ರಾಹುಲ ಗಾಂಧಿಯವರು ಸ್ವಾತಂತ್ರ್ಯವೀರ ಸಾವರಕರರ ಅಪಮಾನ ಮಾಡಿದ ಪ್ರಕರಣ
ಪುಣೆ – ಇಂಗ್ಲೆಂಡ್ ನಲ್ಲಿ ಸಾವರಕರ ವಿಷಯದಲ್ಲಿ ನೀಡಿರುವ ಹೇಳಿಕೆಯ ಪ್ರಕರಣದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಮೊಮ್ಮಗ ಸಾತ್ಯಕಿ ಸಾವರಕರ ಇವರು ಪುಣೆ ಸೆಷನ್ಸ್ ನ್ಯಾಯಾಲಯದಲ್ಲಿ ರಾಹುಲ ಗಾಂಧಿಯವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಈ ಹಿಂದೆಯೂ ರಾಹುಲ ಗಾಂಧಿಯವರಿಗೆ ಒಂದು ಪ್ರಕರಣದಲ್ಲಿ 2 ವರ್ಷಗಳ ಶಿಕ್ಷೆಯಾಗಿದೆ. ಇದರಿಂದ ಅವರ ಸಂಸದ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಯಿತು.
ಏನಿದು ಪ್ರಕರಣ ?
ರಾಹುಲ ಗಾಂಧಿಯವರು ಕಳೆದ ತಿಂಗಳು ಇಂಗ್ಲೆಂಡಿಗೆ ಹೋಗಿದ್ದರು. ಅಲ್ಲಿ ಅವರು ಒಂದು ಸಭೆಯಲ್ಲಿ ಭಾಷಣ ಮಾಡಿದ್ದರು. ಅದರಲ್ಲಿ ಅವರು, ”ಸಾವರಕರರು ಅವರ ಪುಸ್ತಕದಲ್ಲಿ `ಅವರು ತಮ್ಮ 5-6 ಸ್ನೇಹಿತರ ಸಹಿತ ಒರ್ವ ಮುಸಲ್ಮಾನನಿಗೆ ಹೊಡೆಯುತ್ತಿದ್ದರು. ಅದನ್ನು ನೋಡಿ ವೀರ ಸಾವರಕರರಿಗೆ ಸಂತೋಷವಾಯಿತು.’ ಎಂದು ಬರೆದಿದ್ದಾರೆ. ಓರ್ವ ಮನುಷ್ಯನಿಗೆ 5-6 ಜನರು ಹೊಡೆದರು. ಇದು ಸಾವರಕರರ ವಿಚಾರಧಾರೆಯಾಗಿತ್ತು.’’
ಇದೇ ಹೇಳಿಕೆಯ ಸಂದರ್ಭವನ್ನು ನೀಡಿ ಸಾತ್ಯಕಿ ಸಾವರಕರರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ನನ್ನ ಅಜ್ಜನವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ ಇವರ ವಿಷಯದಲ್ಲಿ ರಾಹುಲ ಗಾಂಧಿಯವರು ಅವರ ಭಾಷಣದಲ್ಲಿ ಮಾಡಿರುವ ಸುಳ್ಳು ಆರೋಪದಿಂದಾಗಿ ಸಾವರಕರರಿಗೆ ಅಪಮಾನವಾಗಿದೆ. ಈ ಕಾರಣದಿಂದಾಗಿ ನಾನು ರಾಹುಲ ಗಾಂಧಿಯವರ ವಿರುದ್ಧ ಈ ಮೊಕದ್ದಮೆಯಲ್ಲಿ ದಾಖಲಿಸಿದ್ದೇನೆ ಎಂದು ಸಾತ್ಯಕಿ ಸಾವರಕರರು ಟ್ವೀಟ ಮಾಡಿದ್ದಾರೆ. ಹಾಗೆಯೇ ರಾಹುಲ ಗಾಂಧಿಯವರು ಹೇಳಿರುವ ಕಥೆ ಕಾಲ್ಪನಿಕವಾಗಿದೆಯೆಂದೂ ಸಾತ್ಯಕಿಯವರು ನಮೂದಿಸಿದ್ದಾರೆ.