ಭರತಪುರ (ರಾಜಸ್ಥಾನ) – ಭರತಪುರ ಜಿಲ್ಲೆಯ ನದಬಯಿ ಪ್ರದೇಶದಲ್ಲಿ ಮಹಾರಾಜಾ ಸೂರಜಮಲ್ ಮತ್ತು ಡಾ. ಆಂಬೇಡಕರ ಇವರ ಪುತ್ತಳಿಯನ್ನು ಸ್ಥಾಪಿಸುವ ವಿಷಯದ ಕುರಿತು ಎಪ್ರಿಲ್ 12 ರಂದು ರಾತ್ರಿ ನಡೆದ ವಿವಾದವು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದರಲ್ಲಿ ರೂಪಾಂತರಗೊಂಡಿತು. ರಾತ್ರಿ 8 ಗಂಟೆಯ ಸುಮಾರಿಗೆ ನಡೆದ ಈ ಹಿಂಸಾಚಾರವು ತಡರಾತ್ರಿ 2 ಗಂಟೆಯ ವರೆಗೆ ಮುಂದುವರಿದಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು.
ನದಬಯಿ ಪ್ರದೇಶದಲ್ಲಿ ಪಾಲಿಕೆಯ ವತಿಯಿಂದ 3 ಸ್ಥಳಗಳಲ್ಲಿ ಪುತ್ತಳಿಗಳನ್ನು ಸ್ಥಾಪಿಸುವವರಿದ್ದರು. ಪ್ರಾದೇಶಿಕ ಆಯುಕ್ತರಾದ ಸಂವರಮಲ್ ವರ್ಮಾ ಇವರ ಅಧ್ಯಕ್ಷತೆಯ ಸಮಿತಿಯು ಕುಮ್ಹೆರ ವೃತ್ತದಲ್ಲಿ ಮಹಾರಾಜಾ ಸೂರಜಮಲ್, ಬಲ್ಲಾರಾ ವೃತ್ತದಲ್ಲಿ ಡಾ. ಬಾಬಾಸಾಹೆಬ್ ಆಂಬೇಡಕರ ಮತ್ತು ನಗರ ವೃತ್ತದಲ್ಲಿ ಭಗವಾನ ಪರಶುರಾಮನ ಪುತ್ತಳಿಯನ್ನು ಸ್ಥಾಪಿಸುವವರಿದ್ದರು. ಆದರೆ `ಬಲ್ಲಾರಾ ಇದು ನದಬಯಿಯ ಮುಖ್ಯ ವೃತ್ತವಾಗಿರುವುದರಿಂದ ಅಲ್ಲಿ ಮಹಾರಾಜಾ ಸೂರಜಮಲ್ ಇವರ ಪುತ್ತಳಿಯನ್ನು ಸ್ಥಾಪಿಸಬೇಕು’ ಎನ್ನುವುದು ಸ್ಥಳೀಯರ ಕೋರಿಕೆಯಾಗಿದೆ. ಈ ಕೋರಿಕೆಗಾಗಿ ಸಾರ್ವಜನಿಕರು ಆಂದೋಲನ ನಡೆಸಿದ್ದರು. ಎಪ್ರಿಲ್ 12 ರ ರಾತ್ರಿ ಈ ವಿಷಯದಲ್ಲಿ ನಡೆದ ವಾದ-ವಿವಾದವು ಹಿಂಸಾಚಾರಕ್ಕೆ ತಿರುಗಿತು.