ಮಶೀದಿ ಹತ್ತಿರದ ಮೇಲ್ಛಾವಣಿಯಿಂದ ಕಲ್ಲು ತೂರಾಟ
ಇಟಾವಾ (ಉತ್ತರಪ್ರದೇಶ) – ಇಟಾವಾದಲ್ಲಿ ಕ್ರಿಕೇಟ್ ನಿಂದಾಗಿ ಎರಡು ಗುಂಪುಗಳ ನಡುವೆ ವಿವಾದ ನಡೆದು ಎರಡೂ ಕಡೆಯವರಿಂದ ತೀವ್ರವಾಗಿ ಕಲ್ಲು ತೂರಾಟ ನಡೆಯಿತು. ಈ ಸಂದರ್ಭದಲ್ಲಿ ಕೆಲವು ಮತಾಂಧರು ಮಶೀದಿಯ ಹತ್ತಿರದ ಮೇಲ್ಛಾವಣಿಯಿಂದ ಕಲ್ಲುತೂರಾಟ ಮಾಡುತ್ತಿರುವುದು ಕಂಡು ಬಂದಿತು. ಈ ಕಲ್ಲು ತೂರಾಟದಲ್ಲಿ ಮೂವರು ಗಾಯಗೊಂಡರು. ಇದರ ಮಾಹಿತಿ ಸಿಗುತ್ತಲೇ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಪೊಲೀಸರಿಗೆ ಸಿಕ್ಕಿದೆ.
ಎಪ್ರಿಲ್ 9 ರಂದು ಕೆಲವು ಯುವಕರು ಕಟರಾ ಸಮಶೇರ ಖಾನ ಪ್ರದೇಶವನ್ನು ತಲುಪಿದರು. ಈ ಯುವಕರು ಅಲ್ಲಿರುವ ಅಂಗಡಿಗಳ ಮೇಲೆ ಕಲ್ಲು ತೂರಾಟ ಮಾಡಿದರು. ಮತ್ತು ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡು ಹಾರಿಸಿದ ಬಳಿಕ ಯುವಕರು ಅಲ್ಲಿಂದ ಓಟ ಕಿತ್ತರು. ಸುಮಾರು ಎರಡು ಗಂಟೆಯ ಬಳಿಕ ಆ ಯುವಕರು ಪುನಃ ಅಲ್ಲಿಗೆ ಬಂದರು. ಅವರು ಪುನಃ ಕಲ್ಲು ಎಸೆಯುವುದು ಮತ್ತು ಗುಂಡು ಹಾರಿಸಿದರು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮೇಲ್ಛಾವಣಿಯ ಮೇಲೆ ಈ ರೀತಿ ಕಲ್ಲುಗಳನ್ನು ಯಾರು ಮತ್ತು ಏಕೆ ಸಂಗ್ರಹಿಸಿಟ್ಟುಕೊಂಡಿದ್ದರು ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಜನತೆಯೆದುರಿಗೆ ಬಹಿರಂಗಪಡಿಸಬೇಕು ! |