ಶ್ರೀನಗರ (ಜಮ್ಮೂ-ಕಾಶ್ಮೀರ) – ಒಂದು ವೇಳೆ ಕೇಂದ್ರ ಸರಕಾರವು ಜಮ್ಮೂ- ಕಾಶ್ಮೀರದಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಬಯಸುತ್ತಿದ್ದರೆ, ಅದಕ್ಕೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಆಕ್ಷೇಪಿಸುವುದಿಲ್ಲ ಎಂದು ಈ ಆಯೋಗ ಸದಸ್ಯರಾದ ಸಯೀದ್ ಶಹಜಾದಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
1. ಸಯೀದ್ ಶಹಜಾದಿಯವರು ಮಾತನಾಡುತ್ತಾ, ಒಂದು ವೇಳೆ ಸಂಸತ್ತು ಕಾನೂನನ್ನು ರೂಪಿಸಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರ್ಧರಿಸಿದ್ದರೆ, ಅದು ಸರಕಾರದ ಅಧಿಕಾರವಾಗಿದೆ. ಇದೇ ನಮ್ಮ ನಿಲುವಾಗಿದೆ.
`ಯಾವುದೇ ಒಂದು ಸಮಾಜಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನೀಡಬೇಕೆ ?’, ಈ ಕುರಿತು ನಿರ್ಧರಿಸುವ ಅಧಿಕಾರ ಆಯೋಗಕ್ಕೆ ಇಲ್ಲ. ಈ ವಿಷಯದಲ್ಲಿ ಗೃಹಸಚಿವಾಲಯ ನಮ್ಮ ಅಭಿಪ್ರಾಯವನ್ನು ಕೋರಿದಾಗ, ನಾವು ಅವರಿಗೆ ಇದೇ ಅಭಿಪ್ರಾಯವನ್ನು ನೀಡಿದೆವು. ಸಂಸತ್ತು ಮುಂದುವರಿದು ಈ ವಿಷಯದಲ್ಲಿ ಕಾನೂನು ರೂಪಿಸಬೇಕು ಮತ್ತು ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ನಿರ್ಣಯ ನೀಡಬೇಕು. ಗೃಹ ಸಚಿವಾಲಯ ಮತ್ತು ಆಯೋಗದ ಅಧ್ಯಕ್ಷರು ಇವರೂ ಕೂಡ ಈ ವಿಷಯದಲ್ಲಿ ಚರ್ಚಿಸಿದ್ದು, `ಕಾನೂನು ರೂಪಿಸಬೇಕು’ ಎನ್ನುವುದೇ ಅವರ ಅಭಿಪ್ರಾಯವೂ ಆಗಿದೆ.
2. ನಾವು ಸರಕಾರಕ್ಕೆ ಪತ್ರವನ್ನು ಬರೆದು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ರಾಜ್ಯ ಅಲ್ಪಸಂಖ್ಯಾತ ಆಯೋಗವನ್ನು ರೂಪಿಸಬೇಕು ಎಂದು ಕೋರುವವರಿದ್ದೇವೆ. ಹಾಗೆಯೇ ನಾವು ಇತರೆ ರಾಜ್ಯಗಳಿಗೂ ಪತ್ರವನ್ನು ಬರೆದು ಈ ವಿಷಯದಲ್ಲಿ ವಿನಂತಿಸುವವರಿದ್ದೇವೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಆಯೋಗ ಇರಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.