ಉತ್ತರಾಖಂಡದಲ್ಲಿ ಎರಡನೇ ತರಗತಿಯ ಆಂಗ್ಲ ಭಾಷೆಯ ಪುಸ್ತಕದಲ್ಲಿ ತಾಯಿ ಮತ್ತು ತಂದೆಯನ್ನು `ಅಮ್ಮಿ’ ಮತ್ತು `ಅಬ್ಬೂ’ ಎಂದು ಮುಸಲ್ಮಾನರಂತೆ ಉಲ್ಲೇಖ !

ದೂರು ನೀಡಿದ ಬಳಿಕ ಅಕಾಡಮಿ ವತಿಯಿಂದ ಪರಿಶೀಲಿಸಲಾಗುವುದೆಂದು ಭರವಸೆ’

ಡೆಹರಾಡೂನ (ಉತ್ತರಾಖಂಡ) – ಇಂಡಿಯನ ಸರ್ಟಿಫಿಕೇಟ ಆಫ್ ಸೆಕೆಂಡರಿ ಎಜ್ಯುಕೇಶನ’ (ಐ.ಸಿ.ಎಸ್.ಇ) ಮಂಡಳಿಯ ಎರಡನೇ ತರಗತಿಯ ಆಂಗ್ಲ ಭಾಷೆಯ ಪಠ್ಯ ಪುಸ್ತಕದ ಒಂದು ಪಾಠದಲ್ಲಿ ತಾಯಿ ಮತ್ತು ತಂದೆಯ ಉಲ್ಲೇಖವನ್ನು `ಅಮ್ಮಿ’ ಮತ್ತು `ಅಬ್ಬೂ’ ಎಂದು ಮುಸಲ್ಮಾನ ಧರ್ಮದಂತೆ ಸಂಬೋಧಿಸಲಾಗಿದೆ. ಇದರಿಂದ ಓರ್ವ ವಿದ್ಯಾರ್ಥಿಯ ಪೋಷಕರಾದ ಮನೀಷ ಮಿತ್ತಲ ಇವರು ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳಲ್ಲಿ ದೂರು ದಾಖಲಿಸಿ ಪಾಠವನ್ನು ತೆಗೆದುಹಾಕುವಂತೆ ಅಥವಾ ಆ ಸ್ಥಾನದಲ್ಲಿ ಆಂಗ್ಲ ಭಾಷೆಯಂತೆ `ಮದರ’ ಮತ್ತು `ಫಾದರ’ ಎಂದು ಉಲ್ಲೇಖಿಸುವಂತೆ ಕೋರಿದರು. ಇದರಿಂದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ತದನಂತರ ಮುಖ್ಯ ಶಿಕ್ಷಣಾಧಿಕಾರಿ ಪ್ರದೀಪ ಕುಮಾರ ಇವರು, ಈ ಪುಸ್ತಕದ ಒಂದು ಪಾಠದಲ್ಲಿ ಒಂದು ಕಥೆಯಿದ್ದು, ಅದರಲ್ಲಿನ ಪಾತ್ರವಾಗಿರುವ ಆಮೀರ ತನ್ನ ತಂದೆ ತಾಯಿಯನ್ನು ಅವನ ಧರ್ಮಾನುಸಾರ ಅಮ್ಮಿ ಮತ್ತು ಅಬ್ಬೂ ಎಂದು ಕರೆಯುತ್ತಾನೆ. ಎರಡನೇ ತರಗತಿಯ ಗುಲ್ ಮೊಹರ್ ಹೆಸರಿನ ಪುಸ್ತಕದ ಒಂದು ಪಾಠದಲ್ಲಿ ಮಮ್ಮಿ ಮತ್ತು ಪಾಪಾ ಎಂದು ಬರೆಯಲಾಗಿದೆ. ಇದರಿಂದ ಅಕಾಡಮಿಯಿಂದ ಈ ವಿಷಯದ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.