ಶ್ರೀರಾಮ ದೇವಸ್ಥಾನದ ನೆಲ ಮಾಳಿಗೆಯ ಶೇಕಡ ೭೦ ರಷ್ಟು ಕಾಮಗಾರಿ ಪೂರ್ಣ

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ದೇವಸ್ಥಾನದ ಕೆಲವು ಛಾಯಾಚಿತ್ರಗಳನ್ನು ‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕಾರ್ಯದರ್ಶಿ ಚಂಪತ ರಾಯ್ ಇವರು ಪ್ರಸಾರ ಮಾಡಿದ್ದಾರೆ. ಇದರಲ್ಲಿ ದೇವಸ್ಥಾನದ ಗರ್ಭಗುಡಿ ಮತ್ತು ನೆಲಮಾಳಿಗೆ ಕಾಣುತ್ತಿದೆ. ಇದರ ಜೊತೆಗೆ ದೇವಸ್ಥಾನದ ಗರ್ಭಗುಡಿಯ ಎಲ್ಲಾ ಕಂಬಗಳು ಕಾಣುತ್ತಿವೆ. ಪ್ರಭು ಶ್ರೀರಾಮನ ದರ್ಶನಕ್ಕಾಗಿ ಎಂದರೆ ಗರ್ಭಗುಡಿಯವರಿಗೆ ಹೋಗಲು ೩೨ ಮೆಟ್ಟಿಲಗಳು ಕಟ್ಟಿದ್ದಾರೆ. ಇದರಲ್ಲಿ ೨೪ ಮೆಟ್ಟಿಲು ಕಟ್ಟಿ ಪೂರ್ಣವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಶೇಕಡ ೭೦ ರಷ್ಟು ದೇವಸ್ಥಾನ ಕಟ್ಟಡದ ಕಾಮಗಾರಿ ಪೂರ್ಣವಾಗಿದೆ ಎಂದು ಹೇಳಿದೆ.