ್ನಡ ಮಾತನಾಡಲು ಒದ್ದಾಡುವ ಮೊಮ್ಮಗ !

ಮೊಮ್ಮಗನಿಗೆ ಕನ್ನಡ ಕಲಿಸಲು ಮರೆತರಾ ಸಿದ್ಧರಾಮಯ್ಯ ? ಎಂದು ನೆಟಿಗರ ಪ್ರಶ್ನೆ

ಬೆಂಗಳೂರು – ಸದ್ಯ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯು ರಂಗೇರಿದ್ದು ಎಲ್ಲೆಡೆ ಅದರದ್ದೇ ಚರ್ಚೆ ನಡೆಯುತ್ತಿದೆ. ಅದರಲ್ಲಿಯೂ ಅನೇಕ ಸಂಗತಿಗಳು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೇ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮೊಮ್ಮಗನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಸಂಸತ್ತಿನ ಕಲಾಪವೊಂದರಲ್ಲಿ `ಈಗಿನ ಕಾಲದ ಜನರಿಗೆ ಕನ್ನಡ ವ್ಯಾಕರಣದ ಕನಿಷ್ಟ ಜ್ಞಾನವೂ ಇರುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಕಿಸಿದ್ದರು. ಮಕ್ಕಳಿಗೆ ಕನ್ನಡ ಭಾಷೆಯ ಸಂಪೂರ್ಣ ಅರಿವು ಇರದಿರುವುದು ಖೇದಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.


(ಸೌಜನ್ಯ : News18 Kannada)

ಆದರೆ, ವಿಪರ್ಯಾಸವೆಂದರೆ ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಅವರಿಗೇ ಕನ್ನಡ ಭಾಷೆ ಸರಿಯಾಗಿ ಬರುವುದಿಲ್ಲ. ವರುಣಾ ಕ್ಷೇತ್ರದಲ್ಲಿ ತಾತನ ಜೊತೆ ಚುನಾವಣಾ ಪ್ರಚಾರಕ್ಕೆ ಇಳಿದ ರಾಕೇಶ್, ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗಳಿಗೆ ಸಾಮಾನ್ಯ ಕನ್ನಡದಲ್ಲಿಯೂ ಉತ್ತರಿಸಲಾಗದೆ ಒದ್ದಾಡುತ್ತಿರುವುದು ಒಂದು ವಿಡಿಯೋದಲ್ಲಿ ನೋಡಬಹುದಾಗಿದೆ. ಅದರಲ್ಲಿ ಕನ್ನಡಕ್ಕಿಂತ ಆಂಗ್ಲದಲ್ಲಿಯೇ ಮಾತನಾಡುವುದು ಕಾಣಿಸುತ್ತಿದೆ. ಕನ್ನಡ ಪಾಠ ಮಾಡುವ ಸಿದ್ದರಾಮಯ್ಯನವರು ಮಗನಿಗೆ ಕನ್ನಡ ಕಲಿಸಲಿಲ್ಲವೇ? ಎಂದೆಲ್ಲ ಟೀಕೆಯಾಗುತ್ತಿದೆ