ವಿಶ್ವಸಂಸ್ಥೆಯ ಸಂತೋಷದ ದೇಶಗಳ ಪಟ್ಟಿಯಲ್ಲಿ ಭಾರತವು ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗೆ !

ನವ ದೆಹಲಿ – ಮಾರ್ಚ್ ೨೦ ರಂದು ‘ವರ್ಲ್ಡ ಹ್ಯಾಪಿನೆಸ್ ಡೇ’ ದಂದು ಘೋಷಿಸಲಾದ ‘ವರ್ಲ್ಡ ಹ್ಯಾಪಿನೆಸ್ ಡೇ ಇಂಡೆಕ್ಸ್’ನಲ್ಲಿ ದೇಶಾದ್ಯಂತ ಸಂತೋಷವಾಗಿರುವ ದೇಶಗಳ ಹೆಸರುಗಳಿವೆ. ೧೩೭ ದೇಶಗಳ ಈ ಪಟ್ಟಿಯಲ್ಲಿ ಭಾರತ ೧೨೫ ನೇ ಸ್ಥಾನದಲ್ಲಿದೆ. ಕಳೆದ ವರ್ಷ ೧೩೬ ನೇ ಸ್ಥಾನದಲ್ಲಿತ್ತು. ಪಾಕಿಸ್ತಾನ ೧೦೮ ನೇ ಸ್ಥಾನದಲ್ಲಿದೆ. ಇದರ ನಂತರ ಬಾಂಗ್ಲಾದೇಶ ೧೧೮ ನೇ, ಶ್ರೀಲಂಕಾ ೧೧೨ ನೇ ಮತ್ತು ನೇಪಾಳ ೭೮ ನೇ ಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ‘ಸಸ್ಟೆನೆಬಲ್ ಡೆವಲಪ್ ಮೆಂಟ್ ಸೊಲ್ಯುಶನ್ಸ್ ನೆಟ್‌ವರ್ಕ್‌’ನಿಂದ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಪಟ್ಟಿಯನ್ನು ಮಾಡುವಾಗ ವಿವಿಧ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರ ಆಧಾರದಲ್ಲಿ, ಪ್ರಪಂಚದಾದ್ಯಂತದ ದೇಶಗಳಲ್ಲಿನ ಪರಿಸ್ಥಿತಿಗಳ ಮೌಲ್ಯಮಾಪನ ಮಾಡುವ ಮೂಲಕ ಪಟ್ಟಿಯಲ್ಲಿ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಭಾರತದ ೧,೦೦೦ ಜನರ ಅಭಿಪ್ರಾಯಗಳನ್ನು ಕೇಳಿದ ನಂತರ ಈ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ನಿರ್ಧರಿಸಲಾಗಿದೆ. (ಕೇವಲ ೧ ಸಾವಿರ ಜನರ ಅಭಿಪ್ರಾಯದಿಂದ ದೇಶದ ೧೪೦ ಕೋಟಿ ಜನರ ಸ್ಥಿತಿ ಹೇಗೆ ಅರ್ಥವಾಗುತ್ತದೆ ? – ಸಂಪಾದಕರು)

೧. ಈ ಪಟ್ಟಿಯ ಪ್ರಕಾರ, ಫಿನ್ಲ್ಯಾಂಡ್ ಕಳೆದ ೬ ವರ್ಷಗಳಂತೆ ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ನಂತರ ಡೆನ್ಮಾರ್ಕ್, ಐಸ್ ಲ್ಯಾಂಡ್, ಇಸ್ರೈಲ್, ನೆದರಲ್ಯಾಂಡ್, ಸ್ವೀಡನ್, ನಾರ್ವೆ, ಸ್ವಿಟ್ಜರ್ಲ್ಯಾಂಡ್, ಲಕ್ಸೆಂಬರ್ಗ್ ಮತ್ತು ನ್ಯೂಜಿಲೆಂಡ್ ಈ ದೇಶಗಳು ಇವೆ.

೨. ಎಲ್ಲಕ್ಕಿಂತ ಕಡಿಮೆ ಸಂತೋಷದ ದೇಶಗಳಲ್ಲಿ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನವು ಕೆಳಭಾಗದಲ್ಲಿದೆ. ಇದಲ್ಲದೆ ಲೆಬನಾನ್, ಜಿಂಬಾಬ್ವೆ ಮತ್ತು ಕಾಂಗೋ ದೇಶಗಳು ಸೇರಿವೆ.

ಪಟ್ಟಿಗೆ ಮಾನದಂಡ !

ಪಟ್ಟಿಯ ಮಾನದಂಡಗಳು ಸಾಮಾನ್ಯ ಜೀವಿತಾವಧಿ, ಒಟ್ಟು ರಾಷ್ಟ್ರೀಯ ಆದಾಯ, ಸಾಮಾಜಿಕ ಸಾಮರಸ್ಯ, ಭ್ರಷ್ಟಾಚಾರದ ಪ್ರಮಾಣ ಮತ್ತು ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಗರಿಕರ ಸ್ವಾತಂತ್ರ್ಯವನ್ನು ಒಳಗೊಂಡಿತ್ತು. (ಒಬ್ಬ ವ್ಯಕ್ತಿಯ ಸ್ಪಂದನಗಳು, ಸಾಧನೆ, ಮುಖದ ಮೇಲಿನ ಭಾವ ಮುಂತಾದ ಉನ್ನತ ಆಧ್ಯಾತ್ಮಿಕ ಮಾನದಂಡಗಳ ಮೂಲಕ ವ್ಯಕ್ತಿಯ ಸಂತೋಷವನ್ನು ಮೌಲ್ಯಮಾಪನ ಮಾಡುವ ಅಧ್ಯಾತ್ಮಿಕಶಾಸ್ತ್ರ, ಮತ್ತು ಎಲ್ಲಿ ಬಾಹ್ಯ ಮತ್ತು ಭೌತಿಕ ಮಾನದಂಡಗಳ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನು ಮೌಲ್ಯಮಾಪನ ಮಾಡುವ ವಿದೇಶಿ ಸಂಸ್ಥೆಗಳು ! – ಸಂಪಾದಕರು)

ಸಂಪಾದಕರ ನಿಲುವು

ತಿನ್ನಲು ಆಹಾರವೂ ಸಿಗದೆ ಇರುವ ದೇಶಗಳಲ್ಲಿನ ಜನರು ಭಾರತೀಯರಿಗಿಂತ ಹೆಚ್ಚು ಸಂತೋಷದಲ್ಲಿದ್ದಾರೆ, ಎಂದು ಹೇಳಬಹುದೇ ? ವಿದೇಶಿ ಸಂಸ್ಥೆಗಳ ಇಂತಹ ಪಟ್ಟಿಗಳು ಮತ್ತು ತೀರ್ಮಾನಗಳು ಭಾರತಕ್ಕೆ ಯಾವಾಗಲೂ ಕೀಳಾಗಿ ನೋಡುತ್ತವೆ, ಎಂದು ಇಲ್ಲಿಯವರೆಗೆ ಕಂಡುಬಂದಿದೆ. ಆದ್ದರಿಂದ ಇಂತಹವರನ್ನು ಭಾರತೀಯರು ನಂಬಲೇಬಾರದು ಎಂದು ಸರಕಾರ ಘೋಷಿಸುವುದು ಅವಶ್ಯಕ !