|

ಇಂದೂರ್ (ಮಧ್ಯಪ್ರದೇಶ) – ಇಲ್ಲಿನ ಚಂದನ ನಗರದಲ್ಲಿರುವ ಶೀತಲಾಮಾತಾ ದೇವಸ್ಥಾನವನ್ನು ಮತಾಂಧ ಮುಸ್ಲಿಮರು ಧ್ವಂಸಮಾಡಿ ಅಲ್ಲಿಯ ಹಿಂದೂಗಳನ್ನು ಥಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.
೧. ಈ ದೇವಸ್ಥಾನದ ಜೀರ್ಣೋದ್ಧಾರವು ನಡೆಯುತ್ತಿದೆ. ಇಲ್ಲಿ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕೆಲವು ಮಹಿಳೆಯರು ಪೂಜೆಗೆಂದು ಬಂದಿದ್ದರು. ಅಷ್ಟರಲ್ಲಿ ಅಲ್ಲಿಗೆ ರಶೀದ್, ಇಮ್ರಾನ್ ಮತ್ತು ಫಿರೋಜ್ ಬಂದು ಕಾರ್ಮಿಕರನ್ನು ಕೆಲಸ ಮಾಡದಂತೆ ತಡೆದು ಥಳಿಸಿದರು. ಪೂಜೆಗೆ ಬಂದ ಮಹಿಳೆಯರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಇವರು ಮಹಿಳೆಯರನ್ನು ದೇವಸ್ಥಾನವನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ಹಾಗೆ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತದನಂತರ ಅವರು ದೇವಸ್ಥಾನವನ್ನು ಧ್ವಂಸಗೊಳಿಸಿದರು.
೨. ಘಟನೆ ಬಗ್ಗೆ ಮಾಹಿತಿ ಸಿಗುತ್ತಲೇ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಒಗ್ಗೂಡಿ, ಪೊಲೀಸ್ ಠಾಣೆಗೆ ಹೋಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಳಿಕ ದೇವಸ್ಥಾನದ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸರ ಭದ್ರತೆಯಲ್ಲಿ ಜೀರ್ಣೋದ್ಧಾರದ ಕಾರ್ಯ ನಡೆಯುತ್ತಿದೆ. ಹಾಗೂ ಆರೋಪಿಗಳನ್ನು ಹುಡುಕಲಾಗುತ್ತಿದೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಹಿಂದುತ್ವನಿಷ್ಠ ಕಾರ್ಯಕರ್ತರು, ಈ ಹಿಂದೆಯೂ ದೇವಸ್ಥಾನದ ಪರಿಸರದಲ್ಲಿ ಮಾಂಸ ಎಸೆದಿರುವ ಘಟನೆಗಳು ನಡೆದಿವೆ. ಈಗ ವಿಧ್ವಂಸಕ ಕೃತ್ಯ ಆರಂಭವಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಇಲ್ಲಿ ದೊಡ್ಡ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. (ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? – ಸಂಪಾದಕರು)
ಸಂಪಾದಕೀಯ ನಿಲುವು
|
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !