’ಓಟಿಟಿ’ಯಲ್ಲಿ ತೋರಿಸಲಾಗುವ ಅಶ್ಲೀಲ ದೃಶ್ಯಗಳು, ನಗ್ನತೆ, ಬೈಗುಳ ಇದು ನಿಲ್ಲಿಸಬೇಕು ! – ನಟ ಸಲ್ಮಾನ್ ಖಾನ

ನಟ ಸಲ್ಮಾನ್ ಖಾನ್

ಮುಂಬಯಿ – ‘ಓಟಿಟಿ’ಯಲ್ಲಿ ‘(ಚಲನಚಿತ್ರ ಮುಂತಾದವು ನೋಡುವ ಆನ್ಲೈನ್ ಮಾಧ್ಯಮದಲ್ಲಿ) ಯಾರದಾದರೂ ಲಗಾಮು ಇಡಬೇಕು ಎಂದು ನನಗೆ ನಿಜವಾಗಿಯೂ ಅನಿಸುತ್ತದೆ. ಅದರಲ್ಲಿ ತೋರಿಸುವ ಅಶ್ಲೀಲ ದೃಶ್ಯಗಳು, ನಗ್ನತೆ, ಬೈಗುಳ ಇದು ನಿಲ್ಲಬೇಕು. ಪ್ರಸ್ತುತ ೧೫ – ೧೬ ವರ್ಷದ ಮಕ್ಕಳು ಕೂಡ ನೋಡುತ್ತಾರೆ. ಅಭ್ಯಾಸದ ಹೆಸರಿನಲ್ಲಿ ಯಾವುದಾದರೂ ೧೬ ವರ್ಷದ ಹುಡುಗಿ ಸಂಚಾರವಾಣಿಯಲ್ಲಿ ಇದೆಲ್ಲವೂ ನೋಡುವುದು ನಿಮಗಾದರೂ ಹಿಡಿಸುವುದೇ ? ‘ಓಟಿಟಿ’ಯಲ್ಲಿ ಬರುವ ಪ್ರತಿಯೊಂದು ವಿಷಯ ಪರಿಶೀಲಿಸಿ ಹೋಗಬೇಕು. ‘ಕಂಟೆಂಟ್’ (ವಿಷಯ) ಎಷ್ಟು ಸ್ವಚ್ಛವಾಗಿರುವುದು ಅಷ್ಟು ಅದನ್ನು ನೋಡುವುದಕ್ಕಾಗಿ ಜನರು ಅಷ್ಟೇ ಜನಜಂಗುಳಿ ಕೂಡ ಮಾಡುವರು, ಎಂದು ನಟ ಸಲ್ಮಾನ್ ಖಾನ ಇವರು ಪತ್ರಕರ್ತರ ಜೊತೆ ಮಾತನಾಡುವಾಗ ಹೇಳಿದರು.

‘ಕೆಲವುದಿನಗಳಲ್ಲಿ ಚಲನಚಿತ್ರದಲ್ಲಿ ಕೂಡ ಈ ರೀತಿಯ ದೃಶ್ಯಗಳು ನೋಡಲು ಸಿಗುತ್ತಿತ್ತು; ಆದರೆ ಈಗ ಅದರ ಪ್ರಮಾಣ ಕಡಿಮೆ ಆಗಿದೆ. ನಾವು ಭಾರತದಲ್ಲಿ ವಾಸಿಸುತ್ತೇವೆ, ನಮಗೆ ನಮ್ಮ ಮಿತಿ ಗಮನಕ್ಕೆ ಬರಬೇಕು, ಈಗ ನಿಧಾನವಾಗಿ ಜನರು ಒಳ್ಳೆಯ ‘ಕಂಟೆಂಟ್’ ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ಇದು ಒಳ್ಳೆಯ ವಿಷಯವೇ ಆಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಖಾನ ಇವರು ನೀಡಿರುವ ಈ ಹೇಳಿಕೆ ಯೋಗ್ಯವೇ ಆಗಿದೆ; ಆದರೆ ಅದನ್ನು ತಡೆಯಲು ಅವರು ನೇತೃತ್ವ ವಹಿಸುವರೇ, ಇದನ್ನು ಕೂಡ ಅವರು ಹೇಳಬೇಕು !