ಲ್ಹಾಸಾ- ಬೌದ್ಧ ಧರ್ಮದ ಸರ್ವೋಚ್ಚ ನಾಯಕ ದಲಾಯಿ ಲಾಮಾರವರು ಓರ್ವ 8 ವರ್ಷದ ಮಂಗೋಲಿಯನ ಬಾಲಕನನ್ನು ಟಿಬೇಟಿಯನ್ ಬೌದ್ಧ ಧರ್ಮದ ಮೂರನೇಯ ಅತ್ಯಂತ ಮಹತ್ವದ ಆಧ್ಯಾತ್ಮಿಕ ನಾಯಕನೆಂದು ಘೋಷಿಸಿದರು. ಈ ಸಂದರ್ಭದಲ್ಲಿ 600 ಮಂಗೋಲಿಯನ ಬೌದ್ಧರು ತಮ್ಮ ಹೊಸ ಅಧ್ಯಾತ್ಮಿಕ ನಾಯಕನನ್ನು ಸ್ವಾಗತಿಸಲು ಸಮುದಾಯದವರೊಂದಿಗೆ ಸಮಾರಂಭವನ್ನು ಆಚರಿಸಲು ಒಂದುಗೂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕಾರ್ಯಕ್ರಮದ ಛಾಯಾಚಿತ್ರಗಳು ಪ್ರಸಾರವಾಗಿವೆ. ಈ ಛಾಯಾಚಿತ್ರಗಳಲ್ಲಿ 87 ವರ್ಷದ ದಲಾಯಿ ಲಾಮಾ ಕೆಂಪು ವಸ್ತ್ರವನ್ನು ಧರಿಸಿದ್ದರು ಮತ್ತು ಬಾಲಕನನ್ನು ಭೇಟಿಯಾಗುತ್ತಿರುವುದು ಕಾಣಿಸುತ್ತಿತ್ತು. ಈ ಬಾಲಕನ ಹೆಸರು ಇದುವರೆಗೂ ಬಹಿರಂಗವಾಗಿಲ್ಲ.
Mongolian child named by Dalai Lama as reincarnation of Buddhism’s third most important leader https://t.co/b9mrZj2wtg
— Daily Mail U.K. (@DailyMailUK) March 23, 2023
ಪ್ರಸಾರಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ ಅವಳಿ ಜವಳಿ ಮಕ್ಕಳಲ್ಲಿ ಒಬ್ಬನಾಗಿರುವ ಈ ಬಾಲಕನನ್ನು ದಲಾಯಿ ಲಾಮಾ ಅಂದರೆ ಬೌದ್ಧರ ಓರ್ವ ಧರ್ಮಗುರು ಖಲಖಾ ಜೆಟ್ಸನ್ ಧಂಪಾ ರಿನಪೋಛೆಯವರ ಪುನರ್ಜನ್ಮವೆಂದು ಹೇಳಲಾಗುತ್ತಿದೆ. ಬೌದ್ಧ ಧರ್ಮಗುರುಗಳ ಪುನರ್ಜನ್ಮಕ್ಕೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ.
ಧರ್ಮಗುರುಗಳ ಪುನರ್ಜನ್ಮದ ಸಮಾರಂಭವನ್ನು ಹಿಮಾಚಲ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. ಅಲ್ಲಿಯೇ ದಲಾಯಿ ಲಾಮಾ ವಾಸಿಸುತ್ತಾರೆ. ಈ ಸಮಾರಂಭದ ಕಾರಣದಿಂದ ಮಂಗೋಲಿಯಾದ ಪಕ್ಕದಲ್ಲಿರುವ ಚೀನಾ ಆಕ್ರೋಶಗೊಳ್ಳುವ ಸಾಧ್ಯತೆಯಿದೆ. ದಲಾಯಿ ಲಾಮಾರವರು 2016 ರಲ್ಲಿ ಮಂಗೋಲಿಯಾ ಪ್ರವಾಸ ಮಾಡಿದ್ದರು. ಆಗ ಚೀನಾ ಅವರನ್ನು ಟೀಕಿಸಿತ್ತು. ಚೀನಾ ಸರಕಾರವು ಟೀಕಿಸುತ್ತಾ, ಅವರ ಈ ಪ್ರವಾಸದಿಂದ ಚೀನಾ-ಮಂಗೋಲಿಯಾ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆಯೆಂದು ತಿಳಿಸಿತ್ತು.