ದೇಶದ ಉಚ್ಚ ನ್ಯಾಯಾಲಯದ 216 ನ್ಯಾಯಮೂರ್ತಿಗಳ ಹುದ್ದೆ ಖಾಲಿ !

ನವ ದೆಹಲಿ – `ಕಾಲಿಜಿಯಮ್’ನ ಅನುಮತಿ ಸಿಗದೇ ಇದ್ದರಿಂದ ದೇಶದಲ್ಲಿನ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ 216 ಹುದ್ದೆಗಳು ಖಾಲಿಯಿದೆ ಎಂದು ಕೇಂದ್ರೀಯ ಕಾನೂನು ಸಚಿವ ಕಿರೆನ ರಿಜಿಜು ಇವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಕೊಲಿಜಿಯಮ್ ಇದು ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಮೂಲಕ ಅಭಿವೃದ್ಧಿಗೊಳಿಸಿರುವ ಪ್ರಣಾಲಿಯಾಗಿದೆ. ಇದು ನ್ಯಾಯಮೂರ್ತಿಗಳ ನಿಯುಕ್ತಿ ಮತ್ತು ವರ್ಗಾವಣೆಗೆ ಸಂಬಂಧಿಸಿದೆ.

1. ಉಚ್ಚ ನ್ಯಾಯಾಲಯದಲ್ಲಿ 1 ಸಾವಿರ 114 ನ್ಯಾಯಮೂರ್ತಿಗಳ ಹುದ್ದೆಗಳಿಗೆ ಅನುಮತಿ ನೀಡಲಾಗಿದೆ. ಅದರಲ್ಲಿ ಕೇವಲ 780 ಹುದ್ದೆ ಭರ್ತಿಗೊಳಿಸಲಾಗಿದ್ದು, 334 ಹುದ್ದೆಗಳು ಖಾಲಿ ಇವೆ. ಉಚ್ಚ ನ್ಯಾಯಾಲಯದಲ್ಲಿನ ಈ ಹುದ್ದೆಗಳ ಭರ್ತಿಗಾಗಿ ಉಚ್ಚ ನ್ಯಾಯಾಲಯದ ಕೊಲಿಜಿಯಮ್ ನ 118 ಶಿಫಾರಸ್ಸುಗಳು ಹಂತ ಹಂತವಾಗಿ ಇದ್ದು, ಇನ್ನುಳಿದ 216 ಖಾಲಿ ಸ್ಥಾನಗಳಿಗಾಗಿ ಸರಕಾರಕ್ಕೆ ಇಂದಿಗೂ ಶಿಫಾರಸ್ಸು ಪತ್ರ ದೊರೆತಿಲ್ಲ, ಎಂದು ರಿಜಿಜು ಸ್ಪಷ್ಟಪಡಿಸಿದರು.

(ಸೌಜನ್ಯ – Editorji Hindi)

2. ಕಿರೆನ ರಿಜಿಜು ಮಾತನ್ನು ಮುಂದುವರಿಸುತ್ತಾ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಹುದ್ದೆಯ ಭರ್ತಿಗಾಗಿ ಸರಕಾರ ಪ್ರಯತ್ನಿಸುತ್ತಿದೆ. ಈ ಹುದ್ದೆಗಳನ್ನು ತುಂಬಲು ಪ್ರಸ್ತಾವನೆಯನ್ನು ಕಳುಹಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಇವರಲ್ಲಿ ಸೂಕ್ತ ಅಭ್ಯರ್ಥಿಗಳ ವಿಚಾರ ಮಾಡುವಂತೆ ತಿಳಿಸಲಾಗಿದೆ. 216 ಖಾಲಿ ಹುದ್ದೆಗಳಿಗಾಗಿ ಸರಕಾರಕ್ಕೆ ಇದುವರೆಗೂ ಕೊಲಿಜಿಯಮ್ ನಿಂದ ಯಾವುದೇ ಶಿಫಾರಸ್ಸು ಸಿಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದೇ ಒಂದು ಖಾಲಿ ಹುದ್ದೆ ಇಲ್ಲ ಎಂದು ತಿಳಿಸಿದರು.