ಈಸ್ಟರ್ ಸಂಡೆಯಂದು ಕ್ರೈಸ್ತ ಪಾದ್ರಿಗಳನ್ನು ಭೇಟಿ ಮಾಡಿದ ಕೇರಳದ ಭಾಜಪದ ನಾಯಕರು !

(ಈಸ್ಟರ್ ಸಂಡೆಯು ಕ್ರೈಸ್ತರ ಒಂದು ಹಬ್ಬವಾಗಿದೆ)

ತಿರುವನಂತಪುರಂ (ಕೇರಳ) – ರಾಜ್ಯದಲ್ಲಿ ಕ್ರೈಸ್ತರನ್ನು ತಮ್ಮಲ್ಲಿ ಸೆಳೆದುಕೊಳ್ಳಲು ಭಾಜಪ ಹವಣಿಸುತ್ತಿರುವುದು ಈಗ ಕಂಡು ಬರುತ್ತಿದೆ. ‘ಈಸ್ಟರ್ ಸಂಡೆಯಂದು ಕ್ರೈಸ್ತ ಕುಟುಂಬಗಳನ್ನು ಭೇಟಿ ಮಾಡಲಾಗುವುದು’, ಎಂದು ಪಕ್ಷವು ಘೋಷಿಸಿತ್ತು. ಅದರಂತೆ, ಮುಖಂಡ ಮುರಳಿಧರನ್ ಇವರು ಲ್ಯಾಟಿನ್ ಕ್ಯಾಥೋಲಿಕ್ ಆರ್ಚ್ ಡಯೊಸಿಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದರೇ, ಭಾಜಪದ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ತಾಲಾಸ್ಸೆರಿಯಲ್ಲಿರುವ ಬಿಶಪ್ ಹೌಸ್‌ಗೆ ತೆರಳಿ ಆರ್ಚ್‌ಬಿಷಪ್ ಮಾರ್ ರೆಮಿಜಿಯಸ್ ಪಾಲ್ ಇಂಚಾನಾನಿಯಲ್ ಅವರನ್ನು ಭೇಟಿಯಾದರು.

ಕೇರಳದ ಮಾಜಿ ಕಾಂಗ್ರೆಸ್ ನಾಯಕರ ಒಂದು ಗುಂಪು ಕ್ರೈಸ್ತರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಪಕ್ಷವನ್ನು ರಚಿಸಲು ಪ್ರಯತ್ನಿಸುತ್ತಿದೆ. ಈ ಪಕ್ಷವು ನಂತರ ಬಾಜಪದೊಂದಿಗೆ ಕೆಲಸ ಮಾಡುತ್ತದೆ, ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕ್ರೈಸ್ತ ಲವ್ ಜಿಹಾದ್ ಮತ್ತು ಇತರ ಪ್ರಕರಣಗಳು ಮುಸ್ಲಿಮರ ಬಗ್ಗೆ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿವೆ. ಇದರ ಲಾಭ ಪಡೆಯಲು ಈ ಗುಂಪು ಪ್ರಯತ್ನಿಸುತ್ತದೆ.