೧೯೯೦ ರಲ್ಲಿ ನಡೆದಿರುವ ರಾಮ ಭಕ್ತರ ಮೇಲಿನ ದೌರ್ಜನ್ಯದ ಸೇಡು ತೀರಿಸಿಕೊಳ್ಳಲಾಗುವುದು !

ತುಳಸಿ ಪೀಠಾಧಿಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಇವರ ಘೋಷಣೆ !

ತುಳಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ

ಆಗ್ರಾ (ಉತ್ತರಪ್ರದೇಶ) – ತುಳಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಇವರು ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ‘೧೯೯೦ ರಲ್ಲಿ ರಾಮಭಕ್ತರ ಮೇಲಿನ ದೌರ್ಜನ್ಯದ ಸೇಡು ತೀರಿಸಿಕೊಳ್ಳಲಾಗುವುದು’, ಎಂದು ಹೇಳಿಕೆ ನೀಡಿದರು. ‘ನಾನು ಯಾವುದೇ ಸೌಹಾರ್ದ ಹಾಳು ಮಾಡುತ್ತಿಲ್ಲ, ಯಾರಿಗೆ ಭಾರತದಲ್ಲಿ ವಾಸಿಸುವುದಿದೆ ಅವರು ‘ವಂದೇ ಮಾತರಂ’ ಹೇಳಬೇಕು’ ಎಂದು ನಾನು ಬಹಿರಂಗವಾಗಿ ಹೇಳುತ್ತೇನೆ, ಹೀಗೂ ಕೂಡ ಅವರು ಹೇಳಿದರು. ೧೯೯೦ ರಲ್ಲಿ ಶ್ರೀ ರಾಮ ಜನ್ಮಭೂಮಿ ಮುಕ್ತಿಗಾಗಿ ಆಯೋಜಿಸಿದ್ದ ಕಾರಸೇವೆಯ ಸಮಯದಲ್ಲಿ ದೇಶಾದ್ಯಂತದ ಕಾರಸೇವಕರು ಅಯೋಧ್ಯೆಗೆ ಹೋಗಿರುವಾಗ ಆಗಿನ ಮುಲಾಯಮ ಸಿಂಗ ಯಾದವ ಇವರ ಸರಕಾರವು ಗುಂಡು ಹಾರಿಸುವ ಆದೇಶ ನೀಡಿತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯ ಕಾರಸೇವಕರು ಸಾವನ್ನಪ್ಪಿದ್ದರು. ಅವರ ಶವಗಳನ್ನು ಶರಯು ನದಿಯಲ್ಲಿ ಎಸೆಯಲಾಗಿತ್ತು.

ಸ್ವಾಮಿ ರಾಮಭದ್ರಾಚಾರ್ಯರು ತಮ್ಮ ಮಾತು ಮುಂದುವರೆಸಿ, ಇನ್ನು ಮನವಿ ಮಾಡುವುದಿಲ್ಲ, ರಣರಂಗ ಮತ್ತು ಭೀಷಣ ಮಹಾ ಸಂಗ್ರಾಮ ನಡೆಯುವದು. ೧೯೯೦ ರಲ್ಲಿ ನಡೆದಿರುವ ದೌರ್ಜನ್ಯ ನಾವು ಮರೆತಿಲ್ಲ ಮತ್ತು ಮರೆಯುವುದು ಇಲ್ಲ. ನಾವು ಯಾವ ಧರ್ಮ ಗ್ರಂಥಗಳ ಅವಾಮಾನ ಮಾಡಲಿಲ್ಲ; ಆದರೆ ನಮ್ಮ ಧರ್ಮ ಗ್ರಂಥಗಳ ಅವಮಾನ ಮಾಡಲಾಯಿತು. ಹಿಂದುತ್ವಕ್ಕೆ ಅವಮಾನವಾಯಿತು. ನಿಶಸ್ತ್ರ ರಾಮಭಕ್ತರ ಮೇಲೆ ಗುಂಡು ಹಾರಿಸಲಾಯಿತು. ಶರಯು ನದಿ ರಕ್ತದಿಂದ ಕೆಂಪಾಯಿತು. ನನಗೆ ಕಾಣಿಸದೇ ಇರುವಾಗಲೂ ಆ ಸಮಯದಲ್ಲಿ ನನ್ನನ್ನು ಬಂಧಿಸಿ ಥಳಿಸಲಾಯಿತು. ನನ್ನ ಕೈ ಮೂಳೆ ಮುರಿದಿತ್ತು. ನಮಗೆ ಇಂತಹ ಸಾಮರಸ್ಯತೆ ಬೇಡ. ನಮಗೆ ‘ಮಿಲೆ ಮುಲಾಯಂ ಕಾಶಿರಾಮ, ಹವಾ ಮೇ ಉಡ ಗಯೆ ಜೈ ಶ್ರೀ ರಾಮ್’ ಎಂದು ಕೇಳಿಸಲಾಗಿತ್ತು; ಆದರೆ ನಾವು ಏನು ಮಾತನಾಡಲಿಲ್ಲ. ಈಗ ನಾವು ‘ಮರೆ ಮುಲಾಯಂ-ಕಾಶಿರಾಮ, ಪ್ರೇಮ ಸೆ ಬೋಲೋ ಜೈ ಶ್ರೀ ರಾಮ್’, ಎಂದು ಹೇಳಿದರೆ ನಿಮಗೆ ಬೇಸರ ಏಕೆ ಅನಿಸಬೇಕು ? ಎಂದು ಕೇಳಿದರು.