ಸೊಳ್ಳೆ ಹೊಡೆಯುವ ‘ಸುರಳಿ(ಕಾಯಿಲ್)’ನ ಹೊಗೆಯಿಂದ ಕುಟುಂಬದಲ್ಲಿ ೬ ಸದಸ್ಯರ ಮೃತ್ಯು !

ಶಾಸ್ತ್ರಿ ಪಾರ್ಕ್ನ ಮಚ್ಚಿ ಮಾರುಕಟ್ಟೆಯ ಮಜರ್ ವಾಲಾ ರಸ್ತೆಯಲ್ಲಿರುವ ಮನೆ

ನವ ದೆಹಲಿ – ನಗರದ ಶಾಸ್ತ್ರಿ ಪಾರ್ಕನಲ್ಲಿ ವಾಸಿಸುತ್ತಿದ್ದ ಒಂದು ಕುಟುಂಬದ ಎಲ್ಲಾ ೬ ಸದಸ್ಯರು ರಾತ್ರಿ ಮಲಗಿದ್ದಾಗ ಸಾವನ್ನೊಪ್ಪಿದ್ದಾರೆ. ಪೊಲೀಸರ ಪ್ರಕಾರ, ಸೊಳ್ಳೆ ಸುರುಳಿಗಳಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಹೊಗೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾತಿಯಿಡೀ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಅವರೆಲ್ಲರೂ ಸಾವನ್ನೊಪ್ಪಿದ್ದಾರೆ.