ಪ್ರಧಾನಿ ಮೋದಿಯವರು ಎಂದಿಗೂ ಸೇಡಿನ ರಾಜಕೀಯವನ್ನು ಮಾಡಿಲ್ಲ ! – ಗುಲಾಮ ನಬಿ ಆಝಾದ

ಎಡದಿಂದ ಗುಲಾಮ ನಬಿ ಆಝಾದ ಮತ್ತು ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ – ನಾನು ಅನೇಕ ವಿಷಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಿದ್ದೇನೆ; ಆದರೆ ಅವರು ಎಂದೂ ಸೇಡಿನ ರಾಜಕೀಯ ಮಾಡಿಲ್ಲ ಎಂದು ಕಾಂಗ್ರೆಸ್ಸಿನ ಮಾಜಿ ಮುಖಂಡ ಗುಲಾಮ ನಬಿ ಆಝಾದ ಇವರು ಒಂದು ವಾರ್ತಾವಾಹಿನಿಯೊಂದಿಗೆ ಮಾತನಾಡುವಾಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಡೆಮಾಕ್ರೆಟಿಕ್ ಆಝಾದ ಪಕ್ಷದ ಅಧ್ಯಕ್ಷರಾಗಿರುವ ಗುಲಾಮ ನಬಿ ಆಝಾದರ ಆತ್ಮಚರಿತ್ರೆಯನ್ನು ಕಾಂಗ್ರೆಸ್ಸಿನ ಮುಖಂಡ ಕರಣ ಸಿಂಹ ಇವರ ಹಸ್ತದಿಂದ ಎಪ್ರಿಲ್ 4 ರಂದು ಉದ್ಘಾಟಿಸಲಾಯಿತು. ಅದಕ್ಕಿಂತ ಮೊದಲು ಆಝಾದರು ಒಂದು ವಾರ್ತಾವಾಹಿನಿಗೆ ಸಂದರ್ಶನ ನೀಡುದಾಗ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು. ಗುಲಾಮ ನಬಿ ಆಝಾದರು ತಮ್ಮ ಆತ್ಮಚರಿತ್ರೆಯಲ್ಲಿ 50 ವರ್ಷಗಳ ರಾಜಕೀಯ ಅನುಭವ ಮತ್ತು ಅನೇಕ ಘಟನೆಗಳ ಉಲ್ಲೇಖಿಸಿದರು. ಇದರಲ್ಲಿ ಅವರು ತಮ್ಮ ಹಳೆಯ ಸಹೋದ್ಯೋತಿ ಜಯರಾಮ ರಮೇಶ ಮತ್ತು ಸಲಮಾನ ಖುರ್ಶೀದ ಇವರ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ.