ಉತ್ತರಾಖಂಡದಲ್ಲಿ ಅಕ್ರಮ ಗೋರಿಗಳ ವಿರುದ್ಧ ಕಾರ್ಯಾಚರಣೆ ! – ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

  • ರಾಜ್ಯವನ್ನು ‘ಲ್ಯಾಂಡ್ ಜಿಹಾದ್’ ನಿಂದ ಮುಕ್ತಗೊಳಿಸುವ ಸಂಕಲ್ಪ

  • ರಾಜ್ಯದಲ್ಲಿ ೧ ಸಾವಿರಕ್ಕೂ ಹೆಚ್ಚು ಗೋರಿಗಳಿರುವ ಮಾಹಿತಿ

ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ರಾಜ್ಯವನ್ನು ‘ಲ್ಯಾಂಡ್ ಜಿಹಾದ್’ನಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಂಕಲ್ಪವನ್ನು ಮಾಡಿದ್ದಾರೆ. (ಲ್ಯಾಂಡ್ ಜಿಹಾದ್ ವಿರುದ್ಧ ಧೈರ್ಯವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದ ಧಾಮಿಯವರಿಗೆ ಅಭಿನಂದನೆಗಳು ! – ಸಂಪಾದಕರು) ರಾಜ್ಯದಲ್ಲಿ ಸುಮಾರು ೧ ಸಾವಿರಕ್ಕೂ ಹೆಚ್ಚು ಅಕ್ರಮ ಗೋರಿಗಳಿವೆ. ಅವುಗಳನ್ನು ಪತ್ತೆ ಹಚ್ಚಲಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಧಾಮಿಯವರು ಇತ್ತೀಚೆಗೆ ಹೃಷಿಕೇಶ ಯಾತ್ರೆಯಲ್ಲಿದ್ದಾಗ. ಆಗ ಅವರು ಏಪ್ರಿಲ್ ೧೬, ೨೦೨೩ ರಂದು ಹೃಷಿಕೇಶಕ್ಕೆ ಭೇಟಿ ನೀಡಿದ್ದರು. ಈ ಬಾರಿ ಅವರು ಪರಮಾರ್ಥ ನಿಕೇತನ್ ನಲ್ಲಿನ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ನಂತರ ಧಾಮಿಯವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಧಾಮಿ ಇವರು, ‘’ಪವಿತ್ರ ಗಂಗಾನದಿಯ ದಡದ ಹಲವೆಡೆ ಅಕ್ರಮ ಗೋರಿಗಳನ್ನು ನಿರ್ಮಿಸಲಾಗಿದೆ. ಈ ಅತಿಕ್ರಮಣಗಳ ತೆರವಿಗೆ ಸರಕಾರ ಆಂದೋಲನ ಆರಂಭಿಸಿದೆ.” ಎಂದು ಹೇಳಿದರು.

ಧಾಮಿ ಸರಕಾರ ಡಿಸೆಂಬರ್ ೨೦೨೨ ಮತ್ತು ಮಾರ್ಚ್ ೨೦೨೩ ರ ನಡುವೆ ಕಾರ್ಯಾಚರಣೆ ನಡೆಸಿ ೪೧ ಅಕ್ರಮ ಗೋರಿಗಳನ್ನು ನೆಲಸಮ ಮಾಡಿದ್ದರು. ಇದೀಗ ೧ ಸಾವಿರ ಅಕ್ರಮ ಗೋರಿಗಳ ಪಟ್ಟಿ ಮಾಡುವ ಮೂಲಕ ಸರಕಾರ ಮತ್ತೊಮ್ಮೆ ಅವುಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದೆ.

ಸಂಪಾದಕೀಯ ನಿಲುವು

ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಗೋರಿಗಳು ನಿರ್ಮಾಣವಾಗುತ್ತಿರುವಾಗ ಆಡಳಿತ ನಿದ್ದೆ ಮಾಡುತ್ತಿತ್ತೆ ? ಉತ್ತರಾಖಂಡವನ್ನು ‘ಲ್ಯಾಂಡ್ ಜಿಹಾದ್’ನಿಂದ ಮುಕ್ತಗೊಳಿಸುವುದರ ಜೊತೆಗೆ ಇಂತಹ ಅಕ್ರಮ ನಿರ್ಮಾಣಗಳಿಗೆ ಅವಕಾಶ ನೀಡುವವರ ವಿರುದ್ಧ ಧಾಮಿಯವರು ಕ್ರಮ ಕೈಗೊಳ್ಳಬೇಕು !