ಭಗವಾನ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಟೀಕೆ : ಹಾಸ್ಯ ಕಲಾವಿದ ಯಶ ರಾಠೀಯ ವಿರುದ್ಧ ದೂರು ದಾಖಲು

ಹಾಸ್ಯ ಕಲಾವಿದ ಯಶ ರಾಠೀ

ಡೆಹರಾಡುನ (ಜಾರ್ಖಂಡ್) – ಇಲ್ಲಿಯ ಹಾಸ್ಯ ಕಲಾವಿದ ಯಶ ರಾಠೀ ಇವನು ಭಗವಾನ್ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದರಿಂದ ಅವನ ವಿರುದ್ಧ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ಒಂದು ವಾರ್ತೆಯ ಪ್ರಕಾರ, ಉತ್ತರಾಖಂಡನಲ್ಲಿನ ಡೆಹ್ರಾಡೂನ್ ನಲ್ಲಿ ನಂದಾ ವೃತ್ತದ ಬಳಿ ಒಂದು ಹಾಸ್ಯ ಕಾರ್ಯಕ್ರಮದ ಹೆಸರಿನಲ್ಲಿ ಭಗವಾನ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದನು. ಅವನು, ‘ಯೇಸು ಯಾವಾಗ ಮೊದಲು ಬಾರಿ ನೀರಿನ ಮೇಲೆ ನಡೆಯಲು ಪ್ರಯತ್ನ ಮಾಡಿದರು ಆಗ ಅವರು ಮುಳಗಿದರು.ಚಪ್ಪಲಿ ಮೇಲೆ ‘ರಾಮ’ ಎಂದು ಬರೆದಿರಲಿಲ್ಲ, ಆದ್ದರಿಂದ ಆತ ಮೂಳಗಿದ.’ ಎಂದು ಹೇಳಿದ.

ಭಗವಂತ ಶ್ರೀರಾಮನ ಅವಮಾನ ಮಾಡಿರುವುದರಿಂದ ಹಿಂದೂ ಧಾರ್ಮಿಕ ಸಂಘಟನೆಯ ಕಾರ್ಯಕ್ರಮದ ಸ್ಥಳದ ಬಳಿ ಖಂಡಿಸಿದರು. ಅದರ ನಂತರ ಭೈರವ ಭವಾನಿ ಸಂಸ್ಥೆಯ ಅಧ್ಯಕ್ಷ ಸಾಗರ ಜೈಸ್ವಾಲ ಇವರು ಪೊಲೀಸರಲ್ಲಿ ಯಶ ರಾಠೀ ಇವರ ವಿರುದ್ಧ ದೂರು ದಾಖಲಿಸಿದರು. ಈ ದೂರಿನ ಆಧಾರದಲ್ಲಿ ಪೊಲೀಸರು ಯಶ ರಾಠೀ ವಿರುದ್ಧ ದೂರು ದಾಖಲಿಸಿದರು .ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾರ್ಯಕ್ರಮದ ಮೇಲೆ ಸರಕಾರವು ಎಲ್ಲಾ ಕಡೆ ನಿಷೇಧ ಹೇರಿ ಅವರನ್ನು ಜೈಲಿಗೆ ಕಳಿಸಬೇಕು, ಆಗ ಮಾತ್ರ ಅವರು ಸರಿ ದಾರಿಗೆ ಬರುವರು !