|
ಹುಗಳಿ (ಬಂಗಾಲ) – ಶ್ರೀ ರಾಮನವಮಿಯ ದಿನ ಎಂದರೆ ಏಪ್ರಿಲ್ ೨ ರಂದು ಸಂಜೆ ಭಾಜಪದಿಂದ ಮೆರವಣಿಗೆ ನಡೆಸಿದರು. ಅದರ ಮೇಲೆ ರಿಶರಾ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿದಲ್ಲಿ ದಾಳಿ ನಡೆಯಿತು. ಇದರಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಉಪಯೋಗಿಸಿದರು. ಈ ಹಿಂಸಾಚಾರದಲ್ಲಿ ಭಾಜಪದ ಸಂಸದ ಬೀಮಾನ ಘೋಷ ಹಾಗೂ ಅನೇಕ ಪೊಲೀಸಸರು ಗಾಯಗೊಂಡರು. ಘೋಷಯಿವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಹಿಂಸಾಚಾರದ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೧೨ ಜನರನ್ನು ಬಂಧಿಸಿದ್ದಾರೆ. ಇಲ್ಲಿ ಈಗ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
#WATCH | West Bengal: Ruckus and stone pelting erupt during the BJP Shobha yatra in Hooghly pic.twitter.com/fbRdsGRkNT
— ANI (@ANI) April 2, 2023
೧. ಈ ಹಿಂಸಾಚಾರದ ಪ್ರಕರಣದಲ್ಲಿ ಭಾಜಪದ ಮುಖಂಡ ದಿಲೀಪ ಘೋಷ ಇವರು, ಮಹಿಳೆಯರ ಮತ್ತು ಮಕ್ಕಳ ಮೇಲೆ ಕೂಡ ಕಲ್ಲು ತೂರಾಟ ಮಾಡಲಾಯಿತು. ಹಾವಡಾದಲ್ಲಿನ ಹಿಂಸಾಚಾರದ ನಂತರ ಕೂಡ ರಾಜ್ಯ ಸರಕಾರದಿಂದ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
೨. ಈ ಪ್ರಕರಣದಲ್ಲಿ ಸಂಸದ ಬೀಮಾನ ಘೋಷ ಇವರು ರಾಜ್ಯಪಾಲ ಆನಂದಿ ಬೋಸ ಹಾಗೂ ಕೇಂದ್ರ ಸಚಿವ ಅಮಿತ ಶಹಾ ಇವರಿಗೆ ಪತ್ರ ಬರೆದು ಬಂಗಾಲದಲ್ಲಿ ಕೇಂದ್ರ ಸುರಕ್ಷಾ ದಳವನ್ನು ನೇಮಿಸಲು ಒತ್ತಾಯಿಸಿದ್ದಾರೆ. ಘೋಷ ಇವರು ಪತ್ರದಲ್ಲಿ, ಆಯೋಜನಾಬದ್ಧವಾಗಿ ಕಲ್ಲು, ಕತ್ತಿ ಮತ್ತು ನಾಡ ಬಾಂಬ್ ಮೂಲಕ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮೂಕದರ್ಶಕರಾಗಿದ್ದರು. ಪೊಲೀಸರೆದರೂ ಹಿಂದೂಗಳಿಗೆ ಥಳಿಸಲಾಗುತ್ತಿತ್ತು.
ಸಂಪಾದಕೀಯ ನಿಲುವುಬಿಹಾರ ಮತ್ತು ಬಂಗಾಲ ಇಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆ ಮೇಲೆ ನಡೆಯುವ ನಿರಂತರ ದಾಳಿ ಮತ್ತು ಸರಕಾರದ ನಿಷ್ಕ್ರಿಯತೆ ನೋಡಿದರೆ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಅವಶ್ಯಕತೆ ಇದೆ ! ಕೇಂದ್ರದಲ್ಲಿನ ಭಾಜಪ ಸರಕಾರ ಹಿಂದೂಗಳ ರಕ್ಷಣೆಗಾಗಿ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕ ! |
ಗಲಭೆ ನಡೆಸಿದ ರೌಡಿಗಳನ್ನು ಹತ್ತಿಕಲಾಗುವುದು ! – ರಾಜ್ಯಪಾಲ ಆನಂದಿ ಬೋಸ
ಬಂಗಾಲದ ರಾಜ್ಯಪಾಲ ಆನಂದ ಬೋಸ ಇವರು ಈಗ ಗಲಭೆಯ ಬಗ್ಗೆ ಆಶ್ವಾಸನೆ ನೀಡುತ್ತಾ, ಆರೋಪಿಗಳನ್ನು ರಾತ್ರಿಯ ಒಳಗೆ ಬಂದಿಸಲಾಗುವುದು. ಈ ರೌಡಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುವುದು. ನಾವು ರಾಜ್ಯದಲ್ಲಿ ಈ ರೀತಿಯ ಬೆಂಕಿ ಅನಾಹುತ ಮತ್ತು ಲೂಟಿ ನಾಶ ಮಾಡುವುದಕ್ಕಾಗಿ ಕಟಿಬದ್ಧರಾಗಿದ್ದೇವೆ. ಬೆಂಕಿಯ ಜೊತೆಗೆ ಸರಸವಾಡುತ್ತಿದ್ದಾರೆ ಎಂದು ಕಾನೂನು ದ್ರೋಹ ಮಾಡುವವರಿಗೆ ಬೇಗನೆ ತಿಳಿಯುವುದು ಎಂದು ಹೇಳಿದರು.
ಭಾಜಪ ಧಾರ್ಮಿಕ ಗಲಭೆ ಪ್ರಚೋದಿಸುವುದಕ್ಕಾಗಿ ಗುರುತಿಸಲಾಗುತ್ತದೆ ! – ಕೈಗಾರಿಕಾ ಸಚಿವ ಪಾಂಜಾ
ಬಂಗಾಲದ ಕೈಗಾರಿಕಾ ಸಚಿವ ಪಾಂಜಾ ಇವರು, ಭಾಜಪ ರಾಜ್ಯದಲ್ಲಿನ ಶಾಂತಿ ಕದಡುತ್ತಿದೆ. ಭಾಜಪ ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸುವುದು ಮತ್ತು ದೇಶಾದ್ಯಂತ ಧಾರ್ಮಿಕ ಗಲಭೆ ಪ್ರಚೋದಿಸುವುದಕ್ಕಾಗಿ ಗುರುತಿಸಲಾಗುತ್ತದೆ. ಯಾವ ಮೆರವಣಿಗೆಯ ಮೇಲೆ ದಾಳಿ ನಡೆದಿದೆ, ಅದರ ನೇತೃತ್ವ ದಿಲೀಪ ಘೋಷ ಇವರದಾಗಿತ್ತು. ಅವರನ್ನು ಪ್ರಚೋದನೆಕಾರಿ ಹೇಳಿಕೆಗಾಗಿ ಗುರುತಿಸಲಾಗುತ್ತದೆ. (ಬಂಗಾಲ ರಾಜ್ಯ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತರು ಹಿಂಸಾಚಾರಕ್ಕಾಗಿ ಮತ್ತು ನಾಡು ಬಾಂಬ್ ಕಾರ್ಖಾನೆಗಾಗಿ ಗುರುತಿಸಿಕೊಂಡಿದ್ದಾರೆ, ಹೀಗೆ ಹೇಳಿದರೆ ತಪ್ಪಾಗಲಾರದು ! – ಸಂಪಾದಕರು)