‘ಸುದರ್ಶನ ನ್ಯೂಸ್ ‘ ವಾರ್ತಾವಾಹಿನಿಯ ಸೂತ್ರಸಂಚಾಲಕಿಯಿಂದ ಆರ್ಡರ್ ಮಾಡಿದ್ದು ಶಾಖಾಹಾರಿ ಆದರೆ ಪಡೆದಿದ್ದು ಮಾತ್ರ ಮಾಂಸಾಹಾರ ಪದಾರ್ಥ !

‘ಝೋಮ್ಯಾಟೋ ‘ ಮತ್ತು ‘ ನಜೀರ್ ಫುಡ್ಸ್ ‘ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು !

ಕನಿಕಾ ಆರೋರಾ

ನೋಯೆಡಾ (ಉತ್ತರಪ್ರದೇಶ) – ‘ಸುದರ್ಶನ ನ್ಯೂಸ್ ‘ ಈ ಹಿಂದಿ ವಾರ್ತಾವಾಹಿನಿಯ ಸೂತ್ರಸಂಚಾಲಕಿ ಕನಿಕ ಅರೋರ ಇವರು ‘ ಝೋಮ್ಯಾಟೋ ‘ ಈ ಆನ್ಲೈನ್ ಬೇಡಿಕೆಯಂತೆ ಆಹಾರ ಪದಾರ್ಥವನ್ನು ಮನೆಗೆ ತಲುಪಿಸುವ ಕಂಪನಿ ಮತ್ತು ‘ನಜೀರ್ ಫುಡ್ಸ್ ‘ ಈ ಅಂಗಡಿಯ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಅವರು, `ನನಗೆ ಶಾಖಾಹಾರಿ ಪದಾರ್ಥದ ಬದಲು ಮಾಂಸಾಹಾರವನ್ನು ವಿತರಿಸಿದ್ದಾರೆ.

‘ಪನೀರ್ ರೋಲ್ ‘ ಬದಲು ‘ಚಿಕನ್ ರೋಲ್’ ಕಳುಹಿಸಿದ್ದಾರೆ . ಇದರಿಂದ ನನ್ನ ಧರ್ಮ ಭ್ರಷ್ಟವಾಗಿದೆ’, ಎಂದಿದ್ದಾರೆ. ಕನಿಕಾ ಇವರು ವಾರ್ತಾವಾಹಿನಿಯಲ್ಲಿ ಈ ಆಹಾರ ಪದಾರ್ಥ ಮತ್ತು ಅದರ ಪಾವತಿ ತೋರಿಸಿದ್ದಾರೆ.

(ಸೌಜನ್ಯ : Naman Sharma)

ಸಂಪಾದಕೀಯ ನಿಲುವು

ಇಂತಹ ಘಟನೆಗಳಿಂದ ಹಿಂದೂಗಳು ಇತರ ಧರ್ಮದವರ ಅಂಗಡಿಯಿಂದ ಆಹಾರ ಖರೀದಿಸುವುದನ್ನು ನಿಲ್ಲಿಸಿದರೆ ಅದರಲ್ಲಿ ಆಶ್ಚರ್ಯದೇನಿಲ್ಲ !