ನ್ಯಾಯಾಧೀಶರು ವಾರದ ಏಳು ದಿನ ಕೆಲಸ ಮಾಡುತ್ತಾರೆ ! – ನ್ಯಾಯಾಧೀಶ ಧನಂಜಯ ಚಂದ್ರಚೂಡ

ನವ ದೆಹಲಿ – ನ್ಯಾಯಾಧೀಶರು ವಾರದ ಏಳು ದಿನ ಕೂಡ ಕೆಲಸ ಮಾಡುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಮೂರ್ತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ೫೦ ರಿಂದ ೬೦ ಪ್ರಕರಣಗಳನ್ನು ಕೇಳುತ್ತಾರೆ. ಅನೇಕ ಬಾರಿ ತೀರ್ಪು ಕಾಯ್ದಿಸಲಾಗುತ್ತದೆ. ಆದ್ದರಿಂದ ಶನಿವಾರ ನ್ಯಾಯಾಧೀಶರು ತೀರ್ಪು ಬರೆಯುವದರಲ್ಲಿ ತೊಡಗಿರುತ್ತಾರೆ. ಅವರು ಭಾನುವಾರ ಕೂಡ ಸೋಮವಾರದ ವಿಚಾರಣೆಯ ತಯಾರಿಮಾಡಿಕೊಳ್ಳುತ್ತಾರೆ. ನ್ಯಾಯಾಧೀಶರು ವರ್ಷದಲ್ಲಿ ೨೦೦ ದಿನ ನ್ಯಾಯಾಲಯದ ಕೆಲಸ ಮಾಡುತ್ತಾರೆ, ಅವರು ರಜೆಯಲ್ಲಿ ಇದ್ದರೂ ಕೂಡ ಅವರ ತಲೆಯಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಕಾನೂನು ಮತ್ತು ನಿಯಮ ಇದೆ ಎಲ್ಲಾ ಯೋಚನೆಗಳು ನಡೆಯುತ್ತಿರುತ್ತವೆ. ಸ್ವಲ್ಪ ಸಮಯ ಮಾತ್ರ ದೊರೆಯುತ್ತದೆ, ಅದರಲ್ಲಿ ಕೂಡ ಅವರು ಕೆಲಸದ ಬಗ್ಗೆ ಯೋಚನೆ ಮಾಡುತ್ತಾರೆ, ಎಂದು ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರು ಇಲ್ಲಿ ‘ಇಂಡಿಯಾ ಟುಡೇ ಕಾಂಕ್ಲೆವ’ದಲ್ಲಿ(ಪರಿಷತ್ತಿನಲ್ಲಿ) ಮಾತನಾಡುವಾಗ ಹೇಳಿದರು. ನ್ಯಾಯಾಲಯದಲ್ಲಿನ ಬಾಕಿ ಇರುವ ಪ್ರಕರಣಗಳು ಮತ್ತು ನ್ಯಾಯಾಲಯಕ್ಕೆ ದೊರೆಯುವ ರಜೆಗಳು ಇದರ ಬಗ್ಗೆ ಯಾವಾಗಲೂ ಪ್ರಶ್ನೆ ಕೇಳಲಾಗುತ್ತದೆ. ಅದರ ಬಗ್ಗೆ ಅವರು ಮಾತನಾಡುತ್ತಿದ್ದರು.

ನ್ಯಾಯಾಧೀಶರು ಮಂಡಿಸಿರುವ ಅಂಶಗಳು

೧. ಯಾವುದೇ ವ್ಯವಸ್ಥೆ ಪೂರ್ಣ ಇರುವುದಿಲ್ಲ; ಆದರೆ ನಮ್ಮ ಬಳಿ ಎಲ್ಲಕ್ಕಿಂತ ಉತ್ತಮ ವ್ಯವಸ್ಥೆ ಇರುವುದು. ‘ಕಾಲೇಜಿಎಂ’ (ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದ ವ್ಯವಸ್ಥೆ) ವ್ಯವಸ್ಥೆಯ ಹಿಂದೆ ಮುಖ್ಯ ಉದ್ದೇಶ ‘ನ್ಯಾಯ ವ್ಯವಸ್ಥೆಯನ್ನು ಸ್ವತಂತ್ರ ಮತ್ತು ಸುರಕ್ಷಿತ ಇರಿಸುವುದಾಗಿರುತ್ತದೆ’. ನಮಗೆ ನ್ಯಾಯ ವ್ಯವಸ್ಥೆಯನ್ನು ಸ್ವತಂತ್ರವಾಗಿ ಇಡುವುದಿದ್ದರೆ ಆಗ ಅದನ್ನು ಹೊರಗಿನ ಪ್ರಭಾವದಿಂದ ದೂರ ಇರಿಸಬೇಕು.

೨. ನಾನು ೨೩ ವರ್ಷಗಳಿಂದ ನ್ಯಾಯಾಧೀಶನೆಂದು ಕೆಲಸ ಮಾಡುತ್ತಿದ್ದೇನೆ ;ಆದರೂ ಯಾವುದಾದರೂ ಪ್ರಕರಣದಲ್ಲಿ ಯಾವುದು ಮತ್ತು ಹೇಗೆ ನಿರ್ಣಯ ತೆಗೆದುಕೊಳ್ಳುವುದು? ಇದು ನನಗೆ ಯಾರು ಹೇಳಲಿಲ್ಲ. ಸರಕಾರದಿಂದ ಕೂಡ ಎಂದು ಯಾವುದೇ ಒತ್ತಡ ಬಂದಿಲ್ಲ ಎಂದು ಹೇಳಿದರು.