ಮೇ ೧೦ ರಂದು ರಾಜ್ಯ ವಿಧಾನಸಭೆ ಚುನಾವಣೆ ೧೩ ಕ್ಕೆ ಫಲಿತಾಂಶ

#karnatakaelection2023. #electioncommission. #karnatakanews

  • ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಘೋಷಣೆ

  • ಏಪ್ರಿಲ್ 13 ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್‌ 20 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕವಿದ್ದು ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಅಲ್ಲದೇ ಏಪ್ರಿಲ್‌ 24 ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ

ಬೆಂಗಳೂರು – ಇಂದು ಬೆಳಗ್ಗೆ ೧೧.೩೦ ಕ್ಕೆ ಚುನಾವಣಾ ಆಯೋಗದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಇವರು ಮೇ ೧೦ ರಂದು ಚುನಾವಣೆ ನಡೆಯಲಿದೆ. ಅಲ್ಲದೇ ಮೇ ೧೩ ಕ್ಕೇ ಫಲಿತಾಂಶ ಪ್ರಕಟವಾಗಲಿದೆ ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ರಾಜ್ಯದಲ್ಲಿ ಚುನಾವಣಾ ಸಿದ್ದತೆಯ ಪರಿಶೀಲನೆ ನಡೆಸಿತ್ತು.

ಇಂದು ಚುನಾವಣೆ ಘೋಷಣೆಯಾದ ಕ್ಷಣದಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಆಗಿದೆ. ರಾಜ್ಯದಲ್ಲಿ 5.21 ಮತದಾರರಿದ್ದಾರೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂಬುದರ ಮಾಹಿತಿಯನ್ನು ನೀಡಿದ್ದಾರೆ.

80 ಕ್ಕಿಂತ ಹೆಚ್ಚು ವರ್ಷದ 12.15 ಲಕ್ಷ ಮತ್ತು 15 ಸಾವಿರಕ್ಕೂ ಅಧಿಕ ಮಂದಿ 100 ವರ್ಷ ದಾಟಿದವರಿದ್ದಾರೆ. ಹಿರಿಯ ನಾಗರಿಕರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಿದೆ. 80 ವರ್ಷ ದಾಟಿದ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪರಿಚಯಿಸಲಾಗುತ್ತಿದೆ.

(ಸೌಜನ್ಯ : Tv9 Kannada)

ಚುನಾವಣೆಯ ಇನ್ನಷ್ಟು ಮಾಹಿತಿ

1. ರಾಜ್ಯದಲ್ಲಿ ಸೂಕ್ಷ್ಮಮತಗಟ್ಟೆ 12,000

2. ಗುಡ್ಡಗಾಡು ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕೇಂದ್ರ

3. ನಗರ ಪ್ರದೇಶದಲ್ಲಿ 24063 ಕೇಂದ್ರ,

4. ಗ್ರಾಮದಲ್ಲಿ 34219,

5. 400 ಕ್ಕೂ ಹೆಚ್ಚು ಇಕೋ ಫ್ರೆಂಡ್ಲೀ ಮತಕೇಂದ್ರ

6. 19 ಜಿಲ್ಲೆ 171 ಅಂತರ ರಾಜ್ಯ ಚೆಕ್ ಪೋಸ್ಟ ಸ್ಥಾಪನೆ ಮಾಡಲಾಗುವುದು