ಗೌಹಟ್ಟಿ – ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿ `ಪಿ.ಎಫ್.ಐ.’ (ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ) ಈ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ 3 ಜಿಹಾದಿಗಳನ್ನು ಆಸ್ಸಾಂ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬಂಧಿಸಲಾಗಿರುವ ಝಾಕಿರ್ ಹುಸೇನ ಮತ್ತು ಅಬೂ ಸಾಮಾ `ಪಿಎಫ್ ಐ’ ನ ರಾಜ್ಯ ಸಚಿವರಾಗಿದ್ದಾರೆ. ಹಾಗೆಯೇ ಮೂರನೇ ಆರೋಪಿ ಶಾಹಿದುಲ್ ಇಸ್ಲಾಮ ಇವನು `ಪಿ.ಎಫ್.ಐ’ಗೆ ಸಂಬಂಧಿಸಿದ `ಸಿ.ಎಫ್.ಐ’ (ಕ್ಯಾಂಪಸ ಫ್ರಂಟ ಆಫ್ ಇಂಡಿಯಾ) ಈ ವಿದ್ಯಾರ್ಥಿ ಸಂಘಟನೆಯ ಖಜಾಂಚಿಯಾಗಿದ್ದಾನೆ. ಆರೋಪಿಯಿಂದ ನಗದು ಹಣವನ್ನು ಮತ್ತು ಕೆಲವು ದಾಳಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
असम में PFI से जुड़े 3 संदिग्ध गिरफ्तार: संगठन पर बैन लगने के बाद SDPI में हुए शामिल, वॉट्सऐप के जरिए फैला रहे थे कट्टरपंथ#Assam #RadicalIslam #PFIhttps://t.co/jVBSU3zLzp
— ऑपइंडिया (@OpIndia_in) April 8, 2023
`ಪಿ.ಎಫ್.ಐ’ ನ ಸದಸ್ಯ `ಎಸ್.ಡಿ.ಪಿ.ಐ’. ನಲ್ಲಿ ಸಹಭಾಗಿ !
`ಪಿ.ಎಫ್.ಐ.’ ಮೇಲೆ ನಿಷೇಧ ಹೇರಿದ ಬಳಿಕ ಅದರ ಎಲ್ಲ ಸದಸ್ಯರು `ಎಸ್.ಡಿ.ಪಿ.ಐ’ ನಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಒಂದು ವರದಿಯಲ್ಲಿ ತಿಳಿಸಲಾಗಿದೆ. `ಪಿ.ಎಫ್.ಐ’ ನ ಸದಸ್ಯರು ಈಗ `ಎಸ್.ಡಿ.ಪಿ.ಐ’ ಸಂಘಟನೆಯ ಮಾಧ್ಯಮದಿಂದ ರಾಜಕೀಯ ಕ್ಷೇತ್ರದಲ್ಲಿ ಇಳಿಯಲು ಸಿದ್ಧಗೊಳ್ಳುತ್ತಿದೆ. (ಇದರಿಂದ ಕೇವಲ ಪಿ.ಎಫ್. ಐ. ಮೇಲಷ್ಟೇ ಅಲ್ಲ ಅದರ ರಾಜಕೀಯ ಸಂಘಟನೆಯಾದ ಎಸ್.ಡಿ.ಪಿ.ಐ. ಮೇಲೆಯೂ ನಿಷೇಧ ಹೇರುವ ಆವಶ್ಯಕತೆಯಿದೆಯೆಂದು ನಮಗೆ ಕಂಡು ಬರುತ್ತದೆ – ಸಂಪಾದಕರು)
ಸಂಪಾದಕೀಯ ನಿಲುವುಪಿ.ಎಫ್.ಐ. ಮೇಲೆ ಕೇವಲ ನಿಷೇಧಿಸಿದರೆ ಸಾಲದು, ಅದರ ಬುಡಸಹಿತ ಕಿತ್ತೊಗೆಯಲು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿ ಪ್ರಯತ್ನಿಸಬೇಕಾಗಿದೆಯೆಂದು ಇದರಿಂದ ಕಂಡು ಬರುತ್ತದೆ ! |